ಮೈಸೂರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಶನ್ ನ ಮೈಸೂರು ಜಿಲ್ಲಾ ಮತ್ತು ತಾಲೂಕು ಘಟಕದ ನೂತನ ಕಚೇರಿ ಹಾಗೂ ಅರ್ಚಕರಿಗೆ ಉಚಿತ ಜೀವ ವಿಮೆ ವನ್ನು ಉಚಿತವಾಗಿ ವಿತರಣಾ ಕಾರ್ಯಕ್ರಮವನ್ನು ವಿದ್ಯಾರಣ್ಯಪುರಂ ಅಂದಾನಿ ಸರ್ಕಲ್ ನಲ್ಲಿ
ಮಾರ್ಚ್ 4 ರಂದು ಸಂಜೆ 5:00 ಗಂಟೆಗೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ದೇಶಿಕ್ ತಿಳಿಸಿದ್ದಾರೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಸಿಂಹ , ಮಾಜಿನಗರ ಪಾಲಿಕಾ ಸದಸ್ಯರಾದ ಮ ವಿ ರಾಮಪ್ರಸಾದ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಗೌರವಾಧ್ಯಕ್ಷ ವೇ. ಬ್ರ. ಶ್ರೀ ಎಸ್ ಲಕ್ಷ್ಮೀಶ ಹಾಗೂ ಪದಾಧಿಕಾರಿಗಳು ಮತ್ತು ಇನ್ನಿತರರು ಭಾಗವಹಿಸಲಿದ್ದಾರೆ