ತುಮಕೂರು: ಬೆಳ್ಳಾವಿ ಕಾರದ ಮಠದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪರಮ ಪೂಜ್ಯ ಡಾ|| ಡಿ.ವೀರೇಂದ್ರಹೆಗ್ಗೆಡೆಯವರು ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರು ಮಾಡಿದ 5 ಲಕ್ಷ ಮೊತ್ತದ ಡಿ.ಡಿ.ಯನ್ನು ವಿತರಣೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತುಮಕೂರು 1 ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ರವರು ವೀರಬಸವ ಮಹಾಸ್ವಾಮಿಯವರಿಗೆ ಹಸ್ತಾಂತರ ಮಾಡಿದರು.ತಾಲ್ಲೋಕಿನ ಯೋಜನಾಧಿಕಾರಿಗಳಾದ ಸಂದೇಶ್.ಪಿ.ಬಿ ರವರು ಮಧ್ಯವರ್ಜನ ಶಿಬಿರದ ಅಧ್ಯಕ್ಷರಾದ ಬಸವಾರಾಧ್ಯ ಹಾಗೂ ವ್ಯವಸಾಯ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ರಮೇಶ್ ರವರು ಬೆಳ್ಳಾವಿ ವಲಯದ ಮೇಲ್ವಿಚಾರಕರಾದ ವೈ.ಎಂ.ಸುದರ್ಶನ್, ಸೇವಾಪ್ರತಿನಿಧಿಗಳು, ದೇವಸ್ಥಾನದ ಭಕ್ತಾದಿಗಳು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ