ತುಮಕೂರು:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇವೆ,ಅದರಲ್ಲಿ ಕೆರೆ ಅಭಿವೃದ್ಧಿ ಯೋಜನೆಯೂ ಒಂದು,ನಾವು ಕೆರೆ ಅಭಿವೃದ್ಧಿ ಮಾಡಿಕೊಡುತ್ತೇವೆ ಆದರೆ ಅದನ್ನು ಬಹಳ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಕರ್ತವ್ಯ ಆ ಗ್ರಾಮಸ್ಥರ ಮೇಲಿರುತ್ತದೆ.
ಪೂಜ್ಯ ಡಾ||ವೀರೇಂದ್ರಹೆಗ್ಗಡೆರವರ ದೂರದೃಷ್ಠಿತ್ವದಿಂದ ಊರಿಗೊಂದು ಕೆರೆಯನ್ನು ಅಭಿವೃದ್ಧಿಪಡಿಸಿ ಆ ಭಾಗದ ರೈತರ ಜೀವನಕ್ಕೆ ಹೊಸ ಚೈತನ್ಯ ನೀಡುವುದರ ಜೊತೆಗೆ ಪ್ರಾಣಿಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಕೆರೆಯ ದಂಡೆಯ ಮೇಲೆ ನೂರಾರು ಗಿಡಮರಗಳನ್ನು ಬೆಳೆಸುತ್ತಿದ್ದೇವೆ,ತುಮಕೂರು ಜಿಲ್ಲೆಯಲ್ಲಿ ಈವರೆವಿಗೂ 72 ಕೆರೆಗಳನ್ನು ಅಭಿವೃದ್ಧಿಪಡಿಸಿದ್ದೇವೆ,ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಿ,ಕೆರೆಯ ಮುಂದಿನ ನಿರ್ವಹಣೆ ಗ್ರಾಮಸ್ಥರ ಮೇಲಿರುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣರವರು ತಿಳಿಸಿದರು.
ಅವರು ಇಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಪಿ.ಗೊಲ್ಲಹಳ್ಳಿಯ ಕುರಿಕೆಂಪನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಅಭಿವೃದ್ಧಿ ಪಡಿಸಿದ 777ನೇ ನಮ್ಮೂರು ನಮ್ಮ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿ ಶುಭ ಹಾರೈಸಿ ಮಾತನಾಡಿದರು.

ಜನಜಾಗೃತಿವೇದಿಕೆಯ ಸದಸ್ಯ ಶಿವಕುಮಾರ್ ಮಾತನಾಡಿ, ಯಾವ ಸರ್ಕಾರಗಳು ಮಾಡದ ಕೆಲಸಗಳನ್ನು ಪೂಜ್ಯ ಖಾವಂದರಾದ ಡಾ||ಡಿ.ವೀರೇಂದ್ರಹೆಗ್ಗಡೆರವರು ಮಾಡುತ್ತಿದ್ದಾರೆ,ಈ ನಾಡಿನ ಪ್ರತಿ ಹೆಣ್ಣುಮಕ್ಕಳು ಬ್ಯಾಂಕ್ ಗಳ ಮೂಲಕ ಸಾಲ ಪಡೆದು ಆರ್ಥಿಕ ಸ್ವಾವಲಂಬಿಗಳಾಗಿ ಜೀವನ ಸಾಗಿಸುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ಧರ್ಮಸ್ಥಳ ಸಂಘ,ಈ ನಾಡಿನ ರೈತರು ಚೆನ್ನಾಗಿರಬೇಕುಎಂದು ಅರಿತು ನಮ್ಮ ಊರಿನ ಕೆರೆಯನ್ನು ಕೇವಲ 1 ತಿಂಗಳಲ್ಲಿ ಅಭಿವೃದ್ಧಿಗೊಳಿಸಿದ್ದಾರೆ ಅವರಿಗೆ ಊರಿನ ಗ್ರಾಮಸ್ಥರ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.
ವಿಶ್ವವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ರಂಗನಾಥ.ಕೆ.ಮರಡಿರವರು ಮಾತನಾಡಿ ಇಡೀ ರಾಜ್ಯದ ೩೧ ಜಿಲ್ಲೆಗಳಲ್ಲಿ ಧರ್ಮಸ್ಥಳ ಸಂಘ ಕೆಲಸ ನಿರ್ವಹಿಸುತ್ತಿದೆ,ಜನಸಾಮಾನ್ಯರಿಗೆ ಅಷ್ಟು ಸುಲಭವಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಸಿಗುವುದಿಲ್ಲ ಹೆಂಗಸರು ಕೇವಲ ಜೆರಾಕ್ಸ್ ಆಧಾರ್ ಕಾರ್ಡನ್ನು ನೀಡಿ 1 ಲಕ್ಷದಿಂದ 5 ಲಕ್ಷದವರೆಗೆ ಸಾಲ ಪಡೆದು ಆರ್ಥಿಕ ಸ್ವಾವಲಂಬಿಯಾಗಿ ಜೀವನ ನಿರ್ವಹಿಸುತ್ತಿದ್ದಾಳೆ ಅಂದರೆ ಅದಕ್ಕೆ ಕಾರಣ ಪೂಜ್ಯ ಹೆಗ್ಗಡೆರವರು. ಅಷ್ಟೇ ಅಲ್ಲದೆ ಮನೆ ಇಲ್ಲದ ನಿರಾಶ್ರಿತರಿಗೆ ವಾತ್ಸಲ್ಯ ಯೋಜನೆಯಡಿ ಮನೆ,ಮಾಸಾಶನ,ಶುದ್ಧ ಕುಡಿಯುವ ನೀರು,ನಮ್ಮ ಊರಿಗೆ ಬಂದು ಒಂದು ಕೆರೆ ನಿರ್ಮಿಸಿದ್ದಾರೆ ಅಂದರೆ ಅವರಿಗೆ ನಾವು ಸಾಯುವ ವರೆವಿಗೂ ಚಿರಋಣಿಯಾಗಿರಬೇಕೆಂದು ತಿಳಿಸಿದರು.

ಗ್ರಾಮಪಂಚಾಯತ್ ಅಧ್ಯಕ್ಷರಾದ ಓಂಕಾರಸ್ವಾ,ಮಿರವರು ಮಾತನಾಡುತ್ತಾ ಕೆರೆ ಅಭಿವೃದ್ಧಿ ಆದರೆ ವರ್ಷಕ್ಕೆ ೩ಬೆಳೆಗಳನ್ನು ರೈತ ಬೆಳೆಯುತ್ತಾನೆ ಅವನಿಗೇ ಲಾಭ,ಜೊತೆಗೆ ದೇಶದ ಜಿಡಿಪಿಯು ಸಹ ಅಭಿವೃದ್ಧಿ ಆಗುತ್ತದೆ,ಪ್ರತಿಯೊಬ್ಬರೂ ಕೆರೆಯ ಅಂಗಳದಲ್ಲಿ ಅವರ ಹೆಸರಿನಲ್ಲಿ 2 ಗಿಡಗಳನ್ನು ನೆಟ್ಟು ಬೆಳೆಸಿ ಎಂದು ಕರೆ ನೀಡಿದರು.
ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹನುಮಂತರಾಯಪ್ಪನವರು ಮಾತನಾಡುತ್ತಾ ಕೆರೆಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾದ ಕರ್ತವ್ಯ ಗ್ರಾಮಸ್ಥರ ಮೇಲಿದೆ,ಅನಾವಶ್ಯಕವಾಗಿ ಕೆರೆಯ ಮಣ್ಣನ್ನು ತೆಗೆಯಬಾರದು,ಒಂದು ಕರೆ ಅಭಿವೃದ್ಧಿ ಆಗಿ ಅಲ್ಲಿ ನೀರು ನಿಂತರೆ ಸಾವಿರಾರು ಬೋರ್ ವೆಲ್ ಗಳು ಓಡುತ್ತವೆ ಇದರಿಂದ ರೈತರಿಗೇ ಅನುಕೂಲ ಎಂದು ತಿಳಿಸಿದರು.
ವೇದಿಕೆಯಲ್ಲಿ ಪಿಡಿಓ ಗಂಗಾಧರ್,ಯೋಜನಾಧಿಕಾರಿ ಪಿ.ಬಿ.ಸಂದೇಶ್,ಕೃಷಿ ಮೇಲ್ವಿಚಾರಕರಾದ ರಾಘವೇಂದ್ರ,ಡಾ||ತುಳಸಿಪ್ರಸನ್ನ,ರAಗಸ್ವಾಮಯ್ಯ,ಪೋಲೀಸ್ ಕರಿಯಣ್ಣ,ಶಿವರಾಜು,ಶಶಿಧರ್,ರಂಗಪ್ಪ,ಸೋಮಣ್ಣ ಮುಂತಾದವರು ಉಪಸ್ಥಿತರಿದ್ದರು.