ಚಿಕ್ಕಮಗಳೂರು-ಗ್ಯಾರಂಟಿ-ಯೋಜನೆ-ಜನಸಾಮಾನ್ಯರಿಗೆ-ಆರ್ಥಿಕ- ವರದಾನ-ಮಲ್ಲೇಶ್


ಚಿಕ್ಕಮಗಳೂರು-ಗ್ಯಾರಂಟಿ ಯೋಜನೆಗಳು ತಾಲ್ಲೂಕಿನ ಜನತೆಗೆ ಆರ್ಥಿಕ ವರದಾನವಾಗಿದೆ. ಪ್ರತಿ ಕುಟುಂಬಕ್ಕೂ ಜೀವನ ಸುಧಾರಣೆಗೆ ಹೊರೆ ಇಳಿಕೆಗೊಳಿಸಿ, ಸುಗಮ ಬದುಕು ಸಾಗಿಸಲು ಪೂರಕವಾಗಿದೆ ಎಂದು ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಹೇಳಿದರು.


ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪರಿ ಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಅವರು ಮಾತನಾಡಿದರು.


ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 69744 ಫಲಾನುಭವಿಗೆ ಪ್ರತಿ ತಿಂಗಳು 13.94 ಕೋಟಿ ಧನಸಹಾಯ ಒದಗಿಸಿ, ಆರ್ಥಿಕ ಸಬಲೀಕರಣವನ್ನು ಹೆಚ್ಚಿಸಿದೆ. ಕುಟುಂಬದ ಯಜಮಾನಿಗೆ ತಲಾ 2 ಸಾವಿರ ಗೃಹಲಕ್ಷ್ಮಿ ನೇರ ಖಾತೆಗೆ ಜಮಾಯಿಸಿ ಗುಣಮಟ್ಟದ ಜೀವನಕ್ಕೆ ರಾಜ್ಯಸರ್ಕಾರ ದಾರಿ ಮಾಡಿಕೊಟ್ಟಿದೆ ಎಂದರು.


ಶಕ್ತಿ ಯೋಜನೆಯು ಆರಂಭದಿಂದ ಫೆಬ್ರವರಿ ಮಾಹೆ ಯಾನತನಕ ರಸ್ತೆ ಸಾರಿಗೆಯಲ್ಲಿ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ವಿಭಾಗದಿಂದ ಪ್ರತಿ ತಿಂಗಳು 7೦ ಸಾವಿರಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರಂತೆ ಒಟ್ಟು 1.85 ಕೋಟಿ ಮಹಿಳೆಯರು ಉಚಿತ ಪ್ರಯಾಣ ಬೆಳೆಸಿ ಯೋಜನೆಯ ಸದು ಪಯೋಗ ಮಾಡಿಕೊಂಡಿವೆ ಎಂದರು.


ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಕ್ಟೋಬರ್ ಮಾಹೆಯವರೆಗೆ 64990 ಪಡಿತರ ಚೀಟಿದಾ ರರಿಗೆ ಒಟ್ಟಾರೆ 55.16 ಕೋಟಿ ಡಿಬಿಟಿ ಮೊಬಲಗನ್ನು ಖಾತೆಗೆ ಜಮೆ ಮಾಡಲಾಗಿದ್ದು, ಉಳಿದಂತೆ 2024ರ ನವೆಂಬರ್ ಮಾಹೆಯಿಂದ ಜನವರಿ ಮಾಹೆ ತನಕ ಹಣ ಜಮೆ ಮಾಡಲು ಬಾಕಿ ಉಳಿದಿರುತ್ತದೆ ಎಂದು ತಿಳಿಸಿದರು.


ಯುವನಿಧಿ ಯೋಜನೆಯಲ್ಲಿ ೫೨೮ ಪದವಿದರರು ಮತ್ತು 03 ಡಿಪ್ಲೋಮೋ ಪದವಿದಾರರಿಗೆ ಒಟ್ಟು 15.88 ಲಕ್ಷ ಮಾಶಾಸನವನ್ನು ನೀಡಿದೆ. ಒಟ್ಟಾರೆ ಪಂಚಗ್ಯಾರಂಟಿ ಯೋಜನೆಗಳು ಮಹಿಳೆಯರು, ನಿರುದ್ಯೋಗಿಗಳಿಗೆ ಆರ್ಥಿಕ ಸಹಾಯ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಂಕಷ್ಟ ಎದುರಾಗದೇ ಜೀವ ನಶೈಲಿ ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂದರು.


ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯ್‌ಕುಮಾರ್ ಕಳೆದ ಪರಿಶೀಲನಾ ಸಭೆ ಯಲ್ಲಿ ಜನಸಾಮಾನ್ಯರಿಗೆ ಅನ್ಯ ಕಾರಣದಿಂದ ಗ್ಯಾರಂಟಿ ಯೋಜನೆಗಳು ತಲುಪಿಲ್ಲ. ಈ ಬಗ್ಗೆ ಅಧಿಕಾರಿಗಳು ಇನ್ನಷ್ಟು ಶ್ರಮವಹಿಸುವ ಮೂಲಕ ಯೋಜನೆಗಳ ಪೂರೈಕೆಗೆ ಸನ್ನದ್ಧರಾಗಬೇಕು ಎಂದು ಸೂಚಿಸಿದರು.


ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಅನ್ಸರ್ ಆಲಿ, ಸದಸ್ಯರುಗಳಾದ ನಾಗೇಶ್‌ ಅರಸ್, ಕೃಷ್ಣ, ಗೌಸ್‌ಮೊಹಿಯುದ್ದೀನ್,ವಿಂದ್ಯಾ,ಹಸೆನಾರ್ ಹಾಗೂ ಅಧಿಕಾರಿಗಳು ಇದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?