ಕೆ.ಆರ್.ಪೇಟೆ-ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡದ ರಾಜ್ಯ ಸರ್ಕಾರ-ಹೋರಾಟ ಮಾಡಿಯಾದರೂ ಅನುದಾನ ತರುವೆ -ಶಾಸಕ ಹೆಚ್.ಟಿ ಮಂಜು

ಕೆ.ಆರ್.ಪೇಟೆ:ರಾಜ್ಯ ಸರಕಾರ ಯಾವ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ.ನನ್ನದಿರಲಿ ಅವರ ಸರಕಾರದ ಶಾಸಕರು ಹಾಗು ಸಚಿವರ ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ಶಾಸಕ ಹೆಚ್ ಟಿ ಮಂಜು ಹೇಳಿದರು.

ಸಂತೆಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಬಿ.ಎಂ.ಸಿ ಘಟಕ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರಿಗೆ,ಗ್ರಾಮದ ಜನರು ಮುಖ್ಯ ರಸ್ತೆ ಹಾಳಾಗಿದ್ದು ಮನುಷ್ಯರು ತಿರುಗುವ ಸ್ಥಿತಿಯಲ್ಲಿಲ್ಲ.ಆ ರಸ್ತೆ ಓರ್ವನನ್ನು ಬಲಿ ಪಡೆದಿದ್ದು ಬಹಳಷ್ಟು ಜನರನ್ನು ಗಾಯಗೊಳಿಸಿದೆ. ಹೊಸ ರಸ್ತೆಯನ್ನು ನಿರ್ಮಿಸಿ ಕೊಡಿ ಎಂದು ಮನವಿ ಮಾಡಿಕೊಂಡ ಬೆನ್ನಲ್ಲಿ ಅವರು ಹೀಗೆ ಸಂಕಷ್ಟ ತೋಡಿಕೊಂಡರು.

ನೀವುಗಳು ನನ್ನನ್ನು ಬಹಳಷ್ಟು ಅಭಿವೃದ್ಧಿಯ ಕನಸ್ಸುಗಳನ್ನು ಇಟ್ಟುಕೊಂಡು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ್ದೀರಿ.ಆದರೆ ಸದ್ಯ ನಾನು ನಿಮಗೆ ಸ್ಪಂದಿಸಲು ಕಷ್ಟವಾಗಲಿದೆ.ರಾಜ್ಯ ಸರಕಾರದ ಬೊಕ್ಕಸದಲ್ಲಿ ಹಣವಿದ್ದಂತಿಲ್ಲ.ಎಲ್ಲಾ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ.ಚುನಾವಣಾ ಸಮಯದಲ್ಲಿಯೇ ನನ್ನ ಕ್ಷೇತ್ರದ ಸಮಸ್ಯೆಗಳ ನಾನು ಪಟ್ಟಿಮಾಡಿಕೊಂಡಿದ್ದು ಅದರಲ್ಲಿ ನಿಮ್ಮ ರಸ್ತೆಯ ಹೆಸರು ಇದೆ.ನಾನು ಅಂದುಕೊಂಡ ಕೆಲಸಗಳನ್ನೆಲ್ಲವನ್ನು ಮಾಡಲು ಹಣ ಬೇಕು.ಆದರೆ ರಾಜ್ಯ ಸರಕಾರ ಅನುದಾನ ಕೊಡುವಲ್ಲಿ ಹಿಂದೆ ಬಿದ್ದಿದೆ ಎಂದು ಬೇಸರ ಹೊರಹಾಕಿದರು.

ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಶಾಸಕರಾಗಿದ್ದೇನೆ.ಆದರೂ ಸುಮ್ಮನೆ ಕೂರುವ ಸೋಂಬೇರಿ ಶಾಸಕ ನಾನಲ್ಲ ಹೋರಾಟದ ಮೂಲಕವೇ ಅನುದಾನ ತಂದು ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಹೆಚ್ ಟಿ ಮಂಜು ಭರವಸೆ ನೀಡಿದರು.

————– ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?