ಚಿಕ್ಕಮಗಳೂರು:- ಕೋಮುವಾದಿಗಳಿಂದ ತುಳಿತಕ್ಕೊಳಗಾದ ದಲಿತ ಮತ್ತು ಅಲ್ಪಸಂ ಖ್ಯಾತರ ಪರ ರಾಜಕೀಯ ಚಳವಳಿ ರೂಪಿಸಿ ಕೋಮುವಾದಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಕಾನ್ಸಿರಾಂ ಅವರು ದೇಶ ಕಂಡ ಅತ್ಯುನ್ನತ ರಾಜಕಾರಣಿ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಹೇಳಿದರು.
ನಗರದ ಬಿಎಸ್ಪಿ ಕಚೇರಿಯಲ್ಲಿ ಬಿಎಸ್ಪಿ ಸಂಸ್ಥಾಪಕ ದಾದಾಸಾಹೇಬ್ ಕಾನ್ಸಿರಾಮ್ 91ನೇ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶದ ಬಡವರಿಗಾಗಿ ಸಾವಿರಾರು ಯೋಜನೆಗಳು ಬಂದರೂ ದಲಿತರು ಮತ್ತು ಅಲ್ಪಸಂಖ್ಯಾತರ ಸ್ಥಿತಿ ಬದಲಾಗದಿರುವುದರಿಂದ ಕಾನ್ಸಿರಾಂ ಅವರು ಇದರ ಬಗ್ಗೆ ಚಳವಳಿಯನ್ನೇ ರೂಪಿಸಿ, ಪಕ್ಷ ಸಂಘಟನೆ ಮಾ ಡಿದ್ದರು. ತುಳಿತಕ್ಕೊಳಗಾದವರ ಪರ ನಿಂತು ಅವರನ್ನು ಮೇಲೆತ್ತುವ ಪ್ರಯತ್ನದಲ್ಲಿ ತೊಡಗಿದ್ದರು ಎಂದು ತಿಳಿಸಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ಕಾನ್ಶಿರಾಂ ಶೋಷಿತ ಸಮುದಾ ಯಗಳನ್ನು ಒಗ್ಗೂಡಿಸಿ ರಾಜಕೀಯ ಶಕ್ತಿಯನ್ನಾಗಿ ರೂಪಿಸಲು ಶ್ರಮಿಸಿದರು. ದೇಶದ ಆಡಳಿತ ಬಹುಜನ ಕೈಗೆ ಬಂದಾಗ ಮಾತ್ರ ಪ್ರಜಾ ಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬುದನ್ನು ಕೊನೆಯವರವಿಗೂ ಪ್ರತಿ ಪಾದಿಸಿದ್ದು ಅವರ ಕನಸುಗಳನ್ನು ಸಾಕಾರಗೊಳಿಸುವ ಕಾರ್ಯ ಮಾಡಲು ಮುಂದಾಗಬೇಕು ಎಂದರು.

ಕಾನ್ಷಿರಾಂ ಅವರು ಶೋಷಿತರು ಹಾಗೂ ಹಿಂದುಳಿದ ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸದಢವಾಗಲು ಅವಿರತವಾಗಿ ಶ್ರಮಿಸಿದ್ದರು. ದಲಿತರು ಹಾಗೂ ಅಲ್ಪಸಂಖ್ಯಾತರು ಇಂ ದಿಗೂ ಮೇಲೇಳುವ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ ಶೋಚನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ ಸರಕಾರದ ಸವಲ ತ್ತುಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕಾದರೆ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ಸಿಗಬೇಕು ಎಂಬುದು ಅವರ ಕನಸಾಗಿತ್ತು. ಅವರ ಕನಸು ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ ಎಂದು ಹೇ ಳಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ ಬಿ ಸುಧಾ, ಜಿಲ್ಲಾ ಉಪಾಧ್ಯಕ್ಷ ಶ್ರೀಮತಿ ಕೆ ಎಸ್ ಮಂಜುಳಾ, ಅಸ್ಸೆಂಬ್ಲಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
- ಸುರೇಶ್ ಎನ್.