ತುಮಕೂರು-ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾ ಸಮಿತಿ ವತಿಯ ಕಾರ್ಯಕರ್ತರು ಈಡಿ ಮತ್ತು ಮೋದಿ ವಿರುದ್ಧ ಆಕ್ರೋಶ ಭರಿತ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನೆ ನಡೆಸಲು ಪೊಲೀಸರಿಂದ ಅನುಮತಿ ಪಡೆದಿಲ್ಲವೆಂದು ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಪಿಎಸ್ಐ ರವರು ಎಸ್ ಡಿ ಪಿ ಐ. ಮುಖಂಡ ಮಕ್ತಿಯಾರ್ ಅವರನ್ನು ವಶಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಶಫಿಉಲ್ಲಾ ಖಾನ್. ಉಪಾಧ್ಯಕ್ಷ ಅಲಿ ಮುಲ್ಲಾ ಶರೀಫ್. ಕಾರ್ಯದರ್ಶಿ ಚಾಂದ್ ಪಾಷಾ, ಮತ್ತು ಜಿಲ್ಲಾ ಸದ್ಯಸರು ಎಸ್ ಡಿ ಪಿ ಐ ಪಕ್ಷದ ಹಿರಿಯ ಮುಖಂಡರು. ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.