ಹಾಸನ-ಅಂತರ್ಜಲ ನಿರ್ವಹಣೆ ತರಬೇತಿ ಕಾರ್ಯಾಗಾರ

ಹಾಸನ – ಜಾವಗಲ್‌ನ ರೈತ ಸಂಪರ್ಕ ಕೇಂದ್ರದಲ್ಲಿ ಅಟಲ್ ಭೂ ಜಲ ಯೋಜನೆಯಡಿ ರೈತರಿಗೆ ಅಂತರ್ಜಲ ನಿರ್ವಹಣೆ, ಜಲಭದ್ರತಾ ಯೋಜನೆ ಸಿದ್ದಪಡಿಸುವುದು, ನೀರಿನ ಬೇಡಿಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಕುರಿತು ಒಂದು ದಿನದ ಕಾರ್ಯಕ್ರಮವನ್ನು ಕೃಷಿ ಇಲಾಖೆ, ಡಿ.ಎ.ಟಿ.ಸಿ ಹಾಗೂ ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕ, ಅಟಲ್ ಭೂ ಜಲ ಯೋಜನೆ, ಹಾಸನ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.


ತರಬೇತಿ ಕಾರ್ಯಕ್ರಮವನ್ನು ಸಾಮಾಜಿಕ ಅಭಿವೃದ್ದಿತಜ್ಞರಾದ ಪ್ರವೀಣ್, ಸಹಾಯಕ ಕೃಷಿ ನಿರ್ದೇಶಕರಾದ ಪ್ರಸನ್ನ, ಜಿಲ್ಲಾ ನೋಡಲ್ ಅಧಿಕಾರಿಗಳಾದ ಸುಂದರರಾಜು, ನೆಟಾಫಿಮ್ ಕಂಪನಿಯ ಬೇಸಾಯ ತಜ್ಞರಾದ ಅಂಜಿನಪ್ಪ ಹಾಗೂ ರೈತರು ಸೇರಿ ಉದ್ಘಾಟಿಸಿದರು.
ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕದಿಂದ ಆಗಮಿಸಿದ ಪ್ರವೀಣ್‌ರವರು ಅಟಲ್ ಭೂ ಜಲ ಯೋಜನೆಯ ಮಹತ್ವ, ಧ್ಯೇಯೋದ್ದೇಶಗಳು ಹಾಗೂ ಜಲ ಭದ್ರತಾ ಯೋಜನೆ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಂಜಿನಪ್ಪರವರು ಹನಿ ನೀರಾವರಿ ಮತ್ತು ಸೂಕ್ಷö್ಮ ನೀರಾವರಿ ಪದ್ದತಿಗಳ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿ ನೀಡಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆಗಮಿಸಿದ್ದ ಪ್ರಸನ್ನರವರು ಮಣ್ಣು ಪರೀಕ್ಷೆಯ ಮಹತ್ವ ಮತ್ತು ಮಣ್ಣು ಮಾದರಿ ಸಂಗ್ರಹಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.


ಇದೇ ವೇಳೆ ಅಟಲ್ ಭೂ ಜಲ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಹೊರತಂದಿರುವ ಕ್ಯಾಲೆಂಡರ್‌ಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಗಾರದಲ್ಲಿ ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕದ ತಜ್ಞರು, ಸಿಬ್ಬಂದಿಗಳು, ಡಿ.ಐ.ಪಿ., ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?