ಮೈಸೂರು-ಲಾಭದಲ್ಲಿ ಹಂಚ್ಯಾ ಹಾಲು ಉತ್ಪಾದಕರ ಸಂಘ-ಜಿಲ್ಲೆಯಲ್ಲಿಯೇ ಸದೃಢ ಹಾಲು ಉತ್ಪಾದಕರ ಸಂಘವಾಗಿ ಬೆಳೆಯಲಿ-ಕೆ.ಉಮಾಶಂಕರ್

ಮೈಸೂರು:ರೈತರಿಂದ ಸ್ಥಾಪನೆಯಾದ ಹಾಲು ಉತ್ಪಾದಕರ ಸಂಘವು ರೈತರ ಅಭಿವೃದ್ಧಿಗೆ ಕಟಿಬದ್ಧವಾಗಿದೆ.ನಾನು ಕಳೆದ 30 ವರ್ಷಗಳ ಹಿಂದೆ ನಿಮ್ಮಂತೆಯೇ ಸದಸ್ಯನಾಗಿ ಬಂದು ನಿಮ್ಮೆಲ್ಲರ ಸಹಕಾರದಿಂದ ಈಗ ನಿರ್ದೇಶಕನಾಗಿದ್ದೇನೆ.ಹೀಗಾಗಿ ನಿಮ್ಮೆಲ್ಲರಿಗೂ ಎನೆಲ್ಲಾ ಸೌಲಭ್ಯ ನೀಡಲು ಸಾಧ್ಯವೋ ಅದನ್ನು ಪ್ರಾಮಾಣಿಕವಾಗಿ ಒದಗಿಸಲು ಸಿದ್ಧವಾಗಿರುವುದಾಗಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಕೆ.ಉಮಾಶಂಕರ್ ಹೇಳಿದರು.

ಹಂಚ್ಯಾ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.1975-76ರಲ್ಲಿ ಪ್ರಾರಂಭಗೊoಡ ಮೈಸೂರು ತಾಲ್ಲೂಕಿನ ಹಂಚ್ಯಾ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು 2022-24 ನೇ ಸಾಲಿನಲ್ಲಿ 2 ಲಕ್ಷದ 87 ಸಾವಿರ 782 ರೂ.ಗಳ ನಿವ್ವಳ ಲಾಭದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.ಹೀಗೆ ಪ್ರತಿ ವರ್ಷವೂ ಲಾಭವನ್ನು ಮಾಡುತ್ತ ಜಿಲ್ಲೆಯಲ್ಲಿಯೇ ಸದೃಢ ಹಾಲು ಉತ್ಪಾದಕರ ಸಂಘವಾಗಿ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.

ಮೈಸೂರು ತಾಲ್ಲೂಕು ಹಾಲು ಒಕ್ಕೂಟದ ಮೇಲ್ವಿಚಾರಕರಾದ ಸಂತೋಷ್ ಮಾತನಾಡಿದರು.

ಮೈಸೂರು ಸಹಕಾರ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ರಾಸುಗಳ ಆರೈಕೆ, ಒಕ್ಕೂಟದ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು.

ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಂ.ಪರಮೇಶ್ ಸಂಘದ ವಾರ್ಷಿಕ ಲೆಕ್ಕ ಪರಿಶೋಧನ ವರದಿಯನ್ನು ಸರ್ವಸದಸ್ಯರ ಸಭೆಗೆ ಮಂಡಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತಮ್ಮೇಗೌಡರ ಅಧ್ಯಕ್ಷೆಯಲ್ಲಿ ಸಭೆ ನಡೆಯಿತು.ಉಪಾಧ್ಯಕ್ಷರಾದ ಎಚ್.ಸಿ.ನಾಗೇಂದ್ರಮೂರ್ತಿ,ನಿರ್ದೇಶಕರಾದ ಎಚ್.ಎಂ.ಮಲ್ಲಿಕಾರ್ಜುನಯ್ಯ,ವಿಷಕಂಠೇಗೌಡ,ಮಹದೇವಗೌಡ, ಚನ್ನಬೋರೇಗೌಡ,ತಿಮ್ಮಶೆಟ್ಟಿ,ವೆಂಕಟಶೆಟ್ಟಿ,ಸಿದ್ದಲಿಂಗು,ರುದ್ರಮ್ಮ,ಲಕ್ಷ್ಮಿ,ಶಾರದಮ್ಮ,ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ರಾಮಚಂದ್ರ, ಹಾಲು ಪರೀಕ್ಷಕ ಶಂಭುಲಿ0ಗಪ್ಪ ಇನ್ನಿತರರು ಉಪಸ್ಥಿತರಿದ್ದರು.

————–-ಮಧುಕುಮಾರ್
/

Leave a Reply

Your email address will not be published. Required fields are marked *

× How can I help you?