ತುಮಕೂರು : ಇಂದು ಉದ್ದೇಶಿತ ತುಮಕೂರು ತಾಲ್ಲೂಕು ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ನಿ., ಇದರ ಉದ್ಘಾಟನೆಯನ್ನು ನಗರದ ಬೀರೇಶ್ವರ ಕನ್ವೇನ್ಷನ್ ಹಾಲ್‌ನಲ್ಲಿ ನೆರವೇರಿಸಲಾಯಿತು. ಇದಕ್ಕೂ ಮುಂಚಿತವಾಗಿ ಸದಾಶಿವನಗರದಲ್ಲಿ ಅಧಿಕೃತ ತಾಲ್ಲೂಕು ಕಛೇರಿಯ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಎವಿಎಸ್‌ಎಸ್‌ನ ರಾಜ್ಯಾಧ್ಯಕ್ಷರಾದ ತುಂಬುಲ ರಾಮಣ್ಣನವರು ವಹಿಸಿ ಮಾತನಾಡುತ್ತಾ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಸಮುದಾಯದವರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯ, ಆದ ಪ್ರಯುಕ್ತ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗ ಸಮುದಾಯದವರು ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕ ಪ್ರಗತಿಯನ್ನು ಕಾಣಬೇಕು ಎಂದರು.
ದೇಶದಲ್ಲಿ ಅಂದಾಜು 45 ಕೋಟಿಯಷ್ಟು ಜನರು ದಲಿತ ಸಮುದಾಯಗಳಿಗೆ ಸೇರಿದವರಾಗಿದ್ದು ಅವರುಗಳೆಲ್ಲರೂ ರಾಷ್ಟ್ರೀ ಕೃತ ಹಾಗೂ ಕಾರ್ಪೋರೇಟ್ ಬ್ಯಾಂಕ್‌ಗಳಲ್ಲಿ ವ್ಯವಹಾರವನ್ನು ಮಾಡದೇ ದಲಿತ ಸಮುದಾಯದ ವತಿಯಿಂದ ಸ್ಥಾಪಿಸಲಾಗಿರುವ ಸಹಕಾರ ಸಂಘಗಳಲ್ಲಿ ವ್ಯವಹಾರವನ್ನು ಮಾಡಿದ್ದಲ್ಲಿ ನಮ್ಮ ಸಮುದಾಯಗಳ ಏಳ್ಗೆ ಸಾಧ್ಯವಾಗುತ್ತದೆ, ಜೊತೆಗೆ ಸಹಕಾರ ಸಂಘಗಳು ನಡೆಯುವುದೇ ನಮ್ಮಗಳ ಪಾಲುದಾರಿಕೆಗಳಿಂದ ಎಂಬುದನ್ನು ನಾವು ಅರಿತುಕೊಳ್ಳಬೇಕು.
ಸಹಕಾರ ಸಂಘಗಳಲ್ಲಿ ಸಾಮಾನ್ಯ ನಾಗರೀಕರು ಸಹ ಪಾಲುದಾರಿಕೆಯನ್ನು ಪಡೆಯುವುದರ ಮೂಲಕ ಅದರ ಉನ್ನತಿಗೆ ಶ್ರಮಿಸುವುದಲ್ಲದೇ ಅದನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯವಲ್ಲಿ ಕಾಳಜಿ ವಹಿಸುತ್ತಾರೆ, ಆದುದರಿಂದ ದಲಿತ ಸಮುದಾಯದವರು ಆದಷ್ಟು ಸಹಕಾರ ಸಂಘಗಳ ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಾವನ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಪಾವನರವರು ಮಾತನಾಡಿ ರಾಜ್ಯಾದ್ಯಂತ ಕಾರ್ಯಕ್ಷೇತ್ರವನ್ನು ಒಳಗೊಂಡಿರುವ ಎವಿಎಸ್‌ಎಸ್ ಶಾಖೆಯು ತುಮಕೂರಿನಲ್ಲಿ ಉದ್ಘಾಟನೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ಇದರ ಬೆಳವಣಿಗೆಗೆ ಸಮುದಾಯದ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.
ಛಲವಾದಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಭಾನುಪ್ರಕಾಶ್ ಮಾತನಾಡಿ ದಲಿತ ಸಮುದಾಯಗಳ ಮಾಲೀಕತ್ವದಲ್ಲಿ ಅಂದರೇ ಷೇರುಗಳನ್ನು ಪಡೆದು ಸಹಕಾರ ಸಂಘ / ಬ್ಯಾಂಕ್‌ಗಳು ಸ್ಥಾಪಿತವಾಗಿವೆ, ಅವುಗಳಲ್ಲಿಯೇ ನಮ್ಮ ದೈನಂದಿನ ಹಣಕಾಸು ವ್ಯವಹಾರ ಮಾಡುವುದರಿಂದ ನಮ್ಮದೇ ಸಮುದಾಯದ ಸಹಕಾರ ಸಂಘಗಳು ಬೆಳೆಯಲು ಅನುಕೂಲವಾಗುತ್ತದೆ ಬ್ಯಾಂಕ್‌ಗಳು ಬೆಳೆಯುವುದರೊಟ್ಟಿಗೆ ನಾವುಗಳು ಸಹ ಸಮಾಜದಲ್ಲಿ ಸದೃಢ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಚಾಲುಕ್ಯ ಆಸ್ಪತ್ರೆಯ ವೈದ್ಯರಾದ ಡಾ. ನಾಗಭೂಷಣ್ ಮಾತನಾಡಿ ಡಾ. ಬಿ.ಆರ್.ಅಂಬೇಡ್ಕರ್‌ರವರು ಬರೆದ ಒಂದು ಲೇಖನ ದೇಶದ ಪ್ರಮುಖ ಬ್ಯಾಂಕ್ ಆದ ಆರ್.ಬಿ.ಐ. ಸ್ಥಾಪಿತವಾಗಲು ಬುನಾದಿಯಾಗಿರುವುದು ಇದೀಗ ಇತಿಹಾಸ, ಅದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು, ಜೊತೆಗೆ ಅವರ ಮಾದರಿಯಲ್ಲಿಯೇ ನಾವು ದೂರ ಚಿಂತನೆಯನ್ನು ಮಾಡುವ ಸಮಯ ಇದೀಗ ಬಂದಿದೆ, ಏಕೆಂದರೆ ರಾಷ್ಟಿçÃಕೃತ ಸೇರಿದಂತೆ ಹಲವಾರು ಕಾರ್ಪೋರೇಟ್ ಬ್ಯಾಂಕ್‌ಗಳು ಅತೀ ಹೆಚ್ಚು ಸೇವಾ ಶುಲ್ಕವನ್ನು ಸಾಮಾನ್ಯ ಜನರ ಮೇಲೆ ಹೊರಸುವಂತಹ ಸ್ಥಿತಿಯಿದ್ದು ಆದರೆ ಸಹಕಾರ ಸಂಘಗಳಲ್ಲಿ ಹಣಕಾಸು ವ್ಯವಹಾರ ಮಾಡುವುದರಿಂದ ಇವುಗಳ ಹೊರೆ ನಮಗೆ ಆಗುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕ ನುಡಿಗಳನ್ನು ರಾಮಾಂಜನೇಯ ಎಂ.ಎನ್, ಸ್ವಾಗತವನ್ನು ಶಶಿಧರ್, ಪ್ರಾರ್ಥನೆ ಶಿವಕುಮಾರ್, ವಂದನಾರ್ಪಣೆಯನ್ನು ನಿವೃತ್ತ ಮುಖ್ಯ ಶಿಕ್ಷಕರಾದ ರಂಗನಾಥಯ್ಯ ನೆರವೇರಿಸಿದರು, ಇದೇ ಸಂದರ್ಭದಲ್ಲಿ ಪರಿಯಾಪಟ್ಟಣ ಎವಿಎಸ್‌ಎಸ್ ಅಧ್ಯಕ್ಷರಾದ ರಾಮು, ಮಂಡ್ಯ ಎವಿಎಸ್‌ಎಸ್ ಅಧ್ಯಕ್ಷರಾದ ರಾಜೇಶ್, ಶಿವಶೈಕ್ಷಣಿಕ ಸೇವಾಶ್ರಮದ ಅಧ್ಯಕ್ಷರಾದ ಲೇಪಾಕ್ಷಪ್ಪ, ತುಮಕೂರು ಎವಿಎಸ್‌ಎಸ್‌ನ ಪದಾಧಿಕಾರಿಗಳಾದ ಧರ್ಮವೀರ ಕೆ.ಹೆಚ್, ಕಂಬಯ್ಯ, ನಾಗರಾಜು, ಮಾರುತಿ ಪ್ರಸಾದ್ ಕೆ.ಟಿ, ಇಂದ್ರಕುಮಾರ್ ಡಿ.ಕೆ, ಸುರೇಶ್, ಶ್ರೀಮತಿ ಧನಲಕ್ಷಿö್ಮÃ ಎಂ.ಆರ್, ಶ್ರೀಮತಿ ಜಯಂತಿ, ಸಾಕ್ಷಿ ಜಗನ್ನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.