ಕೊರಟಗೆರೆ:- ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕಮರ್ ತಪ್ಸಮ್ ಅವರನ್ನ ದಿಡೀರ್ ವರ್ಗಾವಣೆಯನ್ನ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ ನಡೆಸಿ ಆಸ್ಪತ್ರೆಗೆ ಮತ್ತಿಗೆಹಾಕಿ ತಾಲೂಕು ಆರೋಗ್ಯಾಧಿಕಾರಿ ವಿಜಯಕುಮಾರ್ ಅವರನ್ನ ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಪಂ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದ ಡಾ.ಕಮರ್ ತಪ್ಸಮ್ ಅವರು ಬರುವ ರೋಗಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡು ಉತ್ತಮ ಚಿಕಿತ್ಸೆ ನೀಡುವ ವೈದ್ಯೆಯನ್ನ ರಾಜಕೀಯ ದುರುದ್ದೇಶದಿಂದ ವರ್ಗಾವಣೆ ಮಾಡಿದ್ದಾರೆ.
ಈ ಹಿಂದೆ ಡಾ.ಪ್ರಕಾಶ್‌ಗೌಡ ಎನ್ನವ ವೈದ್ಯ ಇಲ್ಲಿನ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಸರಿಯಾಗಿ ಸ್ಪಂದಿಸದೆ ಕಾಲಹರಣ ಮಾಡಿಕೊಂಡು ಹೋಗುತ್ತಿದ್ದರು, ಅಂತಹ ಬೇಜವಾಬ್ದಾರಿ ವೈದ್ಯ ಇರುವವಗೂ ಆಸ್ಪತ್ರೆಗೆ ಯಾರು ಬರುತ್ತಿರಲಿಲ್ಲ, ಅದರೆ ಡಾ.ಕಮರ್ ತಪ್ಸಮ್ ಅವರು ಬಂದಮೇಲೆ 15೦ ಕ್ಕೂ ಹೆಚ್ಚು ಒಪಿಡಿ ದಾಖಲಾಗುತ್ತಿದೆ, ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯೆಯನ್ನ ತುಮಕೂರು ಡಿಹೆಚ್‌ಒ ಡಾ.ನಾಗೇಂದ್ರಪ್ಪ ಮತ್ತು ಕೊರಟಗೆರೆ ಟಿಹೆಚ್‌ಒ ಡಾ.ವಿಜಯಕುಮಾರ್ ವರ್ಗಾವಣೆ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯವಾಗಿ ಈಶಪ್ರಸಾದ್ ಮಾತಾಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಖಮರ್ ತಬಸುಂ ಸಾರ್ವಜನಿಕವಾಗಿ ಸ್ನೇಹ ಮಹಿ ಜೀವಿಯಂತೆ ವರ್ತಿಸುತ್ತಾ ರೋಗಿಗಳೊಂದಿಗೆ ಒಡನಾಟ ಇಟ್ಕೊಂಡು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ, ಈ ವೈದ್ಯೆ ಬಂದ ನಂತರ ಆಸ್ಪತ್ರೆಯಲ್ಲಿ 150 ರಿಂದ 200 ಕ್ಕೂ ಹೆಚ್ಚು ಓ ಪಿ ಡಿ ಯಲ್ಲಿ ನೋಂದಣಿಯಾಗುತ್ತಿದ್ದು, ಬಹಳಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುವ ಈ ಡಾಕ್ಟರ್ ವರ್ಗಾವಣೆ ಆದರೆ ಸಾರ್ವಜನಿಕವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.
ನಂತರ ಸ್ಥಳೀಯ ಮುಖಂಡ ಕುಮಾರ್‌ಸ್ವಾಮಿ ಮಾತನಾಡಿ ಈ ಹಿಂದೆ ಅಕ್ಕಿರಾಂಪುರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸರಿಯಾಗಿ ರೋಗಿಗಳಿಗೆ ಚಿಕಿತ್ಸೆ ನೀಡದೆ ಇರುವ ಕಾರಣ ಈ ಆಸ್ಪತ್ರೆಗೆ ಯಾರು ಬರತ್ತಿರಲ್ಲಿಲ್ಲ. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೆ ಹೇಳಿದ ಮೇಲೆ ಬೇರೆ ಕಡೆ ವರ್ಗಾವಣೆ ಮಾಡಲಾಗಿತ್ತು. ಆದರೆ ಟಿಹೆಚ್‌ಒ ಅವರು ಮತ್ತೆ ಇಲ್ಲಿಗೆ ಹಾಕಿದ್ದಾರೆ ,ಈಗ ಕರ್ತವ್ಯ ಮಾಡುತ್ತಿರುವ ಡಾ.ಕಮರ್ ತಪ್ಸಮ್ ಅವರು ಬಂದ ಮೇಲೆ ಸಾಕಷ್ಟು ರೋಗಿಗಳು ಗುಣಮುಖರಾಗಿ ಹೋಗಿದ್ದಾರೆ, ಇವರನ್ನೇ ಮುಂದವರೆಸಬೇಕು ಎಂದು ತಿಳಿಸಿದರು.

ಹೊಸಹಳ್ಳಿ ಗ್ರಾಮಸ್ಥರಾದ ಶಫೀವೂಲ್ಲಾ ಮಾತನಾಡಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೈರೇನಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತಲೆಯ ಮೇಲೆ ಕಲ್ಲು ಬಿದ್ದಾಗ ಅಕ್ಕಿರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇರುತ್ತಾರೆ ಎಂದು ಬಂದಾಗ ಇದೆ ಡಾ.ಪ್ರಕಾಶ್‌ಗೌಡ ಅವರು 3ಗಂಟೆ ಆಸ್ಪತ್ರೆಯಲ್ಲಿ ಇರಲಿಲ್ಲ, ಅಂತಹ ವೈದ್ಯರನ್ನ ಸಾರ್ವಜನಿಕರು ವರ್ಗಾವಣೆ ಮಾಡುವಂತೆ ಒತ್ತಾಯ ಮಾಡಿದಾಗ ಗೃಹ ಸಚಿವರು ಬೇರೆಡೆ ವರ್ಗಾವಣೆ ಮಾಡುವಂತೆ ಸೂಚಿಸಿದರು. ಮತ್ತೆ ಟಿಹೆಚ್‌ಒ ಕೃಪಾಕಟಾಕ್ಷದಿಂದ ಇಲ್ಲಿಗೆ ಬಂದಿದ್ದಾರೆ. ಆ ವೈದ್ಯರು ನಮಗೆ ಬೇಡ ನಮಗೆ ಡಾ.ಕಮರ್ ತಪ್ಸಮ್ ಅವರನ್ನ ನೇಮಕ ಮಾಡಿ ಎಂದು ಒತ್ತಾಯ ಮಾಡಿದರು.

ಓಹೆಚ್‌ಒ ವಿಜಯಕುಮಾರ್ ಮಾತನಾಡಿ ಅಕ್ಕಿರಾಂಪುರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕಮರ್ ತಪ್ಸಮ್‌ಅವರನ್ನ ವಾರಕ್ಕೆ ಮೂರು ದಿನ ಮಲ್ಲೇಕಾವುನಲ್ಲಿ ಕೆಲಸ ಮಾಡಲು ನಿಯೋಜುನೆ ಮಾಡಲಾಗಿದೆ. ಡಾ.ಪ್ರಕಾಶ್‌ಗೌಡ ಅವರು ಆಡಳಿತ ವೈದ್ಯಾಧಿಕಾರಿಯಾಗಿದ್ದು, ರೋಗಿಗಳು ಸೇರಿದಂತೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಪರಿಶೀಲನೆ ಹಾಗೂ ಪ್ರಗತಿ ಆಗಬೇಕಾಗಿದ್ದು ಕಳೆದ ಮೂರು ತಿಂಗಳಿಂದ ಪ್ರಗತಿ ಕಡಮೆಯಾಗಿದ್ದು, ಅದರಿಂದ ಇಲ್ಲಿಗೆ ಡಾ.ಪ್ರಕಾಶ್‌ಗೌಡ ಅವರನ್ನ ನಿಯೋಜನೆ ಮಾಡಲಾಗಿದೆ, ಸ್ಥಳೀಯರ ಒತ್ತಾಯದಂತೆ ಡಿಹೆಚ್‌ಒ ಅವರ ಗಮನಕ್ಕೆ ತಂದು ಮುಂದಿನ ಕ್ರಮ ತಗೆದುಕೊಳ್ಳಲಾಗುವುದು ಎಂದರು.
-ಶ್ರೀನಿವಾಸ್ ಕೊರಟಗೆರೆ