ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಂದಗೆರೆ ಗ್ರಾಮದಲ್ಲಿ ಪುರಾತನ ಕಾಲ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಉಪಯೋಗಕ್ಕೆ ಬಳಸುತ್ತಿದ್ದ ಮರಿಯಪ್ಪನ ಕಟ್ಟೆಯ ಏರಿಯನ್ನೇ ನಾಶ ಮಾಡಿ ಕಟ್ಟೆಯನ್ನೇ ಇಲ್ಲದಂತೆ ಮಾಡಿರುವ ಘಟನೆ ನಡೆದಿದೆ.
ಕೆರೆ ಕಟ್ಟೆಗಳನ್ನು ಉಳಿಸಿ ಎಂದು ಸುಪ್ರೀಂ ಕೋರ್ಟ್ ಖಡಕ್ ಆದೇಶ ನೀಡಿದ್ದರೂ ಸಹ, ಅಧಿಕಾರಿಗಳ ಬೇಜಬ್ದಾರಿಯಿಂದ ಕೆರೆ ಕಟ್ಟೆಗಳನ್ನು ಬಲಾಢ್ಯರು ಒತ್ತುವರಿ ಮಾಡಿಕೊಳ್ಳುತ್ತಿರುವುದನ್ನು ಕೇಳಿದ್ದೇವೆ. ಆದರೆ ಮಂದಗೆರೆ ಗ್ರಾಮದಲ್ಲಿ ಇರುವ ಸರ್ವೆ ನಂಬರ್ 45 ರಲ್ಲಿರುವ ಮರಿಯಪ್ಪನ ಕಟ್ಟೆಯ ಏರಿಯನ್ನೇ ಸಂಪೂರ್ಣವಾಗಿ ಜೆಸಿಬಿಯಲ್ಲಿ ನಾಶ ಮಾಡಿ ಇಡೀ ಕಟ್ಟೆಯನ್ನು ಬೇಸಾಯದ ಭೂಮಿಯನ್ನಾಗಿ ಮಾಡಿಕೊಳ್ಳಲು ಗ್ರಾಮದ ಚಂದ್ರಶೇಖರ್ ಎಂಬ ಬಲಾಢ್ಯ ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ.

ಹಾಗಾಗಿ ಕೂಡಲೇ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಿತವು ಗಮನ ಹರಿಸಿ ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ಅಗತ್ಯವಾಗಿರುವ ಮಂದಗೆರೆ ಗ್ರಾಮದ ಮರಿಯಪ್ಪನ ಕಟ್ಟೆಯನ್ನು ಉಳಿಸಿಕೊಡಬೇಕು ಎಂದು ಮಂದಗೆರೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

-ಶ್ರೀನಿವಾಸ್ ಆರ್.