ಕೆ.ಆರ್.ಪೇಟೆ: ತಾಲ್ಲೂಕಿನ ಮಡುವಿನಕೊಡಿ ಗ್ರಾಮದ ಗ್ರಾಮ ದೇವತೆ ಶ್ರೀ ಆಂಜನೇಯ ಸ್ವಾಮಿಯವರ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.
ರಥದಲ್ಲಿ ವಿರಾಜಮಾನವಾಗಿದ್ದ ಶ್ರೀಆಂಜನೇಯ ಸ್ವಾಮಿ ಉತ್ಸವ ಮೂರ್ತಿಗೆ ಗ್ರಾಮದ ಮುಖಂಡರು ಸಾಂಪ್ರದಾಯಿ ಪೂಜೆ ಸಲ್ಲಿಸಿದ ರಥೋತ್ಸವಕ್ಕೆ ಚಾಲನೆ ನೀಡಿದರು.
ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತಾಧಿಗಳು ಉಘೇ.. ಆಂಜನೇಯ, ಉಘೇ.. ಹನುಮಂತ, ಉಘೇ ರಾಮನ ಬಂಟ.. ಆಂಜನೇಯ, ಉಘೇ.. ಮಾರುತಿ.. ಉಘೇ ಉಘೇ.. ಎಂಬಿತ್ಯಾದಿ ಜಯ ಘೋಷಗಳನ್ನು ಮೊಳಗಿಸುತ್ತಾ ರಥವನ್ನು ಎಳೆದು ತಮ್ಮ ಭಕ್ತಿ-ಭಾವ ಪ್ರದರ್ಶನ ಮಾಡಿದರು. ರಥೋತ್ಸವವು ಮಧ್ಯಾಹ್ನ 1.30 ಗಂಟೆಗೆ ಜಾತ್ರಾ ಮಾಳದಿಂದ ಆರಂಭಿಸಿ ರಾಜಬೀದಿಯಲ್ಲಿ ಸಾಗಿ ಬಸವೇಶ್ವರ ದೇವಾಲಯದವರೆಗೆ ಸಾಗಿತು. ಸಂಜೆ 5.30 ಗಂಟೆಗೆ ಮತ್ತೆ ಪ್ರಮುಖ ಬೀದಿಯಲ್ಲಿ ಸಾಗಿ ಸ್ವಸ್ಥಾನವನ್ನು ನಿರ್ವಿಘ್ನವಾಗಿ ತಲುಪಿತು. ಭಕ್ತಾಧಿಗಳು ರಥದ ಕಳಸಕ್ಕೆ ಹಣ್ಣು-ದವನ ಅರ್ಪಿಸಿ ಕೃತಾರ್ಥರಾದರು.

ರಥೋತ್ಸವದ ನೇತೃತ್ವ ವಹಿಸಿದ್ದ ಮಡುವಿನಕೋಡಿ ಗ್ರಾಮ ನ್ಯಾಯ ಮಂಡಳಿ ಅಧ್ಯಕ್ಷ ಡಿಶ್ ಮಹೇಶ್ ಮಾತನಾಡಿ ಹಬ್ಬ ಹರಿದಿನಗಳು ಜಾತ್ರೆ-ರಥೋತ್ಸವಗಳು ನಮ್ಮ ಸಂಸ್ಕೃತಿ-ಪರಂಪರೆಯ ಪ್ರತಿಬಿಂಬವಾಗಿವೆ. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸು ವುದರಿಂದ ಪರಸ್ಪರ ಪ್ರೀತಿ ವಿಶ್ವಾಸವು ಹೆಚ್ಚಾಗುತ್ತದೆ.
ಜೊತೆಗೆ ಸಹೋದರತ್ವ, ಸಹಬಾಳ್ವೆಯ ಭಾಂದವ್ಯವು ಗಟ್ಟಿಯಾಗುತ್ತದೆ. ಗ್ರಾಮ ರಕ್ಷಕನಾದ ಶ್ರೀ ಆಂಜನೇಯ ಸ್ವಾಮಿಯು ನಾಡಿಗೆ ಒಳಿತು ಮಾಡಲಿ ಎಂದು ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವವನ್ನು ಗ್ರಾಮಸ್ಥರು ಹಾಗೂ ಭಕ್ತಾಧಿಗಳ ಸಹಕಾರದಿಂದ ವೈಭವಯುತವಾಗಿ ನಡೆಸಲಾಗಿದೆ. ರಥೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡಿದ ಎಲ್ಲರಿಗೂ ಗ್ರಾಮ ನ್ಯಾಯ ಮಂಡಳಿ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಮಹೇಶ್ ತಿಳಿಸಿದರು.

ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ, ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕ ಬಿ.ಪ್ರಕಾಶ್, ಮುಖಂಡರಾದ ರೋಟರಿ ಕ್ಲಬ್ ಅಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್, ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯರಾಮೇಗೌಡ, ಮನ್‌ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಗ್ರಾಮ ನ್ಯಾಯ ಮಂಡಳಿ ಅಧ್ಯಕ್ಷ ಡಿಶ್ ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಪಿ.ಲೋಕೇಶ್, ತಾ.ಪಂ.ಮಾಜಿ ಸದಸ್ಯ ಮಾಧವಪ್ರಸಾದ್, ಉದ್ಯಮಿ ಮನು, ಸುದರ್ಶನ್, ಕಾಂತರಾಜು, ಮೊಬೈಲ್ ಮಧನ್, ಉಮೇಶ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ರಾಮಕೃಷ್ಣ, ಗ್ರಾ.ಪಂ.ಅಧ್ಯಕ್ಷೆ ಪ್ರೀತಿಭೈರನಾಯಕ್, ಉಪಾಧ್ಯಕ್ಷೆ ರತಿಮಹದೇವ್, ಗ್ರಾ.ಪಂ.ಸದಸ್ಯರಾದ ನಾಗೇಗೌಡ, ಎಂ.ಎನ್.ಮಂಜುನಾಥ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಂಜುಳಾಪರಮೇಶ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪ್ರವೀಣ್‌ಕುಮಾರ್, ವಕೀಲರಾದ ಅನ್ವೇಶ್, ಅವಿನಾಶ್, ಹರಿಹರಪುರ ಗ್ರಾ.ಪಂ.ಅಧ್ಯಕ್ಷೆ ರತಿಶ್ರೀಧರ್, ಹರಿಹರಪುರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹೆಚ್.ಎನ್.ಶ್ರೀಧರ್, ಮಹಾಲಿಂಗೇಗೌಡ ಸೇರಿದಂತೆ ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.