ಹಾಸನ-ಭಾರತೀಯ-ಶಿಕ್ಷಣ ಪದ್ದತಿಯನ್ನು-ರಿಪೇರಿ-ಮಾಡಬೇಕಿದೆ – ಅರವಿಂದ್‌ ಚೊಕ್ಕಾಡಿ

ಹಾಸನ – ಒಬ್ಬ ಶಿಕ್ಷಕನಾಗಲು ಉಪನ್ಯಾಸಕನಾಗಲು ಓದಿನ ಅರ್ಹತೆ ಕೇಳುತ್ತಾರೆ. ಆದರೆ ಯಾವುದೇ ಶೈಕ್ಷಣಿಕ ಅರ್ಹತೆ ಪಡೆಯದ ವ್ಯಕ್ತಿಗಳು ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗುತ್ತಿದ್ದಾರೆ. ಅಂತವರು ತಮಗೆ ತೋಚಿದ್ದನ್ನೆಲ್ಲಾ ಪಠ್ಯದಲ್ಲಿ ಸೇರಿಸಿ ತಿಪ್ಪೇಗುಂಡಿ ಮಾಡುತ್ತಿದ್ದಾರೆ ಎಂದು ಅವರಿಂದ್‌ ಚೊಕ್ಕಾಡಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಆರ್. ಪಿ. ವೆಂಕಟೇಶಮೂರ್ತಿ ನೇತೃತ್ವದಲ್ಲಿ ನಡೆದ ಬದುಕಿಗಾಗಿ ಶಿಕ್ಷಣ ಏಕೆ ಹೇಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತದಲ್ಲಿ 59 ಜನರು ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿದ್ದರು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರೈತರಿಗೆ ಕೃಷಿ ಹಾಗೂ ಕೃಷಿಕರಿಗೆ ಸ್ಥಾನ ಇಲ್ಲ ಎಂದು ವಿಷಾದಿಸಿದ ಅವರು ರೈತರು ಕಾರ್ಮಿಕರು ಎಲ್ಲರಿಗೂ ಆರ್ಥಿಕ  ಭದ್ರತೆಹಾಗೂ ಸಮಾನ ಸ್ಥಾನಮಾನ ನೀಡುವುದಾದರೆ ಕೆಲವೇ ಹುದ್ದೆಗಳನ್ನು ಹುಡುಕಿಕೊಂಡು ಹೋಗುವುದು ತಪ್ಪುತ್ತದೆ ಎಂದು ತಿಳಿಸಿದರು.

 ಹೇಳಿದ ಅವರು ಮಕ್ಕಳಿಗೆ ಪಠ್ಯದ ಹೊರೆ ಕಡಿಮೆ ಮಾಡಬೇಕು ಶಿಕ್ಷಣ ಕ್ಷೇತ್ರದಲ್ಲಿ  ಕೆಲಸಮಾಡಿದವರನ್ನು ಪಠ್ಯಪುಸ್ತಕ ರಚನಾ ಸಮಿತಿಗೆ ಸೇರಿಸಬೇಕೆಂದು ಸಲಹೆ ನೀಡಿದರು.

ನಮ್ಮ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು,  ಕಲಿಕೆಯಲ್ಲಿ ಹಿಂದಿರುವ ಶೇಕಡ ನಾಲ್ಕರಿಂದ ಐದರಷ್ಟು ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಲಿಸಬೇಕಾದ ಒತ್ತಡದಲ್ಲಿದ್ದಾರೆ. ಬಹು ಸಂಖ್ಯಾತ ಸರಾಸರಿ ಮಟ್ಟದ ವಿದ್ಯಾರ್ಥಿಗಳಿಗೆ ಗಮನ ಕೊಡಲು ಆಗುತ್ತಿಲ್ಲ. ಈ ವ್ಯವಸ್ಥೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳುತ್ತಾರೆ.

ಕ್ರೀಡಾಶಾಲೆ ಸೈನಿಕ ಶಾಲೆ ನವೋದಯ ಶಾಲೆ, ಮೊರಾರ್ಜಿ ಶಾಲೆ ಹೀಗೆ ವಿಭಿನ್ನ ಶಾಲೆಗಳಿಗೆ ಸಾಮಾನ್ಯ ನೀತಿ ತರಲು ಸಮನ್ವಯತೆ ಜಾರಿಗೆ ತರಲು ಒಂದು ವ್ಯವಸ್ಥೆ ಆಗಬೇಕೆಂದೂ  ತಿಳಿಸಿದರು.

  ಉತ್ತಮ ಫಲಿತಾಂಶ ತರಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕರನ್ನು ಅಪರಾಧಿಯಂತೆ ನೋಡಲಾಗುತ್ತಿದೆ ಈ ಮನೋಭಾವ ಅಳಿಯಬೇಕು ಶಿಕ್ಷಕರನ್ನು ಮನುಷ್ಯರಂತೆ ನೋಡಬೇಕೆಂದು ಅವರು ಹೇಳಿದರು.

  ಮಕ್ಕಳು ಇತರೆ ಕೌಶಲಗಳಲ್ಲಿ ಮುಂದಿರುತ್ತಾರೆ.ಅಂತಹ ಮಕ್ಕಳಿಗಾಗಿ ಪ್ರತ್ಯೇಕ ಶಾಲಾ ವ್ಯವಸ್ಥೆ ಮಾಡುವ ಕುರಿತು ಚಿಂತಿಸಬೇಕೆಂದು ಚೊಕ್ಕಾಡಿ ಸಲಹೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಗಮನ ಕೊಡಬೇಕೆಂದರೆ ಆಡಳಿತ ವ್ಯವಸ್ಥೆಗೆ ಪ್ರತ್ಯೇಕ ಸಿಬ್ಬಂದಿ ಇರಲೇ ಬೇಕು. ಸರ್ಕಾರಿ ಆಗಲಿ ಅಥವಾ ಖಾಸಗಿ ಆಗಲಿ ಆಟದ ಮೈದಾನ ಇರಲೇಬೇಕು. ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದರೆ ಮಾತ್ರ ಅವರ ಸಾಮರ್ಥ್ಯದ ಸದ್ವಿನಿಯೋಗ ಆಗಿ, ಪಠ್ಯದ ಕಲಿಕೆಯಲ್ಲೂ ಮುಂದೆ ಬರುತ್ತಾರೆ. ನಮ್ಮಲ್ಲಿ

ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಬರಹಗಾತಿ ರೂಪ ಹಾಸನ್ ಅವರು,ರಾಜ್ಯದಲ್ಲಿ ಕೆಲವೇ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗಲಿವೆ ಎಂಬ ಆತಂಕ ವ್ಯಕ್ತಪಡಿಸಿದರು.ಸರ್ಕಾರಿ ಶಾಲೆಗಳು ಇಲ್ಲದಿದ್ದರೆ ಬಡವರ ಮಕ್ಕಳು ಎಲ್ಲಿ ಓದಬೇಕೆಂದು ಪ್ರಶ್ನಿಸಿದರು.

ರಾಜ್ಯದಲ್ಲಿ 6400 ಏಕೋಪಾಧ್ಯಾಯ ಶಾಲೆಗಳಿಗೆ 50 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ 23 342ಶಾಲೆಗಳಿವೆ.ಆರ್ ಟಿ ಇಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ 3363 ಮಕ್ಕಳಿಗೆ ರಾಜ್ಯ ಸರ್ಕಾರ 364 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ವಿವರಿಸಿದ ಅವರು,  ಸರ್ಕಾರಿ ವ್ಯವಸ್ಥೆ ಬಲಪಡಿಸಲು ಖಾಲಿ ಇರುವ 43133 ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ಆಗಬೇಕು.2028ರ ಹೊತ್ತಿಗೆ 24807ಪ್ರೌಢಶಾಲಾ ಶಿಕ್ಷಕರು ನಿವೃತ್ತಿಯಾಗಲಿದ್ದಾರೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಎಸ್ಜಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ನೀಡಿದ 90 ಪುಟಗಳ ವರದಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

 ಸಂವಾದದಲ್ಲಿ ಗುರುದತ್ ರಾಜ್ಡಾ. ತೇಜಸ್ವಿ, ಧರ್ಮೇಶ್ ಬಿ. ಎಸ್ .ದೇಸಾಯಿ, ತಿಮೇಶ್ ಪ್ರಭು, ಹುಲ್ಲೇಕೆರೆ ಕುಮಾರ್, ಲಕ್ಷ್ಮೀದೇವಿ ದಾಸಪ್ಪ, ಪ್ರಮೀಳ, ವಿಶ್ವಪಥ ಬಳಗದ

ಆರ್. ಪಿ. ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು ಮೋಹನ್‌ ಮಟ್ಟನವಿಲೆ ಸೃಜನ್‌, ಬಾಲ್‌ ರಾಜ್‌, ವನಜಾ ಸುರೇಶ್‌ ಪೃಥ್ವಿ ಎಂ.ಜಿ ರಮೇಶ್‌ ಹಾಸನ್‌ ಇನ್ನಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?