ಚಿಕ್ಕಮಗಳೂರು– ಸಂಸಾರದ ನಿರ್ವಹಣೆ, ಮಕ್ಕಳ ಪಾಲನೆಗೆ ಸೀಮಿತವಾಗಿದ್ಧ ಮಹಿಳೆಯರು ಇಂದು ಸಮಾಜದ ಒಂದಿಲ್ಲೊಂದು ರಂಗಗಳಲ್ಲಿ ಮುಕ್ತವಾಗಿ ತೊಡಗಿಸಿಕೊಂಡು ಸಾಧನೆ ಮಾಡು ತ್ತಿದ್ದಾರೆ ಎಂದು ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಹೇಳಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾ ಸಹೋದರತ್ವ ಸಮಿತಿ 1೦ನೇ ವರ್ಷದ ಸಂಭ್ರ ಮಾಚಾರಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಹೆಣ್ಣು ಶಿಕ್ಷಣ, ಗಾಯನ, ಸರ್ಕಾರದ ವಿವಿಧ ಹುದ್ಧೆ ಅಲ್ಲದೇ ರಾಷ್ಟçಪತಿ ಸ್ಥಾನವನ್ನು ಅಲಂಕ ರಿಸಲು ಪರಿಶ್ರಮವೇ ಮೂಲ ಕಾರಣ. ದೈನಂದಿನ ಕುಟುಂಬದ ನಿರ್ವಹಣೆ ಜೊತೆಗೆ ಸಮಾಜವನ್ನು ಉದ್ದಾ ರವಾಗಿಸಲು ಆತ್ಮಶಕ್ತಿ ಅಗತ್ಯ, ಹೀಗಾಗಿ ಹೆಣ್ಣು ಹಿಂಜರಿಕೆ ಹೊಂದದೇ ಗುರಿಯತ್ತ ಸಾಗಬೇಕು ಎಂದರು.
ಸ್ವಾತಂತ್ರ್ಯದ ಪೂರ್ವಕ್ಕೂ ಮುನ್ನ ಜನಿಸಿದ ಸಾವಿತ್ರಿಬಾಯಿ ಪುಲೆ ಪ್ರತಿ ಹೆಣ್ಣಿಗೆ ಆದರ್ಶವಾಗಿದ್ದಾರೆ. ಆ ಕಾಲಘಟ್ಟದಲ್ಲಿ ಹೆಣ್ಣಿಗೆ ವಿದ್ಯೆ ಎಂಬುದು ಮರೀಚಿಕೆಯಾಗಿತ್ತು. ಆ ವೇಳೆ ಬಾಲ್ಯದಲ್ಲೇ ವಿವಾಹವಾಗಿದ್ದ ಸಾವಿ ತ್ರಿಬಾಯಿ ಗಂಡನ ಸಹಕಾರದಿಂದ ವಿದ್ಯಾಭ್ಯಾಸ ಪೂರೈಸಿ, ಬಡ ಹೆಣ್ಣು ಮಕ್ಕಳ ಓದಿಗೆ ಸಹಕರಿಸಿ ದೇಶದ ಮೊದಲ ಶಿಕ್ಷಕಿಯಾದರು ಎಂದು ಹೇಳಿದರು.

ಓದಿನ ವಯಸ್ಸಿನಲ್ಲಿ ವಿದ್ಯಾರ್ಥಿನಿಯರು ಬೇರೆ ಹವ್ಯಾಸದ ಕಡೆ ಗಮನಹರಿಸದಿರಿ. ತದನಂತರ ಆಸಕ್ತಿ ಹೊಂದಿರುವ ಚಟುವಟಿಕೆಗಳಲ್ಲಿ ಭಾಗಿಯಾಗಿ. ಅಂಭೇಡ್ಕರ್ ಚಿಂತನೆಯಂತೆ ನಮ್ಮ ಬಾಳಿಗೆ, ನಾವೇ ಶಿಲ್ಪಿ ಗಳೆಂಬ ತತ್ವ ಮೈಗೂಡಿಕೊಂಡು ಮುನ್ನೆಡೆದರೆ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ ಎಂದರು.
ಬಿಎಸ್ಪಿ ಮುಖಂಡ ಕೆ.ಆರ್.ಗಂಗಾಧರ್ ಪ್ರಾಸ್ತಾವಿಕವಾಗಿ ಮಾತನಾಡಿ ಯಾವುದೇ ಜಾತಿ, ಧರ್ಮ ವಿಲ್ಲದೇ, ಉತ್ತಮ ವಿಚಾರೆಧಾರೆಯಿಂದ ಸಹೋದರತ್ವ ಸಮಿತಿ ಸ್ಥಾಪಿತಗೊಂಡಿದೆ. ೫೦ಕ್ಕೂ ಹೆಚ್ಚು ಜನಾಂಗವು ಒಗ್ಗಟ್ಟಿನಿಂದ ಕೂಡಿದೆ. ಜೊತೆಗೆ ಪ್ರತಿ ಶನಿವಾರ ಸಭೆ ಕರೆದು ಕುಂದುಕೊರತೆ, ವಿಚಾರವಿನಿಮಯ ನಡೆ ಸುತ್ತಿದೆ ಎಂದು ತಿಳಿಸಿದರು
ಈಗಾಗಲೇ ಸಹೋದರತ್ವ ಸಮಿತಿಯು ನಿರ್ಗತಿಕರಿಗೆ ಮನೆ ನಿರ್ಮಾಣ, ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆಗೆ ಸ್ಪಂದನೆ, ನಿರುದ್ಯೋಗಿಗಳಿಗೆ ಪರಿಕರಗಳ ವಿತರಣೆಯನ್ನು ಸಮಿತಿ ಸದಸ್ಯರುಗಳ ಸ್ವಂತ ಖರ್ಚಿ ನಿಂದ ಮಾಡುತ್ತಿದೆ. ಅಲ್ಲದೇ ಕೋವಿಡ್‌ನಲ್ಲಿ ಸಾವಿನ ಭಯದ ನಡುವೆಯು ಸೇವೆ ಸಲ್ಲಿಸಿದ ಅನೇಕ ದಾದಿಯರಿಗೆ ಗೌರವಿಸುವ ಕೆಲಸ ಮಾಡಿದೆ ಎಂದರು.
ಸಂಪಾದಕ ಅನಿಲ್‌ಆನಂದ್ ಮಾತನಾಡಿ, ಹಿಂದಿನ ಸಮಯದಲ್ಲಿ ಮಹಿಳೆಯರು ಭಾಗಿನಿಂದ ಹೊರ ಬರುವುದು ಕಷ್ಟಸಾಧ್ಯವಾಗಿತ್ತು. ಕಾಲಕ್ರಮೇಣ ಮಹತ್ಮರ ವಿಚಾರಧಾರೆಗಳಿಂದ ಇಂದು ದೇಶ ಪ್ರತಿ ಕ್ಷೇತ್ರಗ ಳಲ್ಲಿ ಹೆಣ್ಣು ಭಾಗಿಯಾಗಿ ಕರ್ತವ್ಯ ನಿರ್ವಹಿಸಲು ಅಂಬೇಡ್ಕರ್ ವಿಚಾರಧಾರೆಗಳೇ ಮುಖ್ಯ ಕಾರಣ ಎಂದು ತಿಳಿಸಿದರು.

ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹೋದರತ್ವ ಸಮಿತಿ ಸ್ಥಾಪಕ ಕೆ.ಟಿ.ರಾಧಾಕೃಷ್ಣ, ಟೌನ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಎಂ.ಎಂ.ಹಾಲಮ್ಮ, ಮುಖಂಡರುಗಳಾದ ಆರ್.ವಸಂತ್, ಕೆ.ಎಸ್.ಮಂಜುಳಾ, ಕಲಾ ವತಿ, ಟಿ. ಹೆಚ್.ರತ್ನ, ರಾಮಚಂದ್ರ, ಹುಣಸೇಮಕ್ಕಿ ಲಕ್ಷ್ಮಣ್ ಹಾಜರಿದ್ದರು.
-ಸುರೇಶ್ ಎನ್.