ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 65ರ ವ್ಯಾಪ್ತಿಯ ದೇವಯ್ಯನ ಹುಂಡಿ ಒಳಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿಗೆ 2024 -25 ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಅಂದಾಜು ಮೊತ್ತ 38,08,968 ರೂ ಹಾಗೂ ವಾರ್ಡ್ ನಂಬರ್ 48ರ ವ್ಯಾಪ್ತಿಯ ಚೆನ್ನಗಿರಿ ಕೊಪ್ಪಲಿನ ದೊಡ್ಡ ಮೋರಿ ಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಅಂದಾಜು ಮೊತ್ತ 23,60,468 ರೂ ಮತ್ತು ಜಯನಗರದ ಲಕ್ಷ್ಮಿ ದೇವಿ ಮೆಡಿಕಲ್ ರಸ್ತೆಯ ಪಾದ ಚಾರಿ ಮಾರ್ಗದ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ:47,50,000 ರೂಗಳಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ರವರು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಗೀತ ಯೋಗಾನಂದ ಹಾಗೂ ನಗರಾಧ್ಯಕ್ಷ ಎಲ್. ನಾಗೇಂದ್ರ ಮತ್ತು ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ ಹಾಗೂ ಬಿಜೆಪಿಯ ಹಿರಿಯ ಮುಖಂಡರುಗಳಾದ ಪ್ರದೀಪ್ ಕುಮಾರ.ಎನ್, ಜೈ ರಾಮ್, ಜೋಗಿ ಮಂಜು, ಕಿಶೋರ್, ಆದಿತ್ಯ, ಹಾಗೂ ಇನ್ನು ಮುಂತಾದವರು ಭಾಗಿಯಾಗಿದ್ದರು.