ಕೃಷ್ಣರಾಜಪೇಟೆ;ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯಲ್ಲಿ ಅಜ್ಜ ಅಜ್ಜಿಯಂದಿರ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಪುಟಾಣಿ ಮಕ್ಕಳ ಸಂಭ್ರಮದಲ್ಲಿ ತಮ್ಮ ಹಿರಿತನವನ್ನು ಮರೆತು ಮಕ್ಕಳಂತೆ ಭಾಗವಹಿಸಿದ ಹಿರಿಯ ನಾಗರೀಕರಾದ ಅಜ್ಜ ಅಜ್ಜಿಯಂದಿರು ಮಕ್ಕಳೊಂದಿಗೆ ಹಾಡಿ ಕುಣಿದು ಸಂಭ್ರಮಿಸಿದರು.
ಕೃಷ್ಣರಾಜಪೇಟೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಗೌಸ್ ಖಾನ್ ದಂಪತಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶಾದ್ಯಂತ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕೆ.ಆರ್. ಪೇಟೆ ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯಲ್ಲಿ ವಿಶೇಷವಾಗಿ ಕಾರ್ಯಕ್ರಮವನ್ನು ರೂಪಿಸಿ ಅಜ್ಜ ಅಜ್ಜಿಯರು ತಮ್ಮ ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ಮೂಲಕ ಹಿರಿಯ ನಾಗರೀಕರ ದಿನಾಚರಣೆಗೆ ಅರ್ಥ ತುಂಬಿದ್ದಾರೆ ಎಂದು ಹೇಳಿದರು.
ಸ್ಕೂಲ್ ಆಫ್ ಇಂಡಿಯಾ ಶಾಲೆಯ ಪ್ರಾಂಶುಪಾಲರಾದ ಶೈನಿ ಮೇರಿ ಡಯಾಸ್ ಮಾತನಾಡಿ ಹಿರಿಯ ಚೇತನಗಳಿಗೆ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಅವರ ಮನಸ್ಸಿಗಲ್ಲ,ತಮ್ಮ ಹಿರಿತನವನ್ನು ಮರೆತು ಮಕ್ಕಳೊಂದಿಗೆ ಮಕ್ಕಳಾಗಿ ಸಂತೋಷ ಸಂಭ್ರಮದಿಂದ ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಲೆಯ ಆಡಳಿತ ಮಂಡಳಿಯು ಅವಕಾಶ ಮಾಡಿಕೊಟ್ಟಿದೆ. ನಮ್ಮ ಶಾಲೆಯ ಮಕ್ಕಳ ಅಜ್ಜ ಅಜ್ಜಿಯಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಮಂಡ್ಯ ಜಿಲ್ಲಾ ಖಾದಿ ಗ್ರಾಮದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಡಾ. ಶ್ರೀನಿವಾಸ ಶೆಟ್ಟಿ, ಸ್ವರ್ಣ ಜಯಂತಿ ಶಹರಿ ರೋಜಗಾರ್ ಮಾಜಿ ಅಧ್ಯಕ್ಷೆ ಚಂದ್ರಕಲಾ, ಮಹ್ಮದ್ ಅಕ್ಬರ್, ಸಯ್ಯದ್ ಖಲೀಲ್ ಸೇರಿದಂತೆ ಮಕ್ಕಳ ನೂರಾರು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ , ಕೃಷ್ಣರಾಜಪೇಟೆ