ತುಮಕೂರು: ರಾಜ್ಯ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿಯವರ ಅಧ್ಯಕ್ಷತೆಯಲ್ಲಿ ತುಮಕೂರಿನ ಕಚೇರಿಯಲ್ಲಿ ಸಭೆ ನಡೆಯಿತು. ಈ ವೇಳೆ ಸಂಘದ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಹಾವೇರಿ ಜಿಲ್ಲೆಗೆ ಗೌರವಾಧ್ಯಕ್ಷಾಗಿ ಯಲ್ಲಪ್ಪಕೊಂಚಣಗಿ, ಮಹಿಳಾ ಘಟಕದ ಅಧ್ಯಕ್ಷರಾಗಿ ಎಸ್.ಶೋಭಾ ಸಿದ್ಧಲಿಂಗಸ್ವಾಮಿ ಮೇವುಂಡಿ, ಉಪಾಧ್ಯಕ್ಷರಾಗಿ ರೇಣುಕಾ ಕುಮಾರಸ್ವಾಮಿ ಬೆಳ್ಳಟ್ಟಿ ಹಾಗೂ ಮಧುಗಿರಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪಾರ್ವತಿಮಂಜುನಾಥ ಶರ್ಮ, ಉಪಾಧ್ಯಕ್ಷರಾಗಿ ರಾಧಾ ಅವರುಗಳಿಗೆ ರಾಜ್ಯಾಧ್ಯಕ್ಷ ಎನ್.ಗೋಪಿ ನೇಮಕದ ಪತ್ರ ನೀಡಿದರು. ಈ ವೇಳೆ ಹೆಚ್.ರಾಜಣ್ಣ, ಕೆಂಪಣ್ಣ, ವಿಜಯಕುಮಾರ್, ಓಂಕಾರ್, ಶಬ್ಬೀರ್ ಅಹಮದ್, ರಾಜು, ರಮ್ಯಶ್ರೀ, ಮಂಜಮ್ಮ, ಶೃತಿ, ಆದಿಲ್ ಬಾಷ, ಆನಂದ್, ನಜರುದ್ದೀನ್, ರಾಮಾಂಜನೇಯ, ಅನಿತಾ ಮತ್ತಿತರರಿದ್ದರು.