ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಮತ್ತು ಬಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಹೆಚ್.ಟಿ.ಮಂಜು ಅವರು ಜೆಡಿಎಸ್ ಕಾರ್ಯಕರ್ತರು ಮತ್ತು ಸ್ಪರ್ಧಿಸಲು ಇಚ್ಚಿಸುವ ಆಕಾಂಕ್ಷಿಗಳ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕರು 2028ಕ್ಕೆ ನಮ್ಮ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷವು ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರು ಉದಯಿಸುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿದೆ. ಹಾಗಾಗಿ ಕಾರ್ಯಕರ್ತರು ಧೃತಿಗೆಡಬೇಡಿ ಈಗ ನಮ್ಮ ಮಂದಿರುವ ಸೊಸೈಟಿಗಳ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಕಾರ್ಯಕರ್ತರ ರಕ್ಷಣೆಗೆ ನಾನು ದಿನದ 24ಗಂಟೆಗಳ ಕಾಲವೂ ನಿಮ್ಮ ಸೇವೆಯನ್ನು ಮಾಡಲಿಕ್ಕೆ ಸಿದ್ದನಿದ್ದೇನೆ. ಸಂವಿಧಾನಿಕ ವೇದಿಕೆಯಾದ ವಿಧಾನಸಭೆಯಲ್ಲಿ ಕ್ಷೇತ್ರದ ಪ್ರತಿನಿಧಿಯಾಗಿ ಜನರ ಪರವಾಗಿ ಧ್ವನಿಎತ್ತಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಎಚ್.ಟಿ.ಮಂಜು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಸಹಕಾರ ಸಂಘದ ಚುನಾವಣೆಗಳು ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ ಆದ್ದರಿಂದ ಸೂಕ್ತ ಅಭ್ಯರ್ಥಿಗಳನ್ನು ಸ್ಥಳೀಯ ಮುಖಂಡರೇ ಆಯ್ಕೆ ಮಾಡಿ, ವಿರೋಧಿ ಅಭ್ಯರ್ಥಿಗಳು ಎಷ್ಟೇ ಪ್ರಭಾವಿ ಆಗಿದ್ದರೂ ನಮ್ಮ ಪಕ್ಷದ ಕಾರ್ಯಕರ್ತರು ಸೈನಿಕರಂತೆ ಗಟ್ಟಿಯಾಗಿ ಪಕ್ಷದ ಬೆಂಬಲವಾಗಿ ನಿಂತಿದ್ದಾರೆ ಧೈರ್ಯದಿಂದ ಚುನಾವಣೆ ಎದುರಿಸಿ ಎಂದು ಕಾರ್ಯಕರ್ತರಿಗೆ ಮನೋ ಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ತಾಲ್ಲೂಕು ಜನತಾದಳ (ಎಸ್) ಕಾರ್ಯಾಧ್ಯಕ್ಷ ಬಿ.ಎಂ.ರಾಮಚಂದ್ರನ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗೇಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಗಾಯಿತ್ರಿರೇವಣ್ಣ, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಜೆಡಿಎಸ್ ಹಿರಿಯ ಮುಖಂಡ ಗ್ರಾ.ಪಂ.ಮಾಜಿ ಅಧ್ಯಕ್ಷ ಚಟ್ಟೇನಹಳ್ಳಿ ನಾಗರಾಜು, ಗ್ರಾ.ಪಂ.ಸದಸ್ಯರಾದ ಯೋಗೇಂದ್ರ, ಜಗದೀಶ್, ರೇವಣ್ಣ, ಶ್ರೀಧರ್, ದಿಲೀಪ್, ತಿಮ್ಮೇಗೌಡ, ಡಿ.ಪಿ.ಕುಮಾರ್, ಸುನಿಲ್, ಸಣ್ಣೇಗೌಡ, ಪ್ರಸನ್ನಕುಮಾರ್, ಬಿ.ಟಿ.ಪ್ರಕಾಶ್, ಬಲ್ಲೇನಹಳ್ಳಿ ರಾಮಕೃಷ್ಣೇಗೌಡ, ಸುಧಾಕರ್, ಯೋಗೇಶ್, ಮತ್ತೀಕೆರೆ ಬೋರೇಗೌಡ, ರವಿ, ತಾ.ಪಂ.ಮಾಜಿ ಸದಸ್ಯ ಸೋಮಶೇಖರ್, ಗ್ರಾ.ಪಂ.ಅಧ್ಯಕ್ಷ ಪರಮೇಶ್, ಗಂಜಿಗೆರೆ ಸೊಸೈಟಿ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಗಂಗಾಧರ್, ಸೋಮಪ್ಪ, ಪರಮೇಶ್, ವಿಜಯ್‌ಕುಮಾರ್, ಮಂಗಳಮ್ಮ ರಾಜೇಗೌಡ, ಲೋಕೇಶ್, ಆನಂದ್, ಬೋರಲಿಂಗೇಗೌಡ, ಪ್ರತಾಪ್, ಮುದಗೆರೆ ದೇವೇಗೌಡ, ರಾಮಣ್ಣ, ಶಿವರಾಜು, ದೊರೆ, ಕೃಷ್ಣೇಗೌಡ, ಮಾವಿನಕೆರೆ ಮಂಜೇಗೌಡ, ಕೆ.ಬಸ್ತಿ ಧನಂಜಯ, ಪ್ರಸನ್ನ, ಯರಗನಹಳ್ಳಿ ಯೋಗೇಶ್ ಸೇರಿದಂತೆ ಸೊಸೈಟಿ ವ್ಯಾಪ್ತಿಯ ವಿವಿಧ ಗ್ರಾಮಗಳ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
- ಶ್ರೀನಿವಾಸ ಆರ್.