ಬೇಲೂರು- ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹೆಸರಾದಂತಹ 24×7.ಸಮಾಜ ಸೇವ ತಂಡದ ಸಕ್ರಿಯ ಕಾರ್ಯಕರ್ತ. ಸುಜುಕಿ ಶೋರೂಮ್ ಮಾಲೀಕ ಫಾಜಿಲ್ ಪಾಷಾ, ಹಾಸನದಿಂದ ಬೇಲೂರಿಗೆ ತಮ್ಮ ಕಾರಿನಲ್ಲಿ ಕುಟುಂಬ ಸಮೇತ.ಪ್ರಯಾಣಿಸುತ್ತಿದ್ದಾಗ . ಸಂಕ್ಕೇನಹಳ್ಳಿ ಸಮೀಪಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ತನ್ನ ಮಡದಿಯ ಕಾಲು ಮೂಳೆ ಮುರಿದಿದ್ದು ತಾಯಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಹಾಸನದ ಜನಪ್ರಿಯಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಎಚ್ ಕೆ ಸುರೇಶ್. ಹಾಸನ ಜಿಲ್ಲೆಯ ಹೆಸರಾಂತ 24×7.ಸಮಾಜ ಸೇವ ತಂಡದ ಸಕ್ರಿಯ ಕಾರ್ಯಕರ್ತ ಫಾಸಿಲ್ ರವರ ನಿಧಾನದ ಸುದ್ದಿ ತಿಳಿದು, ಆಘಾತವಾಗಿದೆ. ಬೇಲೂರಿಗೆ ತುಂಬಲಾರದ ನಷ್ಟ. ಈ ಸಮಾಜ ಸೇವೆ ತಂಡದವರ ಸೇವೆ ಮಹಾಮಾರಿ ಕೊರೋನ ಸಂದರ್ಭದಲ್ಲಿ ಮೃತಪಟ್ಟ ಶವಗಳ ಗೌರವಯುತ ಶವ ಸಂಸ್ಕಾರ ನಿರ್ವಹಿಸಿದ್ದಾರೆ. ಯಾವುದೇ ಪಲಪೇಕ್ಷೆ ಇಲ್ಲದೆ ಅನಾಥ ಶವಗಳ ಶವ ಸಂಸ್ಕಾರ ಮತ್ತು ಬೇಲೂರಿನಲ್ಲಿ ಸಕ್ರಿಯವಾಗಿ ಸಮಾಜ ಸೇವೆ ಮಾಡಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ ಎಂದರು.

ಮಾಜಿ ಸಚಿವ ಶಿವರಾಂ ಕಾಂಗ್ರೆಸ್ ಮುಖಂಡ ಗ್ರಾನೆಟ್ ರಾಜಶೇಖರ್. ಮಾಜಿ ಶಾಸಕ ಕೆಎಸ್ ಲಿಂಗೇಶ್. ತಹಸಿಲ್ದಾರ್ ಮಮತಾ.ಬೇಲೂರು ಹಳೇಬೀಡು ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ತೋಫಿಕ್. ಎಂಆರ್ ವೆಂಕಟೇಶ್. ಪುರಸಭಾ ಅಧ್ಯಕ್ಷ ಎ ಆರ್ ಅಶೋಕ್. ಮಾಜಿ ಅಧ್ಯಕ್ಷ ಶಾಂತಕುಮಾರ್. ಜಮಾಲುದ್ದೀನ್. ದಸಂಸ ಮುಖಂಡಅಬ್ದುಲ್ ಸಮದ್.24×7 ಸಮಾಜ ಸೇವ ತಂಡದ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.