ಚಿಕ್ಕಮಗಳೂರು- ಹಿರೇಮಗಳೂರು ಶ್ರೀ ಕೋದಂಡರಾಮಚAದ್ರಸ್ವಾಮಿ ದೇವಸ್ಥಾನ ದ ಸಮೀಪ ಪ್ರವಾಸೋದ್ಯಮ ಇಲಾಖೆಯ ಅನುದಾನದ ಅಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಪಂಚ ವಟಿ ಯಾತ್ರಿ ನಿವಾಸದ ಕಟ್ಟಡವನ್ನು ಭಾನುವಾರ ಧಾರ್ಮಿಕ ಪೂಜಾಕೈಂಕಾರ್ಯಗಳ ನಡುವೆ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ ಲೋಕಾರ್ಪಣೆಗೊಳಿಸಿದರು.
ಶ್ರೀ ಕೋದಂಡರಾಮಚಂದ್ರ ವಿಗ್ರಹವನ್ನು ದೇವಾಲಯದ ಪ್ರಧಾನ ಅರ್ಚಕರ ನೇತೃತ್ವ ದಲ್ಲಿ ಸಮಿತಿ ಸದಸ್ಯರುಗಳು, ಗ್ರಾಮಸ್ಥರು ಸಂಪ್ರದಾಯಿಕ ಪಂಚೆ, ಶಲ್ಯ ಧರಿಸಿ ನೂತನ ಕಟ್ಟಡದ ಒಳಾಂಗಣಕ್ಕೆ ಕರೆತಂದರು. ಕನ್ನಡ ಪೂಜಾರಿ ಪೂಜಾರಿ ಹಿರೇಮಗಳೂರು ಕಣ್ಣನ್ ಶೋಕ, ಮಂತ್ರಗಳ ಮುಖೇನಾ ಶ್ರೀರಾಮ ನಲ್ಲಿ ಪ್ರಾರ್ಥನೆ ಸಲ್ಲಿಸಿ ಕಟ್ಟಡದ ಒಳಿತಿಗೆ ಶುಭ ಹಾರೈಸಿದರು.
ಬಳಿಕ ಶ್ರೀರಾಮನ ವಿಗ್ರಹ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ದೇವಾಲಯ ಸುತ್ತಲು ಮೆರವಣಿಗೆ ನಡೆಸಿದರು. ಗ್ರಾಮದ ಹಳೇ ವಿದ್ಯಾರ್ಥಿಗಳು ಭಕ್ತರಿಗೆ ಪಾನಕ ಹಂಚಿದರು. ಮನೆಗಳ ಸಮೀಪ ವಿಗ್ರಹ ಮೂರ್ತಿ ಬರುತ್ತಿದ್ದಂತೆ ಸ್ಥಳೀಯ ನಿವಾಸಿಗಳು, ಅಂಗಡಿ ಮುಂಗಟ್ಟುದಾರರು ರಸ್ತೆಯನ್ನು ಶುಚಿಗೊಳಿಸಿ ಶ್ರೀ ಕೋದಂಡರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಶ್ರೀಕೋದಂಡರಾಮನ ಸನ್ನಿಧಾನಕ್ಕೆ ಆಗಮಿಸುವಂಥ ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಪಂಚ ವಟಿ ಕುಟೀರ ಯಾತ್ರಿ ನಿವಾಸ ನಿರ್ಮಿಸಿ ದೂರದೂರಿನಿಂದ ಬರುವಂಥ ಭಕ್ತಾಧಿಗಳಿಗೆ ರಿಯಾಯಿತಿ ದರದಲ್ಲಿ ಸೂಕ್ತ ವ್ಯವ ಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುಮಾರು 144 ವರ್ಷಗಳಿಗೊಮ್ಮೆ ಬರುವಂಥ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ಆಚರಿಸುತ್ತಿರುವ ಕಾರಣ ಯಾತ್ರಿ ನಿವಾಸವನ್ನು ಇಂದೇ ಲೋಕಾರ್ಪಣೆ ಮಾಡಲಾಗಿದೆ. ಕ್ಷೇತ್ರದ ಮಾಜಿ ಶಾಸಕರು ಪ್ರವಾ ಸೋದ್ಯಮ ಸಚಿವರಾದ ವೇಳೆಯಲ್ಲಿ 2 ಕೋಟಿ ಅನುದಾನ ಮಂಜೂರಾಗಿತ್ತು. ಇದೀಗ ಯಾತ್ರಿಕರ ನಿವಾಸ ಪೂರ್ಣ ಗೊಂಡು ಭಕ್ತಾಧಿಗಳಿಗೆ ಸಮರ್ಪಿಸಲಾಗಿದೆ ಎಂದು ಹೇಳಿದರು.
ಪ್ರಸ್ತುತ ರಾಜ್ಯ ಸರ್ಕಾರದಿಂದ ಯಾತ್ರಿ ನಿವಾಸದ ಕಾಂಪೌಂಡ್ ನಿರ್ಮಾಣಕ್ಕೆ 50 ಲಕ್ಷ ರೂ. ಮಂ ಜೂರಾಗಿದ್ದು ಈ ಪೈಕಿ 25 ಲಕ್ಷ ಬಿಡುಗಡೆಗೊಂಡಿದೆ. ಒಟ್ಟಾರೆ ಈ ಪಂಚಕುಟಿ ಕುಟೀರಕ್ಕೆ 2.50 ಕೋಟಿ ವ್ಯಯಿಸಲಾಗಿದೆ. ಇದೀಗ ಪ್ರಸಿದ್ಧ ದೇವಾಲಯಕ್ಕೆ ಯಾತ್ರಿ ನಿವಾಸದ ಕೊರತೆಯನ್ನು ನೀಗಿಸಿ ಭಕ್ತಾಧಿಗಳಿಗೆ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಯಾತ್ರಿ ನಿವಾಸಕ್ಕೆ ಭೇಟಿ ಕೊಡುವ ಭಕ್ತಾಧಿಗಳು ಹೋಂಸ್ಟೇ ಅಥವಾ ರೆಸಾರ್ಟ್ ಮಾದರಿಯಂತೆ ತಿಳಿ ಯದೇ ದೇವಾಲಯ ಆಶ್ರಯ ತಾಣವೆಂದು ಭಾವಿಸಿ, ಶಾಂತಿಯಿAದ ತಂಗುವ ಮೂಲಕ ಸ್ವಚ್ಚತೆ ಕಾಪಾಡ ಬೇಕು. ಅಲ್ಲದೇ ಈ ಕಟ್ಟಡಕ್ಕೆ ಅಡುಗೆ ಮನೆಯ ಅವಶ್ಯಕವಿರುವ ಹಿನ್ನೆಲೆ ಸದ್ಯದಲ್ಲೇ ಅಡುಗೆ ಕೋಣೆಗೆ ಅನು ದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ದೇವಾಲಯ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ಮಾತನಾಡಿ ಭಾರ್ಗರಿಪುರಿ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಾಲಯಕ್ಕೆ ದೇಶ-ವಿದೇಶಗಳಲ್ಲಿ ಭಕ್ತಗಣವಿದೆ. ವಿಶೇಷವಾಗಿ ಈ ಬ್ರಹ್ಮ ರಥೋ ತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು, ದೇವಾಲಯ ಒಕ್ಕಲಿನವರು ಸಂತೋಷದಿಂದ ಪಾಲ್ಗೊಂಡು ಜಾತ್ರಾ ಮಹೋತ್ಸವ ಸಂಭ್ರಮದಿಂದ ಆಚರಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಸುಜಾತ ಶಿವಕುಮಾರ್, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಗುತ್ತಿಗೆದಾರ ಜಯಣ್ಣ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ದ ಅಧ್ಯಕ್ಷ ಬಿ.ಹೆಚ್.ಹರೀಶ್, ನಗರಸಭೆ ಸದಸ್ಯೆ ವಿದ್ಯಾ ಬಸವರಾಜ್, ಹಿರೇಮಗಳೂರು ಗ್ರಾಮಸ್ಥ ರಾದ ಹೆಚ್.ಕೆ.ಕೇಶವಮೂರ್ತಿ, ಆಶಾ ರಂಗನಾಥ್, ಕುಲಕರ್ಣಿ, ರಮಾ ಪ್ರಸಾದ್, ಪ್ರವಾಸೋದ್ಯಮ ಇಲಾಖೆ ರೋಹಿತ್, ನಿರ್ಮಿತಿ ಕೇಂದ್ರದ ಗಂಗಾಧರ್, ದೇವಾಲಯ ಟ್ರಸ್ಟಿ ಎಂ.ಎನ್.ರಂಗನಾಥ್ ಮತ್ತಿತರರಿದ್ದರು.