ತುಮಕೂರು : ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ, ಕೆಸರಮಡು ಅಂಚೆಯ ಶ್ರೀಕ್ಷೇತ್ರ ಬೊಮ್ಮನಹಳ್ಳಿಯಲ್ಲಿನ ಶ್ರೀ ಆದಿಶಕ್ತಿ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮುಂಜಾನೆ ಬೊಮ್ಮನಹಳ್ಳಿ ಗ್ರಾಮಸ್ಥರಿಂದ ವಿಶೇಷ ಅಗ್ನಿಕುಂಡ ಸೇವೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಆದಿಶಕ್ತಿ ಮಾರಮ್ಮದೇವಿ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ನ ಉಪಾಧ್ಯಕ್ಷ ಎಂ.ಎನ್.ಚಿಕ್ಕಬುಡ್ಡೇಗೌಡರವರು ಮಾತನಾಡಿ, ತಾಯಿಯು ಹತ್ತಿರದ ಸುತ್ತಮುತ್ತಲಿನ ಹತ್ತು ಗ್ರಾಮಗಳಿಗೆ ದೇವರು ಹೋಗಿ ಬರುತ್ತದೆ, ಜಾತ್ರೆ ಪ್ರಾರಂಭಕ್ಕೂ ಮುಂಚಿತವಾಗಿ ಹಳ್ಳಿಗಳಿಗೆ ಸಂಚಾರ ಹೋಗುವ ತಾಯಿಯು ಅಗ್ನಿಕುಂಡ ಹಾಯುವ ದಿನಕ್ಕೆ ಮರಳಿ ಬೊಮ್ಮನಹಳ್ಳಿಗೆ ಬರುತ್ತದೆ, ತಾಯಿಯು ಬಂದಂತಹ ಸಂದರ್ಭದಲ್ಲಿ ಭಕ್ತಾದಿಗಳು ಕುಂಡವನ್ನು ಹಾಯುತ್ತಾರೆ. ಜೊತೆಗೆ ಇದು ಕಳೆದ ಹತ್ತಾರು ದಶಕಗಳಿಂದ ನಡೆದುಕೊಂಡು ಬಂದಂತಹ ಪದ್ಧತಿಯಾಗಿದೆ ಎಂದು ದೇವಸ್ಥಾನದ ಇತಿಹಾಸ ಹಾಗೂ ಜಾತ್ರಾ ವಿಶೇಷದ ಬಗ್ಗೆ ತಿಳಿಸಿದರು.

ಜೊತೆಗೆ ಈ ಜಾತ್ರೆಗೆ ಪಕ್ಕದ ಜಿಲ್ಲೆಗಳಾದ ರಾಮನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ ಸೇರಿದಂತೆ ಹಲವಾರು ಭಾಗಗಳಿಂದ ಜಾತ್ರೆಗೆ ಆಗಮಿಸುತ್ತಾರೆಂದು ತಿಳಿಸಿದರು.
ಟ್ರಸ್ಟ್ನ ಅಧ್ಯಕ್ಷರಾದ ನಿವೃತ್ತ ಪಿ.ಎಸ್.ಐ. ಗಂಗಪ್ಪರವರು ಮಾತನಾಡಿ ಈ ದೇವಾಲಯಕ್ಕೆ ಬಹಳ ಪ್ರಾಮುಖ್ಯತೆಯನ್ನು ನಾವು ಏಕೆ ಕೊಡುತ್ತಿದ್ದೇವೆಂದರೆ ಬೊಮ್ಮನಹಳ್ಳಿಗೆ ಮೊದಲು ಗಾಳಿ ಬೊಮ್ಮನಹಳ್ಳಿ ಎಂಬ ಹೆಸರು ಇತ್ತು ಈ ಹಿಂದೆ ಇಲ್ಲಿ ಹುಟ್ಟಿದಂತಹ ಮಕ್ಕಳು ಹೆಚ್ಚಿನ ದಿನಗಳು ಬದುಕುಳಿಯುತ್ತಿರಲಿಲ್ಲ, ಆ ಸಿದ್ದೇಶ್ವರ ದೇವರು ಹಾಗೂ ಮಾರಮ್ಮ ತಾಯಿಯು ಸೃಷ್ಠಿಯಾಗಿ ಇಲ್ಲಿದಂತಹ ದುಷ್ಟರನ್ನು ಸಂಹರಿಸಿದರು ಎಂಬ ಐತಿಹ್ಯವಿದೆ ಇದನ್ನು ಅರಿತ ಗ್ರಾಮದ ಕೆಲ ಹಿರಿಯರು ಸೇರಿಕೊಂಡು ಈ ಜಾತ್ರೆಯನ್ನು ನಡೆಸಲು ಪ್ರಾರಂಭಿಸಿದರು, ಅಂದಿನಿAದ ಮಕ್ಕಳು ಸಾವು ಕ್ರಮೇಣವಾಗಿ ನಿಂತಿತು, ಜೊತೆಗೆ ಇಲ್ಲಿ ಹುಟ್ಟಿ ಬೆಳೆದಂತಹವರು ದೇಶದ ನಾನಾ ಮೂಲೆಗಳಲ್ಲಿ ವಿಶೇಷ ಸ್ಥಾನಗಳನ್ನು ಅಲಂಕರಿಸಿರುವುದು ಶ್ಲಾಘನೀಯ ವಿಚಾರವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷರಾ ವೆಂಕಟಸ್ವಾಮಿ, ಬಿ.ಜಿ.ಮಾರೇಗೌಡ, ಪುಟ್ಟಯ್ಯ, ಬಿ.ಕೆ.ನಾಗರಾಜ್, ದೇವರಾಜು, ಮಾರೇಗೌಡ, ರೋಹಿತ್, ನಾಗರಾಜು, ಕರಿಯಪ್ಪ, ನಾರಾಯಣ್, ತಿಮ್ಮೇಗೌಡ, ನರಸಿಂಹಯ್ಯ ಸೇರಿದಂತೆ ಇನ್ನಿತರರು ಗ್ರಾಮದ ಮುಖಂಡರು, ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.