ತುಮಕೂರು-ಪ್ರಕೃತಿಯ-ಧರ್ಮ-ಉಳಿಸಲು-ಸಾವಯವ-ಕೃಷಿ- ಮಾಡಿ-ಕರಿಬಸವ-ದೇಶೀಕೇಂದ್ರ-ಸ್ವಾಮೀಜಿಗಳು

ತುಮಕೂರು: ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದ ಗಾಂಧಿ ರೈತ ವಿಜ್ಞಾನ ಕೇಂದ್ರ-ಜೈವಿಕ ಸಂಪನೂಲಕ ಕೇಂದ್ರವನ್ನು ಶನಿವಾರ ತಿಪಟೂರಿನ ಗುರುಕುಲ ಆಶ್ರಮದ ಮುಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿಷಮುಕ್ತವಾಗಿರುವ ಆಹಾರ ಮತ್ತು ಭೂಮಿಯನ್ನು ಸರಿಪಡಿಸಲು ರೈತರು ಸಾವಯವ ಕೃಷಿ ಮಾಡುವ ಅನಿವಾರ್ಯತೆ ಎದುರಾಗಿದ್ದು, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ದೊರಕಬೇಕು. ಸಹಜ ಬೇಸಾಯ, ಸಾವಯವ ಬೇಸಾಯ ಮಾಡುವ ಮೂಲಕ ಪ್ರಕೃತಿಯ ಧರ್ಮವನ್ನು ಉಳಿಸಬೇಕು. ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ ಕೃಷಿ ಮಾಡುವುದರ ಜೊತೆಗೆ ಅವುಗಳನ್ನು ಸರಿಯಾದ ಬೆಲೆಗೆ ಮಾರುವುದನ್ನು ರೈತರು ಕಲಿಯಬೇಕು ಎಂದು ತಿಳಿಸಿದರು.

ಕೃಷಿ ವಿಜ್ಞಾನಿ ಮಂಜುನಾಥ್ ಮಾತನಾಡಿ, ಸಾವಯವ ಕೃಷಿ ಬೆಂಬಲಕ್ಕೆ ಸರ್ಕಾರಗಳು ಜಾರಿಗೆ ತರುತ್ತಿರುವ ಯೋಜನೆಗಳು ಕೇವಲ ಜಾಹಿರಾತಿಗೆ ಸೀಮಿತವಾಗಿದ್ದು, ಅರ್ಹ ರೈತ ಫಲಾನುಭವಿಗಳಿಗೆ ಯೋಜನೆ ಲಾಭ ದೊರಕುತ್ತಿಲ್ಲ. ಸರ್ಕಾರ ಸಾವಯವ ಕೃಷಿಕರಿಗೆ ಸರಿಯಾದ ಬೆಂಬಲ ನೀಡಿದಾಗ ಸಾವಯವ ಕೃಷಿಕರ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಪರಿಸರವಾದಿ ಸಿ.ವೈ ಯತಿರಾಜು ಮಾತನಾಡಿ ಜನರಿಗೆ ವಿಷಮುಕ್ತ ಆಹಾರ ದೊರಯಬೇಕು. ಭೂಮಿಯ ಮೇಲಿನ ಜೀವ ವೈವಿಧ್ಯತೆಯನ್ನು ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಅನೇಕ ಸವಾಲುಗಳ ನಡುವೆ ಈ ಜೈವಿಕ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಲಾಗಿದ್ದು, ಭೂಮಿಯ ಫಲವತ್ತತೆಯನ್ನು ಕಾಪಾಡುವ ಜವಾಬ್ದಾರಿ ಮತ್ತು ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಗೋವಿಂದ ರಾಜು ಮಾತನಾಡಿ ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಅನೇಕ ರೈತ ಹೋರಾಟಗಾರರು ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಭೂಮಿಯ ಫಲವತ್ತತೆ, ಭೂಮಿಯ ಸಂರಕ್ಷಣೆಯ ಬಗ್ಗೆ ಕಳೆದ 15 ವರ್ಷಗಳಿಂದ ಇತ್ತೀಚಿಗೆ ಹೋರಾಟ

ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ರೈತರು ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಆದರೆ ಕರ್ನಾಟಕ ರಾಜ್ಯವನ್ನು ಸಾವಯವ ರಾಜ್ಯವನ್ನಗಿಸುವ ಜವಾಬ್ದಾರಿ ಶ್ರೀ ನಮ್ಮೆಲ್ಲರದಾಗಿದ್ದು, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಮೂಲಕ ಭಾರತ ವಿಶ್ವಗುರುವಾಗಬೇಕು. ಸಹಕಾರ ಮನೋಭಾವದಿಂದ ಸಾವಯವ ಕೃಷಿ ಮಾಡಬೇಕಾಗುತ್ತದೆ. ಕಾಯಿಲೆ ಬಂದಾಗ ಸರಿಪಡಿಸಿ ಕೊಳ್ಳುವುದಕ್ಕಿಂತ ಕಾಯಿಲೆ ಬಾರದಂತೆ ಎಚ್ಚರಿಕೆವಹಿಸುವ ಅನಿವಾರ್ಯತೆ ಇದೆ.

ನಡೆಸಲಾಗುತ್ತಿದೆ. ಗಾಂಧಿ ಸಹಜ ಬೇಸಾಯ ಕೃಷಿ ಕೇಂದ್ರದಿಂದ ನೈಸರ್ಗಿಕ ಕೃಷಿಯ ಬಗ್ಗೆ ಅಧ್ಯಯನ ಶಿಬಿರವನ್ನು ನಡೆಸಿ ಸಾವಯವ ಕೃಷಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್, ಸೂಸಿ ಸ್ವಾಮಿ, ಮುಂತಾದವರು ಹಾಜರಿದ್ದರು.

|

Leave a Reply

Your email address will not be published. Required fields are marked *

× How can I help you?