ಮೂಡಿಗೆರೆ-ಮಾತೆ ಮರಿಯಮ್ಮನವರ ಹೊಸಕ್ಕಿ ಹಬ್ಬ-ಮಾತೆ ಮರಿಯಮ್ಮರ ಹಾಗೆಯೇ ಎಲ್ಲಾ ಮಹಿಳೆಯರನ್ನು ಗೌರವಿಸಿ-ಫಾ.ಸುನಿಲ್ ರೋಡ್ರಿಗಸ್

ಮೂಡಿಗೆರೆ:ಏಸುಕ್ರಿಸ್ತನ ತಾಯಿ ಮಾತೆ ಮರಿಯಮ್ಮನವರು ಕ್ರೈಸ್ತರಿಗೆ ಶ್ರೇಷ್ಟ ತಾಯಿಯಾಗಿದ್ದಾರೆ ಎಂದು ಮೂಡಿಗೆರೆ ಸಂತ ಅoತೋಣಿ ಚರ್ಚ್ ನ ಧರ್ಮಗುರು ಫಾ.ಸುನಿಲ್ ರೋಡ್ರಿಗಸ್ ಹೇಳಿದರು.

ಅವರು ಭಾನುವಾರ ಮಾತೆ ಮರಿಯಮ್ಮನವರ ಹುಟ್ಟು ಹಬ್ಬದ ಪೂಜೆ ನೆರವೇರಿಸಿ ಮಾತನಾಡಿ, ಮಾತೆ ಮರಿಯಮ್ಮನನವರ ನಿಷ್ಕಳಂಕ ಪ್ರೀತಿಯನ್ನು ಗೌರವಿಸುವ ನಾವು ಅದೇ ರೀತಿಯಲ್ಲಿಯೇ ಮಹಿಳೆಯರಿಗೆ ದೊಡ್ಡಮಟ್ಟದಲ್ಲಿ ಗೌರವ ನಿಡಬೇಕು.

ಈಗಿನ ಸ್ಥಿತಿಯಲ್ಲಿ ಮಹಿಳೆಯರಿಗೆ ಭದ್ರತೆಯ ಅವಶ್ಯಕತೆಯಿದೆ. ಮಹಿಳೆಯರ ಬಗ್ಗೆ ಕೀಳರಿಮೆ ಸಲ್ಲದು. ಜಗತ್ತಿನ ಸಮಸ್ತ ಜನರ ಮಾತೆಯಾದ ಮರಿಯಮ್ಮನವರ ಆದರ್ಶ ಗುಣಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.

ಹೊಸಕ್ಕಿ ಭತ್ತದ ತೆನೆಯನ್ನು ಧರ್ಮಗುರುಗಳು ಮಂತ್ರಿಸಿ ಆಶೀರ್ವದಿಸಿದರು.ಪೂಜೆಯ ಬಳಿಕ
ಭತ್ತದ ತೆನೆ, ಕಬ್ಬು ಹಾಗೂ ಸಿಹಿಯನ್ನು ಭಕ್ತಾದಿಗಳಿಗೆ ವಿತರಿಸಲಾಯಿತು.ಬಾಲಿಕಾ ಮಾತೆಗೆ ಹೂವುಗಳು ಸಮರ್ಪಿಸಿ ಭಕ್ತಿ ಮೆರೆದರು.

ವಿಜಯ್ ಕುಮಾರ್.ಮೂಡಿಗೆರೆ

,.

Leave a Reply

Your email address will not be published. Required fields are marked *

× How can I help you?