ತುಮಕೂರು– ನಗರದ ಜಯನಗರ ಪೂರ್ವದಲ್ಲಿರುವ ಹೆಲನ್ ಕೆಲರ್ ಶಾಲೆಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನ ಸರ್ದಾರ್ ವಲ್ಲಭಾಯಿ ಸೊಸೈಟಿ ಮತ್ತು ಕಾಮದೇನು ಸ್ವಾಸ್ಥ್ಯ ಕೇಂದ್ರ ಇವರ ಸಹಯೋಗದಲ್ಲಿ ಅಕ್ಯುಪಂಕ್ಚರ್ ಮತ್ತು ಅಕ್ಯು ಪ್ರೇಶರ್ ನೀಡುವ ಮೂಲಕ ಉಚಿತವಾಗಿ ತಪಾಸಣೆ ಮಾಡಲಾಯಿತು.
ಬೆಳಿಗ್ಗೆಯಿಂದ ವಿಶೇಷ ಚೇತನರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ತಪಾಸಣೆ ನಡೆಸಲಾಯಿತು. ಬಾಡಿಮಸಾಜ್, ಇಂಡೆಕ್ಟ್, ಬ್ಲಡ್ ಶುಗರ್, ರಕ್ತದೊತ್ತಡ, ಬಾಡಿ ಸ್ಕ್ಯಾನ್, ಮಾತು ಮತ್ತು ಶ್ರವಣ ಸಮಾಲೋಚನೆಯನ್ನು ನಡೆಸಲಾಯಿತು ಎಂದು ಹೆಲೆನ್ ಕೆಲರ್ ಶಾಲೆಯ ಮುಖ್ಯಸ್ಥರಾದ ಶ್ರೀಮತಿಗಾಯತ್ರಿರವೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಬಾಲಕೃಷ್ಣರೆಡ್ಡಿ, ಡಾ.ಶ್ವೇತ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
- ಕೆ.ಬಿ.ಚಂದ್ರಚೂಡ