ಹೊಳೆನರಸೀಪುರ: ತಾಲ್ಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಚುನಾವಣೆಗೆ ಮಾ.4 ರಂದು ನಿಗದಿ ಆಗಿತ್ತು. ಅಧ್ಯಕ್ಷ, ಪ್ರಾಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಉಪಾಧ್ಯಕ್ಷರು, ಇಬ್ಬರು ಕಾರ್ಯದರ್ಶಿ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯಲ್ಲಿ, ಒಂದೊಂದೇ ನಾಮಪತ್ರ ಸಲ್ಲಿಕೆಯಾದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆ ಯಾದರು.
ಅಧ್ಯಕ್ಷ ಸ್ಥಾನಕ್ಕೆ ಎಚ್.ಬಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎ. ರಾಮಕೃಷ್ಣ, ಖಜಾಂಚಿ ಸ್ಥಾನಕ್ಕೆ ಎಚ್.ವಿ. ರವಿಕುಮಾರ್, 2 ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎ. ರವಿಕುಮಾರ್, ಡಿ.ಕೆ. ವಸಂತಯ್ಯ, 2 ಕಾರ್ಯದರ್ಶಿ ಸ್ಥಾನಕ್ಕೆ ಎಚ್.ಟಿ. ಸುದರ್ಶನ್, ಎಚ್.ಜಿ. ವೆಂಕಟೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆಗಿದ್ದ ಹಾಸನ ಜಿಲ್ಲಾ ಪತ್ರಕರ್ತಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಉಪಾಧ್ಯಕ್ಷ ಮೋಹನ್ ತಾಲ್ಲೂಕು ಸಂಘದ ಎಲ್ಲಾ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆ ಆದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆ ಆಗಿದ್ದಾರೆಂದು ಘೋಷಿಸಿದರು.

ಈ ವೇಳೆ ನೂತನ ಅಧ್ಯಕ್ಷ ಎಚ್.ಬಿ. ವೆಂಕಟೇಶ್ ಮಾತನಾಡಿ, ತಾಲ್ಲೂಕು ಪತ್ರಕರ್ತರ ಸಂಘದಲ್ಲಿ ಹಲವು ದಶಕಗಳಿಂದ ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆ ಆಗುತಿದ್ದು, ಸಂಘದ ಅಧ್ಯಕ್ಷ ಎಚ್.ವಿ. ಸುರೇಶ್ಕುಮಾರ್ ಈ ಬಾರಿಯೂ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಸೂಕ್ತಮಾರ್ಗದರ್ಶನ ನೀಡಿ ಎಲ್ಲ ಆಯ್ಖೆಯನ್ನು ಸೂಸೂತ್ರಗೊಳಿಸಿದರು. ಈ ಹಿಂದೆ ಅಧ್ಯಕ್ಷರಾಗಿದ್ದ ಎನ್.ಎಸ್. ರಾಧಾಕೃಷ್ಣ, ಎಚ್.ವಿ. ಸುರೇಶ್ಕುಮಾರ್ ತಾಲ್ಲೂಕು ಪತ್ರಕರ್ತ ಸಂಘವನ್ನು ಅತ್ಯಂತ ಸಮರ್ಥವಾಗಿ ಸಂಘವನ್ನು ಮುನ್ನೆಡೆಸಿ, ಸಂಘದ ಸದಸ್ಯರಿಗೆ ತಾಲ್ಲೂಕಿನಲ್ಲಿ ಗೌರವಬರುವಂತೆ ಸಂಘವನ್ನು ನಿರ್ವಹಿಸಿದ್ದಾರೆ. ನಾವೂ ಕೂಡ ಸಂಘವನ್ನು ಇದೇ ರೀತಿ ಮುಂದು ವರೆಸೋಣ ಎಂದರು, ಉಳಿದ ಎಲ್ಲ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆಮಾಡಲಾಗುವುದು ಎಂದು ತಿಳಿಸಿದರು