ಹಾಸನ-ತೋಟಗಾರಿಕೆ-ತರಬೇತಿಗೆ-ಅರ್ಜಿ-ಆಹ್ವಾನ

ಹಾಸನ – ಹಾಸನ ಜಿಲ್ಲೆಯ ತೋಟಗಾರಿಕೆ ತರಬೇತಿ ಕೇಂದ್ರ, ಸೋಮನಹಳ್ಳಿ, ಕಾವಲು ಕೇಂದ್ರದಲ್ಲಿ, 10 ತಿಂಗಳ ತೋಟಗಾರಿಕೆ ತರಬೇತಿಗೆ ಹಾಸನ ಜಿಲೆಯ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು. ತಂದೆ ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಅಭ್ಯರ್ಥಿಗಳು 18 ರಿಂದ 33 ವರ್ಷದೊಳಗಿರಬೇಕು. ಮಾಜಿ ಸೈನಿಕರಿಗೆ 33 ರಿಂದ ಗರಿಷ್ಠ 65 ವರ್ಷ ಹಾಗೂ ಇತರೆ ಅಭ್ಯರ್ಥಿಗಳು 18 ರಿಂದ 3೦ ವರ್ಷದೊಳಗಿರಬೇಕು.


ಅರ್ಜಿ ನಮೂನೆಯನ್ನು ಇಲಾಖಾ ವೆಬ್ ಸೈಟ್ https://horticulturedir.karnataka.gov.in ನಲ್ಲಿ ಮಾ.1ರಿಂದ ಮಾ.31 ರ ವರೆಗೆ ಆoತಿಟಿಟoಚಿಜ ಮಾಡಿಕೊಳ್ಳಬಹುದು ಅಥವಾ ಮಾ.31 ರವರೆಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಹಾಸನ ಕಚೇರಿಯಲ್ಲಿ ಪಡೆಯಬಹುದು

.
ಅರ್ಜಿ ಶುಲ್ಕದ ಬಾಬು, ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 3೦/- ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಮಾಜಿ ಸೈನಿಕರು ಅಭ್ಯರ್ಥಿಗಳಿಗೆ ರೂ. 15/- ಗಳ ಮೊತ್ತಕ್ಕೆ ಇಂಡಿಯನ್ ಪೋಸ್ಟಲ್ ಆರ್ಡರ್ ಡಿಮ್ಯಾಂಡ್ ಡ್ರಾಫ್ಟ್ (ಆಆ) ರೂಪದಲ್ಲಿ, ತೋಟಗಾರಿಕೆ ಉಪನಿರ್ದೇಶಕರು, (ಜಿ.ಪಂ.), ಹಾಸನ ರವರ ಹೆಸರಿನಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಏ.1 ರ ಸಂಜೆ 5.30 ಗಂಟೆಯೊಳಗೆ ಕಚೇರಿಗೆ ಸಲ್ಲಿಸಬೇಕು, ಸಂದರ್ಶನವನ್ನು ಏ.8 ರಂದು ತೋಟಗಾರಿಕೆ ಉಪನಿರ್ದೇಶಕರ ಕಛೇರಿ, (ಜಿ.ಪಂ.), ಹಾಸನ ಕಚÉÃರಿಯಲ್ಲಿ ಆಯೋಜಿಸಲಾಗಿದೆ.


ಆಯ್ಕೆ ಪಟ್ಟಿಯನ್ನು ಏ.16 ರಂದು ಪ್ರಕಟಿಸಲಾಗುತ್ತದೆ, ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ರಾಜ್ಯವಲಯ, ಹಾಸನ ರವರ ಕಚೇರಿ, ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ತರಬೇತಿ ಕೇಂದ್ರ, ಸೋಮನಹಳ್ಳಿ, ಕಾವಲು ಅಥವಾ ದೂರವಾಣಿ ಸಂಖ್ಯೆ: 08172-269995 ಅನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಲು ಹಾಸನ ರಾಜ್ಯವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?