ಚಿಕ್ಕಮಗಳೂರು : ತಾಲೂಕಿನ ಶಿರವಾಸೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಗಜಾನನ ಕಲಾ ಮಂದಿರದಲ್ಲಿ ಗುರುವಂದನಾ ಹಾಗು ಹಳೆ ವಿಧ್ಯಾರ್ಥಿಗಳ ಸಮಾಗಮ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಶಿರವಾಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀರಘುನಾಥ್ ಅವರು ಇಂದು ಶಾಲೆಯಲ್ಲಿ ಗುರುವಂದನಾ ಹಾಗು ಹಳೆ ವಿಧ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಸುತ್ತಿರುವುದು ಸಂತಸ ತಂದಿದೆ.ಈ ಶಾಲೆಯಲ್ಲಿ ಕಲಿತ ಪ್ರತಿಯೊಬ್ಬ ವಿಧ್ಯಾರ್ಥಿಗು ಇದು ಹೆಮ್ಮೆಯ ವಿಷಯ. ನಮ್ಮಗೆ ವಿಧ್ಯೆ ಕಲಿಸಿದ ಗುರುಗಳೀಗೆ ಇಂದು ಹಳೆ ವಿಧ್ಯಾರ್ಥಿಗಳ ಸಂಘದಿಂದ ಸನ್ಮಾನ ಕಾರ್ಯಕ್ರಮ ನಡೆಸಿಕೊಡಗುತ್ತಿದೆ. ಪ್ರತಿಯೊಬ್ಬರ ಬದುಕಲ್ಲಿ ಗುರುಗಳ ಪಾತ್ರ ಮಹತ್ತರವಾಗಿದೆ.
ಇಂದು ಈ ಶಾಲೆಯಲ್ಲಿ ವಿಧ್ಯೆ ಕಲಿತವರು ಹೊರಗಿನ ಆನೇಕ ಊರುಗಳಲ್ಲ ಪಟ್ಟಣಗಳಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಅವರ ಬೆಳವಣಿಗೆಗೆ ಈ ಶಾಲೆ ಅಪಾರ ಕೊಡುಗೆ ನೀಡಿದೆ ಇಂದು ಶಾಲೆಯಲ್ಲಿ ಹಳೆಯ ವಿಧ್ಯಾರ್ಥಿಗಳು ಒಂದೆಡೆ ಸೇರಿ
ಈ ಕಾರ್ಯಕ್ರಮ ಆಚರಿಸುತ್ತಿರುವುದು ಖುಷಿಯ ವಿಷವಾಗಿದೆ ಎಂದು ತಿಳಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಗುರುಗಳೀಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಹಿರಿಯ ವಿಧ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ವೇಳೆ ಹಿರಿಯ ವಿಧ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.