ತುಮಕೂರು : ನಗರದಲ್ಲಿ ಸುಭಾಷ್ ಪತ್ರೀಜಿ ಮತ್ತು ಸ್ವರ್ಣ ಮಾಲಾ ಪತ್ರೀಜಿಯವರ ಕೃಪಾ ಆಶೀರ್ವಾದದೊಂದಿಗೆ, ಬೆಳಗುಂಬ ರಸ್ತೆಯ ಲಕ್ಷ್ಮಿ ನಗರದಲ್ಲಿ ಮಾರುತಿ ಪಿರಮಿಡ್ ಧ್ಯಾನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾರುತಿ ಪಿರಮಿಡ್ ಧ್ಯಾನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಮೊದಲಿಗೆ ಹನುಮಂತಪುರದಿಂದ ಲಕ್ಷ್ಮಿ ನಗರದ ಧ್ಯಾನ ಕೇಂದ್ರದ ವರೆಗೆ ಜಾಥ ನಡೆಸುವ ಮೂಲಕ ಸಸ್ಯಹಾರ ಜನಜಾಗೃತಿ ನಡೆಸಲಾಯಿತು. ಮಾಂಸಹಾರ ತ್ಯಜಿಸಿ ಸಸ್ಯಾಹಾರ ಸೇವಿಸಿ ಪ್ರಾಣಿ ಹಿಂಸೆ ಮಾಡಬೇಡಿ. ಅಹಿಂಸಾಧರ್ಮವನ್ನು ಪಾಲಿಸಿ ಎಂದು ಬಿತ್ತಿ ಪತ್ರ ಹಿಡಿದು ಘೋಷಣೆ ಕೂಗಿದರು.

ಧ್ಯಾನ ಕೇಂದ್ರದ ಮುಖ್ಯಸ್ಥ ಸತೀಶ್ ಮಾತನಾಡಿ, ಮನುಷ್ಯನಿಗೆ ಜೀವನದಲ್ಲಿ ಹಣವೇ ಮುಖ್ಯವಲ್ಲ. ಅನ್ಯರಿಗಾಗಿ ಜೀವಿಸುವ ಜೀವಿತ. ಮಾದರಿ ಜೀವನವನ್ನು ನಮ್ಮದಾಗಿಸಿಕೊಳ್ಳಬೇಕು ಎಂದರು. ಇಲ್ಲಿ ನಿರ್ಮಿಸಿರುವ ಮಾರುತಿ ಪಿರಮಿಡ್ ಧ್ಯಾನ ಕೇಂದ್ರದಲ್ಲಿ ಕುಳಿತು ಧ್ಯಾನ ಮಾಡಿದರೆ ವಿಶೇಷವಾದ ಮಾನಸಿಕ ಸ್ಥೆöÊರ್ಯ ಮತ್ತು ಸದೃಢತೆ. ಹೊಸ ಚೈತನ್ಯವನ್ನು ಪಡೆಯಬಹುದು ಎಂದರು. ನಾನು ಹತ್ತು ಹದಿನೈದು ಹಗಲದ ಧ್ಯಾನ ಕೇಂದ್ರವನ್ನು ನಿರ್ಮಿಸಿರುವುದಾಗಿ ಭಕ್ತಾದಿಗಳು ಇದರ ಉಪಯೋಗದ ಫಲವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು. ಬ್ರಹ್ಮಶ್ರೀ ಪ್ರೇಮನಾಥ್. ಸತೀಶ್. ಎಚ್ ಆರ್. ಶ್ರೀಮತಿ ವೈಶಾಲಿ ಸತೀಶ್ . ವೇಣುಗೋಪಾಲ ರೆಡ್ಡಿ. ಸೃಜನ ರೆಡ್ಡಿ. ಮಲ್ಲಿಕಾರ್ಜುನ ಹೊಳೆ. ಚಂದ್ರಮೋಹನ್. ಶಾಲಿನಿ. ಹಾಗೂ ಪಿರಮಿಡ್ ಧ್ಯಾನ ಕೇಂದ್ರದ ಭಕ್ತಾದಿಗಳು ಭಾಗವಹಿಸಿದ್ದರು.