ತುಮಕೂರು– ಕೇಂದ್ರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಹಾಗೂ ದಿ ಅಪರೇಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್ ಸಹಯೋಗದಲ್ಲಿ ಉಚಿತವಾಗಿ 6 ತಿಂಗಳ ಫ್ಯಾಷನ್ ಡಿಸೈನರ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು 12ನೇ ತರಗತಿ ಪಾಸಾಗಿದ್ದು, 20 ರಿಂದ 40 ವರ್ಷ ವಯೋಮಾನದವರಾಗಿರಬೇಕು. ಆಸಕ್ತ ಅಭ್ಯರ್ಥಿಗಳು ಎ.ಟಿ.ಡಿ.ಸಿ., ಸಿದ್ದರಾಮಣ್ಣ ಹಾಸ್ಟಲ್ ಕಾಂಪೌಂಡ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು, ತುಮಕೂರು ಇವರ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಮೂಲ ದಾಖಲೆ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಮಾರ್ಚ್ 20ರೊಳಗಾಗಿ ಖುದ್ದಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಮೊ.ಸಂ. 0816-225618, ಮೊ.ಸಂ. 9844077096 ನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.