ಕೊರಟಗೆರೆ:-‘ತೆನೆ’ ಇಳಿಸಿ ‘ಕೈ’ ಹಿಡಿದ ಜೆ ಡಿ ಎಸ್ ಸದಸ್ಯರು-ಪಟ್ಟಣ ಪಂಚಾಯತಿ ಕಾಂಗ್ರೆಸ್ ಮಡಿಲಿಗೆ-ಜಿ ಪರಮೇಶ್ವರ್ ಗೆ ಮೇಲುಗೈ

ಕೊರಟಗೆರೆ:-ಜೆ ಡಿ ಎಸ್ ನ ಮೂರು ಜನ ಸದಸ್ಯರುಗಳು ‘ತೆನೆ’ ಇಳಿಸಿ ‘ಕೈ’ ಹಿಡಿಯುವ ಮೂಲಕ ಪಟ್ಟಣ ಪಂಚಾಯತಿಯ ಗಾದಿಯನ್ನು ಕಾಂಗ್ರೆಸ್ ಪಕ್ಷದ ಮಡಿಲಿಗೆ ಹಾಕಿದ್ದಾರೆ.

ಬಹಳ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಅಧಿಕ ಸದಸ್ಯರನ್ನು ಹೊಂದಿದ್ದ ಜೆ ಡಿ ಎಸ್ ಗದ್ದುಗೆಯನ್ನು ಏರಲಿದೆ ಎಂದೇ ಭಾವಿಸಲಾಗಿತ್ತು.ಆದರೆ ಚುನಾವಣೆಯ ಸಮಯದಲ್ಲಿ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದು ಪತಾಕೆ ಹಾರಿಸುವಲ್ಲಿ ಯಶ ಕಂಡಿದೆ.

ಕೊನೆ ಗಳಿಗೆಯಲ್ಲಿ ಕೈ ಹಿಡಿದರು..

ಕೊರಟಗೆರೆ ಪಟ್ಟಣ ಪಂಚಾಯತಿಗೆ 2ನೇ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಎ ಸ್ಸಿ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಿದ್ದು,ಅತಿ ಹೆಚ್ಚು ಸಂಖ್ಯಾ ಬಲವುಳ್ಳ ಜೆಡಿಎಸ್ ಅಧ್ಯಕ್ಷ ಉಪಾಧ್ಯಕ್ಷ ಗದ್ದುಗೆ ಏರಬೇಕಿದ್ದಂತಹ ವಾತಾವರಣ ಒಂದೇ ದಿನದಲ್ಲಿ ಬದಲಾಯಿತು. ಕಾಂಗ್ರೆಸ್ ನ ರಾಜಕೀಯ ತಂತ್ರಗಾರಿಕೆಗೆ ಜೆಡಿಎಸ್ ನ ಮೂರು ಜನ ಸದಸ್ಯರುಗಳನ್ನ ಕಾಂಗ್ರೆಸ್ ಗೆ ಸೆಳೆಯುವ ಮೂಲಕ ಜೆಡಿಎಸ್ ನ ಸದಸ್ಯೆ ಅನಿತಾ ಅಧ್ಯಕ್ಷರಾಗಿ ಹಾಗೂ ಉಸ್ಮಪಾರಿಯಾ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತವಾಗಿ ಆಯ್ಕೆಯಾಗುವ ಮೂಲಕ ಗೃಹ ಸಚಿವ ಪರಮೇಶ್ವರ್ ರಾಜಕೀಯ ಮೇಲ್ಗೈ ಸಾಧಿಸಿದ್ದಾರೆ.

ಪರಮೇಶ್ವರವರ ಮಾರ್ಗದರ್ಶನದಂತೆ ಕೊರಟಗೆರೆ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ ನಾರಾಯಣ್,ಅರಕೆರೆ ಶಂಕರ್,ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಪ್ರೇಮಾ ಮಹಾಲಿಂಗಯ್ಯ ನವರಪತಿ ಮಾಹಲಿಂಗಯ್ಯ,ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎ ಡಿ ಬಲರಾಮಯ್ಯ ಓಬಳರಾಜು,ನಾಗರಾಜು,ಮಂಜುನಾಥ್, ನಂದೀಶ್ ಸೇರಿದಂತೆ ಹಲವು ಸದಸ್ಯರು ಸೇರಿ ಈ ರಾಜಕೀಯ ತಂತ್ರಗಾರಿಕೆಯಲ್ಲಿ ಬಹಳ ಶ್ರಮವಹಿಸಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನ ಕಾಂಗ್ರೆಸ್ ಮಡಲಿಗೆ ತರುವಲ್ಲಿ ಬಹಳಷ್ಟು ಶ್ರಮವಹಿಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಕೊರಟಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ನಿರೀಕ್ಷೆ ಮೀರಿ ಜೆಡಿಎಸ್ 3 ಸದಸ್ಯರು ಪಕ್ಷೇತರ ಒಬ್ಬ ಸದಸ್ಯ ಕಾಂಗ್ರೆಸ್ ಗೆ ಬೆಂಬಲ ಸೂಚಿಸುವ ಮೂಲಕ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಅಧ್ಯಕ್ಷ ಉಪಾಧ್ಯಕ್ಷ ಗದ್ದಿಗೆ ಏರುವ ಮೂಲಕ ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿದೆ.

ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂದಿನ ದಿನಗಳಲ್ಲಿ ಹೆಚ್ಚು ಬೆಳೆಯುವಂತ ನಗರವಾಗಿದ್ದು ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ ಎಲ್ಲಾ ಸದಸ್ಯರುಗಳಿಗೂ ಧನ್ಯವಾದಗಳು.ನಿಮ್ಮ ನಂಬಿಕೆಗೆ ನಾವು ಸದಾ ನಿಮ್ಮೊಟ್ಟಿಗೆ ಇದ್ದು ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸುತ್ತೇನೆ.

ಡಾ ಜಿ ಪರಮೇಶ್ವರ್,ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಗೃಹ ಸಚಿವರು ಕರ್ನಾಟಕ ಸರ್ಕಾರ.

ಎಸ್‌ ಸಿ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದೇನೆ, ನಾನು ಮೂರನೇ ವಾರ್ಡಿನ ಎಲ್ಲಾ ಮತದಾರರಿಗೂ ಧನ್ಯವಾದ ಸಲ್ಲಿಸುತ್ತೇನೆ, ನಮ್ಮ ಅಣ್ಣನವರಾದ ಸ್ಮಾಲ್ ರಘು ಅವರ ತಂಗಿಯಾಗಿ ಅವಿರೋಧವಾಗಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ.ಈ ಸಂದರ್ಭದಲ್ಲಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ರವರಿಗೆ ಧನ್ಯವಾದ ಸಲ್ಲಿಸುತ್ತಾ ಪಟ್ಟಣ ಪಂಚಾಯತಿ ಅಭಿವೃದ್ಧಿ ದೃಷ್ಟಿಯಿಂದ ಪರಮೇಶ್ವರ ಅವರ ಮಾರ್ಗದರ್ಶನದಂತೆ ಮುಂದುವರೆಯುತ್ತೇನೆ.

ಅನಿತಾ , ನೂತನ ಅಧ್ಯಕ್ಷೆ ಕೊರಟಗೆರೆ ಪಟ್ಟಣ ಪಂಚಾಯಿತಿ.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರ ಮಾರ್ಗದರ್ಶನದಂತೆ ನಾನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ .ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಾರೆ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಆಗುತ್ತದೆ ಎಂಬ ದೃಷ್ಠಿಯಿಂದ ನಾವು ಕಾಂಗ್ರೆಸ್ ಗೆ ಬಂದಿದ್ದೇವೆ ಪಟ್ಟಣ ಪಂಚಾಯತಿ ಅಭಿವೃದ್ಧಿಯೇ ನಮಗೆ ಮುಖ್ಯ.

ಉಸ್ಮಾಪಾರಿಯಾ .
ನೂತನ ಉಪಾಧ್ಯಕ್ಷೆ ಕೊರಟಗೆರೆ ಪಟ್ಟಣ ಪಂಚಾಯಿತಿ.

ಜೆಡಿಎಸ್ ನ ಸದಸ್ಯರು ಕಾಂಗ್ರೆಸ್ ಗೆ ಬಂದು ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ಗೆ ಬಂದಿರೋದು ಬಹಳ ಉತ್ತಮ ಬೆಳವಣಿಯಾಗಿದೆ ಎಲ್ಲಾ ಪಕ್ಷಭೇದ ಮರೆತು ಸದಸ್ಯರುಗಳು ಒಂದಾಗಿ ಹೋದಾಗ ಮಾತ್ರ ನಗರ ಅಭಿವೃದ್ಧಿಗೆ ಸಾಧ್ಯ.ಅಭಿವೃದ್ಧಿ ದೃಷ್ಟಿಯಿಂದ ಯಾರೊಬ್ಬರೂ ಅಧ್ಯಕ್ಷ ಉಪಾಧ್ಯಕ್ಷರಿಗೆ ಅರ್ಜಿ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದೆ ಇದು ಉತ್ತಮ ಬೆಳವಣಿಗೆಯಾಗಿದೆ.

ಚಂದ್ರಶೇಖರ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು

—————-ಶ್ರೀನಿವಾಸ್ ಕೊರಟಿಗೆರೆ

Leave a Reply

Your email address will not be published. Required fields are marked *

× How can I help you?