ಮೈಸೂರು-ಜಿಲ್ಲಾ ಸರಕಾರಿ ನೌಕರರ ಸಂಘದ ನವೀಕ್ರತ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಒಂದು ಕೋಟಿ ರೂಪಾಯಿಗಳ ಅನುಧಾನ ನೀಡಲಾಗಿದ್ದು ಸುಸಜ್ಜಿತವಾದ ಹಾಲ್ ಹಾಗು ಹತ್ತು ರೂಮುಗಳನ್ನು ಆ ಅನುದಾ ನದಲ್ಲಿ ನಿರ್ಮಿಸಲಾಗಿದೆ.ನವೀಕೃತ ಕಟ್ಟಡ ವಿಭಿನ್ನವಾಗಿ ನಿರ್ಮಾಣವಾಗಿದೆ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ನೌಕರರ ಸಂಘದ ನವೀಕೃತ ಕಟ್ಟಡ ಉದ್ಘಾಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅವರ ಮನವೀಯ ಮರೆಗೆ ನೌಕರರ ಭವನ ನಿರ್ಮಾಣಕ್ಕೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಇದೆ ಸಂದರ್ಭ ಭರವಸೆ ನೀಡಿದರು.
ಸರಕಾರಿ ಸೇವೆ ದೇವರ ಸೇವೆಯಿದ್ದಂತೆ ಜನಸಾಮಾನ್ಯರೇ ನಿಮ್ಮ ದೇವರುಗಳು ಅವರಿಗೆ ತೊಂದರೆಯಾಗದಂತೆ ಸರಕಾರಿ ಸವಲತ್ತುಗಳ ತಲುಪಿಸುವ ಕೆಲಸ ಮಾಡಿ ಎಂದು ಸಚಿವರು ನೌಕರರಿಗೆ ಕಿವಿಮಾತು ಹೇಳಿದರು.
ಸಿ ಎಸ್ ಷಡಾಕ್ಷರಿ ಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ,ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವಸ್ತ,ವಿಧಾನ ಪರಿಷತ್ ಸದಸ್ಯರುಗಳಾದ ಡಾ. ಡಿ. ತಿಮ್ಮಯ್ಯ, ಸಿ ಎನ್ ಮಂಚೇಗೌಡ,ಸರ್ಕಾರಿ ನೌಕರರ ಸಂಘದ ಮೈಸೂರು ಜಿಲ್ಲಾಧ್ಯಕ್ಷರಾದ ಗೋವಿಂದರಾಜು,ಉಮೇಶ್ ,ರೇವಣ್ಣ,ರಮೇಶ್ ಕುಮಾರ್ ,ವಿಶ್ವನಾಥ್, ಟಿ ಶ್ರೀನಿವಾಸ್,ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು,ಮಲ್ಲಿಕಾರ್ಜುನ್ ಬಳ್ಳಾರಿ,ರುದ್ರಪ್ಪ,ಸಿದ್ದರಾಮಯ್ಯ ಹಾಗೂ ಶಿಕ್ಷಕ,ಶಿಕ್ಷಕಿಯರು ಭಾಗವಹಿಸಿದ್ದರು.
——————ಮಧುಕುಮಾರ್