ಚಿಕ್ಕಮಗಳೂರು- ಭಾರ್ಗವಪುರಿ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರ ದೇವಾಲಯ ಬ್ರಹ್ಮ ರಥೋತ್ಸವ ಅಂಗವಾಗಿ ಬಿಜೆಪಿ ಓಬಿಸಿ ಮಂಡಲ ನಗರಾಧ್ಯಕ್ಷ ಸಿ.ಟಿ.ಜಯವರ್ಧನ್ ಸಕು ಕುಟುಂಬದೊಂದಿಗೆ ಭಾನುವಾರ ದೇವಾಲಯಕ್ಕೆ ಭೇಟಿ ನೀಡಿ ಲೋಕಕಲ್ಯಾಣ ಹಿತಕ್ಕಾಗಿ ವಿಶೇಷ ಪೂಜೆ ಹಾ ಗೂ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಜಯವರ್ಧನ್ ಜಿಲ್ಲೆಯಾದ್ಯಂತ ವಿಪರೀತ ತಾಪಮಾನದಿಂದ ಜನತೆ ಕಂಗಾಲಾಗಿದ್ದಾರೆ. ರೈತರಿಗೆ ಮಳೆಯಿಲ್ಲದೇ ಫಸಲು ಕೂಡಾ ಕೈಗೆ ಸಿಗುತ್ತಿಲ್ಲ. ಜೊತೆಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಸಕಲ ಸೃಷ್ಟಿಕರ್ತ ಶ್ರೀರಾಮನು ಸಕಲ ಜೀವರಾಶಿಗೂ ಮಳೆ, ಬೆಳೆ ಕಲ್ಪಿಸಿ ಲೋಕದ ಹಿತಕಾ ಪಾಡಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಾಲಯ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್, ಬಿಜೆಪಿ ಮಾಧ್ಯಮ ಪ್ರಮುಖ್ ಹೆಚ್.ಕೆ.ಕೇಶವಮೂರ್ತಿ, ದೇವಾಲಯ ಟ್ರಸ್ಟಿಗಳು, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- ಸುರೇಶ್ ಎನ್.