ಹಾಸನ: ವಿಭಿನ್ನ ಸಂಸ್ಕೃತಿಯ ಸಮ್ಮಿಲನವೇ ನಮ್ಮ ಭಾರತೀಯ ಸಂಸ್ಕೃತಿಗೆ ಗರಿಮೆ, ಅಂತಹ ವೈಭವ ಪೂರಕ ಸಂಸ್ಕೃತಿಗೆ ಅಡಿಪಾಯ ಮಾಡಿ ಕೊಡುವುದು ಎಲ್ಲ ಕರ್ತವ್ಯವಾಗಿದೆ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಟೈಮ್ಸ್ ಗಂಗಾಧರ್ ಅಭಿಪ್ರಾಯಪಟ್ಟರು.
ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಈಚೆಗೆ ನಡೆದ ಟೈಮ್ಸ್ ಭೋಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆ ಹಾಗೂ ಕುಟುಂಬಗಳು ಮಕ್ಕಳಿಗೆ ಶಾಲಾ ಪಠ್ಯ ಚಟುವಟಿಕೆಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಇಂದು ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ. ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
ನಮ್ಮ ದೇಶದಲ್ಲಿ ಹಲವು ಬಗೆಯ ಸಂಸ್ಕೃತಿಯನ್ನು ನಾವು ಕಾಣಬಹುದಾಗಿದ್ದು, ಎಲ್ಲಾ ಸಂಸ್ಕೃತಿಗಳಲ್ಲಿ ಗುರು ಹಿರಿಯರನ್ನು ಹಾಗೂ ಶಿಕ್ಷಕರನ್ನು ಗೌರವಿಸುವುದನ್ನು ತಿಳಿಸಿದೆ. ಅದರಂತೆ ಮಕ್ಕಳಿಗೆ ಓದಿನ ಜೊತೆ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಮೂಲ ಉದ್ದೇಶವನ್ನು ತಿಳಿಸಿಕೊಡಬೇಕು. ಗುರು ಹಿರಿಯರೊಂದಿಗೆ ಹೇಗೆ ನೆಡೆದುಕೊಳ್ಳಬೇಕು, ಯಾರೊಂದಿಗೆ ಹೇಗೆ ಮಾತನಾಡಬೇಕು ಹೀಗೆ ಎಲ್ಲಾವು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ತಿಳಿಸಿಕೊಡಬೇಕು ಎಂದರು.

ಇದಲ್ಲದೇ ಮಕ್ಕಳಿಗೆ ತಿನ್ನುವ ಆಹಾರ ಪದಾರ್ಥಗಳ ಬಗ್ಗೆ ಗೌರವಿಸುವುದನ್ನು ತಿಳಿಸಿಕೊಡಬೇಕಾದ ಇಂದು ಅನಿವಾರ್ಯತೆ ಇದೆ. ದೇಶದಲ್ಲಿ ಇತ್ತೀಚೆಗೆ ಆಹಾರ ಪದಾರ್ಥವನ್ನು ವ್ಯರ್ಥ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ತಮ್ಮ ಸಂಸ್ಕೃತಿ ಸಂಸ್ಕಾರದ ಅರಿವು ಮೂಡಿಸುವ ಸಲುವಾಗಿ ವಿಜೃಂಭಣೆಯಿಂದ ಹಬ್ಬದೂಟವನ್ನು ಶಾಲೆಯಲ್ಲಿ ಆಯೋಜಿಸಲಾಗಿದೆ.
ಶಿಕ್ಷಕರೆಲ್ಲರೂ ಒಟ್ಟಾಗಿ ಮಕ್ಕಳೊಂದಿಗೆ ಮನಮಂದಿಯಂತೆ ಒಟ್ಟಾಗಿ ಕುಳಿತು ಆಹಾರ ಸೇವಿಸಿದರು. ಶಾಲೆಯ ಸುಮಾರು 15೦೦ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಊಟ ಸವಿಯುವ ಮೂಲಕ ವಿದ್ಯಾರ್ಥಿಗಳ ಒಂದು ಅವಿನಾಭಾವ ಸಂಬಂಧಕ್ಕೆ ಹೆಗ್ಗುರುತಾಗಿ ಕಾಣುತ್ತದೆ. ಮಕ್ಕಳಲ್ಲಿ ಬಾಳೆ ಎಲೆ ಊಟದ ಪ್ರಾಮುಖ್ಯತೆ ಪ್ಲಾಸ್ಟಿಕ್ ಬಳಕೆನ್ನು ಕಡಿಮೆ ಮಾಡುವುದು ಹಾಗೂ ಅನ್ನದ ಮಹತ್ವ ತಿಳಿಸುವ ಮಹಾ ಉದ್ದೇಶವಾಗಿದೆ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಈ ತರನಾದ ಹಲವು ಮಾನವೀಯ ಮೌಲ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕರು ಹಾಗೂ ಇತರರು ಹಾಜರಿದ್ದರು.