ಕೆ.ಆರ್.ಪೇಟೆ-ಭೀಮ-ದುರ್ಯೋಧನರ-ಗದಾಯುದ್ದ-ಪೌರಾಣಿಕ- ನಾಟಕ-ಪ್ರದರ್ಶನ-ಕಾರ್ಯಕ್ರಮ

ಕೆ.ಆರ್.ಪೇಟೆ: ಗ್ರಾಮಿಣ ಪ್ರದೇಶದ ರಂಗಭೂಮಿ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ಪುರಸ್ಕಾರದ ಕೊರತೆಯಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ರಂಗಭೂಮಿ ಕಲಾವಿದರಿಗೆ ಸಹಾಯ ಹಸ್ತ ಚಾಚಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ವಿಜಯ ರಾಮೇಗೌಡ ಕರೆನೀಡಿದರು.‌


ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಜರುಗಿದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ರಥೋತ್ಸವದ ಅಂಗವಾಗಿ ಗ್ರಾಮದ ಮಾರುತಿ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ “ಅಭಿಮನ್ಯು ವಿವಾಹ ಅಥವಾ ಭೀಮ-ದುರ್ಯೋಧನರ ಗದಾಯುದ್ದ” ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಿನಿಮಾ, ದೂರದರ್ಶನ, ಮೊಬೈಲ್ ಸಂಸ್ಕೃತಿಯ ಆಕ್ರಮಣಗಳ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಯುವಕರು ಪೌರಾಣಿಕ ನಾಟಕಗಳನ್ನು ಕಲಿತು ಪ್ರದರ್ಶಿಸುತ್ತಿರುವುದು ಶ್ಲಾಘನೀಯ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗ್ರಾಮೀಣ ಕಲಾವಿದರು ತಮ್ಮ ಸ್ವಂತ ಜೇಬಿನಿಂದ ಹಣ ಖರ್ಚು ಮಾಡಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಒಂದೂAದು ನಾಟಕ ಪ್ರದರ್ಶನಕ್ಕೂ ಲಕ್ಷಾಂತರ ರೂ ಹಣ ವೆಚ್ಚವಾಗುತ್ತದೆ. ಡ್ರಾಮಾ ಮಾಸ್ಟರ್, ನಾಟಕದ ಸೀನರಿಗಳು, ಪಾತ್ರಗಳಿಗೆ ತಕ್ಕಂತಹ ವೇಷ ಭೂಷಣಗಳು ಸೇರಿದಂತೆ ಎಲ್ಲದಕ್ಕೂ ಕಲಾವಿದರೇ ಹಣ ಹೊಂದಿಸಿಕೊಳ್ಳಬೇಕಾದ ಪರಿಸ್ಥಿಯಿದೆ.

ಆದ ಕಾರಣ ಗ್ರಾಮಿಣ ರಂಗಭೂಮಿ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ನೆರವಿನ ಅವಶ್ಯಕತೆಯಿದೆ. ಎಂದ ವಿಜಯ ರಾಮೇಗೌಡ ಪೌರಾಣಿಕ ನಾಟಕಗಳಲ್ಲಿ ನಾವು ಅನುಸರಿಸಬೇಕಾದ ಬದುಕಿನ ಮಾರ್ಗದ ಸಂದೇಶವಿದೆ. ಸತ್ಯ ಮತ್ತು ಧರ್ಮಕ್ಕೆ ಎಂದಿಗೂ ಜಯ. ಅಧರ್ಮ ಎಂದೂ ಗೆಲ್ಲುವುದಿಲ್ಲ ಎನ್ನುವುದನ್ನು ನಮ್ಮ ಹಿರಿಯರು ಪೌರಾಣಿಕ ನಾಟಕಗಳ ಮೂಲಕ ಸಾರಿದ್ದಾರೆಂದರು.

ಗ್ರಾಮೀಣ ಯುವಕ ಸಂಘಗಳು ಕೇವಲ ನಾಟಕ ಪ್ರದರ್ಶನಕ್ಕೆ ಸೀಮಿತವಾಗದೆ ಗ್ರಾಮದ ಸಮಗ್ರ ಅಭಿವೃದ್ದಿಗೆ ಚಿಂತಿಸಬೇಕು. ಪಕ್ಷ ರಾಜಕಾರಣವನ್ನು ಬದಿಗೊತ್ತಿ ತಮ್ಮ ಗ್ರಾಮಕ್ಕೆ ಬರುವ ಜನಪ್ರತಿನಿಧಿಗಳ ಮುಂದೆ ತಮ್ಮ ಗ್ರಾಮದ ಸಮಸ್ಯೆಗಳ ಅರಿವು ಮೂಡಿಸಿ ಅನುಕೂಲ ಪಡೆದುಕೊಳ್ಳಬೇಕು ಎಂದು ವಿಜಯ ರಾಮೇಗೌಡ ಕಿವಿಮಾತು ಹೇಳಿದರು.


ಕಾರ್ಯಕ್ರಮದಲ್ಲಿ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರು ಹಾಗೂ ಸಮಾಜ ಸೇವಕರಾದ ಮಲ್ಲಿಕಾರ್ಜುನ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಸಮಾಜ ಸೇವಕರು ಹಾಗೂ ಉದ್ಯಮಿ ಹೊಸಹೊಳಲು ನಂಜುಂಡಸ್ವಾಮಿ, ತಾಲ್ಲೂಕು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು, ಹೆಮ್ಮನಹಳ್ಳಿ ಮಂಜೇಗೌಡ, ಹೊಸಹೊಳಲು ಸೊಸೈಟಿ ಮಾಜಿ ಅಧ್ಯಕ್ಷ ಚಂದ್ರೇಗೌಡ, ಸೊಸೈಟಿ ಹಾಲಿ ನಿರ್ದೇಶಕರಾದ ಪ್ರಕಾಶ್, ಕೃಷ್ಣೇಗೌಡ, ಗ್ರಾಮ ಮುಖಂಡರಾದ ಪ್ರಕಾಶ್, ಹಿರಿಯ ಕಲಾವಿದರಾದ ಪಾಂಡವಪುರ ನಾಗಲಿಂಗು, ಹರಿಹರಪುರ ಮಹದೇವೇಗೌಡ, ಶಂಕರೇಗೌಡ, ರಾಗಿಮುದ್ದನಹಳ್ಳಿ ದೇವರಾಜು, ಬಸವರಾಜು, ಅಬಾರಾಶೆ ಚಂದ್ರಶೇಖರ್, ಮತ್ತಿತರರು ಉಪಸ್ಥಿತರಿದ್ದರು.

  • ಶ್ರೀನಿವಾಸ್‌ ಆರ್.‌ ಕೆ.ಆರ್.ಪೇಟೆ

Leave a Reply

Your email address will not be published. Required fields are marked *

× How can I help you?