ಕೆ.ಆರ್.ಪೇಟೆ: ತಾಲ್ಲೂಕಿನ ಹೊಸಹೊಳಲು ಗ್ರಾಮದ ಎಸ್.ಎಸ್.ಎಲ್ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಷಿಯೇಷನ್ ತಾಲ್ಲೂಕು ಸಮಿತಿ ವತಿಯಿಂದ ರಾಷ್ಟ್ರೀಯ ಟೈಲರ್ಸ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭವನ್ನು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು ಟೈಲರ್ಸ್ ವೃತ್ತಿ ಸಮಾಜದಲ್ಲಿ ಅತ್ಯಂತ ಬೇಡಿಕೆಯ ವೃತ್ತಿಯಾಗಿದೆ. ಶ್ರದ್ದಾ ಭಕ್ತಿಯಿಂದ ಟೈಲರಿಂಗ್ ವೃತ್ತಿ ನಿರ್ವಹಣೆ ಮಾಡಿದರೆ ಯಶಸ್ಸು ಸಾಧಿಸಬಹುದು. ಟೈಲರ‍್ಸ್ ವೃತ್ತಿ ಮಾಡುವವರಿಗೆ ಬ್ಯಾಂಕುಗಳು ಸುಲಭ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಟೈಲರ‍್ಸ್ ವೃತ್ತಿ ಬಾಂಧವರು ಸಂಘಟಿತರಾಗಿ ಸರ್ಕಾರದ ವತಿಯಿಂದ ನೀಡುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು.
ಕಾರ್ಮಿಕ ಇಲಾಖೆಯಲ್ಲಿ ನೀಡುವ ಅಸಂಘಟಿತ ಕಾರ್ಮಿಕರ ಕಾರ್ಡುಗಳನ್ನು ಪಡೆದುಕೊಳ್ಳಬೇಕು. ಈ ಕಾರ್ಮಿಕರ ಕಾರ್ಡು ಇದ್ದರೆ ಆಕಸ್ಮಿಕ ಘಟನೆಗಳಿಗೆ ಕಾರ್ಮಿಕರು ತುತ್ತಾದರೆ ವಿಮಾ ಪರಿಹಾರವನ್ನು ವಿಮಾ ಕಂಪನಿಯಿಂದ ಪಡೆದುಕೊಳ್ಳಬಹುದು. ಟೈಲರ್ಸ್ ಗಳು ಯಾವುದೇ ಕಾರಣಕ್ಕೂ ದುಶ್ವಟಗಳಿಗೆ ಬಳಿಯಾಗಬಾರದು. ಮಧ್ಯಪಾನ-ಧೂಮಪಾನ ದುಶ್ಚಟಗಳಿಂದ ದೂರವಿರಬೇಕು. ಕ್ರಿಯಾಶೀಲವಾಗಿ ಟೈಲರಿಂಗ್ ವೃತ್ತಿಯನ್ನು ಅರ್ಪಣಾ ಭಾವನೆಯಿಂದ ಮಾಡಿದರೆ ಯಶಸ್ವಿಯಾಗಬಹುದು ಮುಂದೆ ಕುಮಾರ್ ಅವರಂತೆ ಜವಳಿ ಉದ್ಯಮಿಯಾಗಿ ಅಭಿವೃದ್ಧಿ ಸಾಧಿಸಬಹುದು ಎಂದು ಆರ್.ಟಿ.ಓ.ಮಲ್ಲಿಕಾರ್ಜುನ್ ಹೇಳಿದರು.

ಕರ್ನಾಟಕ ರಾಜ್ಯ ಟೈಲರ್ಸ್ ಅಸೋಷಿಯೇಷನ್ ತಾಲ್ಲೂಕು ಸಮಿತಿಯ ಅಧ್ಯಕ್ಷ ಹೆಚ್.ಕೆ.ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಕಾರ್ಮಿಕ ನಿರೀಕ್ಷಕ ಸ್ವಾಮಿ ಅಸಂಘಟಿತ ಕಾರ್ಮಿಕರಿಗೆ ಹಾಗೂ ಟೈಲರ್ಸ್ಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಟೈಲರ್ಸ್ ಸಂಘದ ಸದಸ್ಯರಿಗೆ ಉಚಿತವಾಗಿ ಕಾರ್ಮಿಕರ ಕಾರ್ಡುಗಳನ್ನು ನೀಡಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಮಿಕ ನಿರೀಕ್ಷಕ ಸ್ವಾಮಿ, ಕರ್ನಾಟಕ ರಾಜ್ಯ ಟೈಲರ್ಸ್ ಅಸೋಷಿಯೇಷನ್ ರಾಜ್ಯ ಸಮಿತಿ ಉಪಾಧ್ಯಕ್ಷ ಚಿಕ್ಕಮಗಳೂರು ರೆಹಮಾನ್, ಮೈಸೂರು ವಲಯ ಸಮಿತಿ ಅಧ್ಯಕ್ಷ ಚಂದ್ರು ಮತ್ತು ಮಾಜಿ ಅಧ್ಯಕ್ಷ ಸಿದ್ದೇಗೌಡ, ತಾಲ್ಲೂಕು ಜವಳಿ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ಕುಮಾರ್, ಟೆಕ್ಸ್ ಟೈಲ್ಸ್ ಕುಮಾರ್, ಶ್ರೀರಂಗಪಟ್ಟಣ ತಾಲ್ಲೂಕು ಟೈಲರ್ಸ್ ಸಂಘದ ಅಧ್ಯಕ್ಷ ರಜನಿಕಾಂತ್, ತಾಲ್ಲೂಕು ಘಟಕದ ಉಪಾಧ್ಯಕ್ಷ ಕೃಷ್ಣ, ಮಹಿಳಾ ಉಪಾಧ್ಯಕ್ಷೆ ಸುನಿತಾ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಖಜಾಂಚಿ ಶ್ಯಾಂ, ಸಂಘಟನಾ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ, ಜ್ಯೋತಿ, ಉಮಾ, ಮಾಧ್ಯಮ ಕಾರ್ಯದರ್ಶಿ ವಿ.ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.
ತಾಲ್ಲೂಕು ಜವಳಿ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ಕುಮಾರ್ ಟೆಕ್ಸ್ ಟೈಲ್ಸ್ ಕುಮಾರ್ ಮತ್ತು ಆರ್.ಟಿ.ಓ ಮಲ್ಲಿಕಾರ್ಜುನ್ ಅವರು 60ವರ್ಷ ಮೇಲ್ಪಟ್ಟ ಹಿರಿಯ ಟೈಲರ್ ವೃತ್ತಿ ಮಾಡುತ್ತಾ ಜೀವನ ನಡೆಸುತ್ತಿರುವ ಹೊಸಹೊಳಲು ಸಿದ್ದಯ್ಯ, ಕೆ.ಆರ್.ಪೇಟೆ ಮಹಾದೇವ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
–ಶ್ರೀನಿವಾಸ, ಕೆ.ಆರ್.ಪೇಟೆ