ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸಂದೀಪ್ ಮತ್ತು ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಸೊಸೈಟಿಗೆ ಅವಿರೋಧವಾಗಿ ಆಯ್ಕೆಯಾದ ನೂತನ ನರ‍್ದೇಶಕರನ್ನ ಬೂಕನಕೆರೆ ಗ್ರಾಮದಲ್ಲಿ ಅಭಿನಂದಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ ರಾಮೇಗೌಡ ನಮ್ಮ ಗ್ರಾಮದ ಸೊಸೈಟಿ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ರ‍್ಥಿಯಾಗಿದ್ದ ಸಂದೀಪ್ ಲಕ್ಷ್ಮಮ್ಮ ವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಕಾಂಗ್ರೆಸ್ ಬೆಂಬಲಿತ ಅಭ್ರ‍್ಥಿಗಳು ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಜಯಗಳಿಸುವ ವಿಶ್ವಾಸವಿದೆ.ಸೊಸೈಟಿ ವ್ಯಾಪ್ತಿಗೆ ಬರುವ ಗ್ರಾಮಗಳ ರೈತರ ಕಷ್ಟಗಳಿಗೆ ನಾನು ಮತ್ತು ಕಾಂಗ್ರೆಸ್ ಮುಖಂಡರು ಸ್ಪಂದಿಸಿದ್ದೇವೆ ಹಾಗೂ ಕಾಂಗ್ರೆಸ್ ರ‍್ಕಾರ ನೀಡುತ್ತಿರುವ ಜನಸ್ನೇಹಿ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ ಹಾಗಾಗಿ ನಮ್ಮ ಅಭ್ರ‍್ಥಿಗಳ ಪ್ರಚಂಡ ಗೆಲುವು ಸಾಧಿಸಲಿದ್ದಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ಟಿ ವೆಂಕಟೇಶ್ ಬೂಕನಕೆರೆ ಹೋಬಳಿಯ ಕಾಂಗ್ರೆಸ್ ಮುಖಂಡರಾದ ಬೂಕನಕೆರೆ ವಿಜಯ ರಾಮೇಗೌಡ, ಪುರಸಭಾ ಸದಸ್ಯ ಕೆ.ಬಿ ಮಹೇಶ್,ಬಲ್ಲೇನಹಳ್ಳಿ ರಮೇಶ್, ನೇತೃತ್ವ ಹಾಗೂ ಕರ‍್ಯರ‍್ತರ ಸಹಕಾರದಿಂದ ನಮ್ಮ ಬೆಂಬಲಿತ ಅಭ್ರ‍್ಥಿಗಳಲ್ಲಿ ಸಂದೀಪ್ ಲಕ್ಷ್ಮಿ ಮ್ಮ ಆಯ್ಕೆಯಾಗಿದ್ದಾರೆ ಉಳಿದ ಎಲ್ಲಾ ಅಭ್ರ‍್ಥಿಗಳ ಗೆಲುವಿಗೆ ರೈತರಲ್ಲಿ ರ‍್ಕಾರದ ಯೋಜನೆಗಳ ಬಗ್ಗೆ ನಾವೆಲ್ಲರೂ ಒಗ್ಗಟ್ಟಿನಿಂದ ಹರಿವು ಮೂಡಿಸಿದರೆ ನಮ್ಮ ಅಭ್ರ‍್ಥಿಗಳ ಅಭೂತಪರ‍್ವ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ನೂತನ ನರ‍್ದೇಶಕರನ್ನು ಕಾಂಗ್ರೆಸ್ ಕರ‍್ಯರ‍್ತರು,ಅಭಿಮಾನಿಗಳು,ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂರ‍್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ. ಬಿ ಮಹೇಶ್, ಕಾಂಗ್ರೆಸ್ ಮುಖಂಡ ಬಲ್ಲೆನಹಳ್ಳಿ,ಅಡಿಕೆ ಮಹೇಶ್,ಐಚನಹಳ್ಳಿ ಶಿವಣ್ಣ,ಐಚನಹಳ್ಳಿ ಕೆಈಬಿ ರಾಮು,ದಯಾನಂದ್,ರವಿ ರಾಮೇಗೌಡ,ಕೆಡಿಪಿ ಸದಸ್ಯ ಮಲ್ಲಿಕರ‍್ಜುನ್, ಶ್ಯಾಮ್, ಅಜಯ್, ಬಸವರಾಜು, ಸೇರಿದಂತೆ ಉಪಸ್ಥಿತರಿದ್ದರು.
– ಮನು ಮಾಕವಳ್ಳಿ, ಕೆ ಆರ್ ಪೇಟೆ