ಕೆ.ಆರ್.ಪೇಟೆ: ತಾಲ್ಲೂಕಿನ ಸಿಂಧುಘಟ್ಟ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಲಾವಣ್ಯಕುಮಾರ್ ಅವರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರಾದ ದಿವ್ಯಗಿರೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಲಾವಣ್ಯಕುಮಾರ್ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರವನ್ನು ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು.
ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯಕುಮಾರ್ ಮಾತನಾಡಿ ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರಮುಖವಾಗಿ ಕುಡಿಯುವ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಜೊತೆಗೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಜಾನುವಾರು ಕೊಟ್ಟಿಗೆ, ಚೆಕ್ ಡ್ಯಾಂ ನಿರ್ಮಾಣ, ಚರಂಡಿ ನಿರ್ಮಾಣ, ಬಂಡಿ ರಸ್ತೆ ನಿರ್ಮಾಣ, ಕೆರೆ ಕಟ್ಟೆಗಳ ಅಭಿವೃದ್ದಿ, ನೀರಾವರಿ ಕಾಲುವೆಗಳ ಅಭಿವೃದ್ಧಿ, ಕುರಿ-ಮೇಕೆ ಶೇಡ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಒತ್ತು ನೀಡಲಾಗುವುದು ಸಾರ್ವಜನಿಕರು ಜಾಬ್‌ಕಾರ್ಡ್ ಮಾಡಿಸಿಕೊಂಡು ನರೇಗಾ ಕಾಮಗಾರಿಯಲ್ಲಿ ಕೂಲಿ ಕೆಲಸ ಪಡೆದುಕೊಳ್ಳುವಂತೆ ಲಾವಣ್ಯಕುಮಾರ್ ಸಲಹೆ ನೀಡಿದರು.

ನೂತನ ಅಧ್ಯಕ್ಷೆ ಲಾವಣ್ಯಕುಮಾರ್ ಅವರನ್ನು ಶಾಸಕ ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ.ಲೋಕೇಶ್, ಗ್ರಾ.ಪಂ.ಉಪಾಧ್ಯಕ್ಷ ನಂಜಪ್ಪ, ಪಿಡಿಓ ಕೆ.ಜೆ.ವಾಣಿ, ಕಾರ್ಯದರ್ಶಿ ಮಾದಪ್ಪ, ಮುಖಂಡರಾದ ಚಿದಂಬರ್, ಸುರೇಶ್, ಕಿಟ್ಟಿ, ಹೇಮಂತ್, ಬಲರಾಮೇಗೌಡ, ಲಿಖಿತ್,ಸಂತೋಷ್, ಸದಸ್ಯರಾದ ಆಶಾಸೋಮಶೇಖರ್, ನಾಗೇಶ್, ಜ್ಯೋತಿ, ಅತ್ತಿಮರನಹಳ್ಳಿ ನವೀನ್, ರಾಜೇಶ್ವರಿ, ಆಶಾಸೋಮಶೇಖರ್, ಶರತ್, ಕ್ಯಾತನಹಳ್ಳಿ ಸೋಮಶೇಖರ್, ರೂಪಾ ಮಹಾದೇವ್, ಮತ್ತಿತರರು ಅಭಿನಂದಿಸಿದರು.
-ಶ್ರೀನಿವಾಸ್ ಆರ್.