ಎಚ್‌.ಡಿ.ಕೋಟೆ-ಲೈಂಗಿಕ-ಕಿರುಕುಳದ-ಆರೋಪಿ-ಮುಖ್ಯ-ಶಿಕ್ಷಕ- ಗಿರೀಶ್-ಬಂಧನ

ಎಚ್‌.ಡಿ.ಕೋಟೆ: ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳದ ಆರೋಪಿ ಮುಖ್ಯ ಶಿಕ್ಷಕ‌ ಗಿರೀಶ್ ನನ್ನು ಬಂಧನ ಮಾಡಲಾಗಿದೆ.

ಶಾಲೆಯೊಂದರಲ್ಲಿ‌ ಕಳೆದ ಹದಿನೈದು ದಿನಗಳ ಹಿಂದೆ ಇಬ್ಬರು ವಿದ್ಯಾರ್ಥಿನಿಯರಿಗೆ ಪ್ರಜ್ಞೆ ತಪ್ಪಿಸುವ ಮಾತ್ರೆ ನೀಡಿ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ವಿದ್ಯಾರ್ಥಿನಿಯರನ್ನು ಹಿಂಶಿಸಿದ್ದ ಎನ್ನಲಾಗಿದೆ.

ಪ್ರಕರಣದ ಆರೋಪ ಹೊರಬರುತ್ತಿದ್ದಂತಯೇ ಶಿಕ್ಷಕ‌ ತಲೆ ಮರೆಸಿಕೊಂಡಿದ್ದ, ಈತನ ಪತ್ತೆಗೆ ತೀವ್ರ ಶೋಧ ಆರಂಭಿಸಿದ್ದ ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದರು. ಬುಧವಾರ ಮಧ್ಯಾಹ್ನ ಹುಬ್ಬಳ್ಳಿಯ ಅಜ್ಞಾತ ಸ್ಥಳದಲ್ಲಿ ಹಡಗಿಕುಳಿತಿದ್ದ ಮುಖ್ಯ ಶಿಕ್ಷಕ ಗಿರೀಶ್ ನನ್ನು ಹೆಚ್.ಡಿ.ಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ರಾತ್ರಿ ಹುಬ್ಬಳ್ಳಿಗೆ ತೆರಳಿದ್ದ ಹೆಚ್.ಡಿ.ಕೋಟೆ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಬ್ಬೀರ್ ಹುಸೇನ್ ಹಾಗೂ ಕ್ರೈಂ ಬ್ರಾಂಚ್ ಅಧಿಕಾರಿಗಳ ತಂಡ ತೀವ್ರ ಹುಡುಕಾಟದಲ್ಲಿ ತೊಡಗಿತ್ತು.

ಪ್ರಕರಣ ವ್ಯಾಪಕ‌ ಟೀಕೆಗೆ ಗುರಿಯಾಗುತ್ತಿದ್ದಂತೆಯೇ ಶಿಕ್ಷಣ ಇಲಾಖೆಯ ಸಿ.ಆರ್.ಪಿ ದೀಪಾ, ಇಸಿಒ ಜಯರಾಂ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜ್ ರನ್ನು ಅಮಾನತ್ತು ಮಾಡಲಾಗಿತ್ತು.

Leave a Reply

Your email address will not be published. Required fields are marked *

× How can I help you?