ತುಮಕೂರು: ತಾಲ್ಲೂಕಿನ ಗೂಳೂರಿನ ಸಾರಂಗ್ ಪಾಲಿಟೆಕ್ನಿಕ್‌ನಲ್ಲಿ ಆಕ್ಸೆಸ್ ಲೈವ್ಲಿಹುಡ್ಸ್ ಮತ್ತು ಎಲ್ ಅಂಡ್ ಟಿ ಸಹಯೋಗದ ಡಿಜಿಟಲ್ ಸಖೀ ಯೋಜನೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕರಾದ ವಾದಿರಾಜ್, ಪವಿತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಹಾರಿಕ, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಮೇರಿ ಡಾಲಿ, ನವಸಹಯೋಗ್ ಫೌಂಡೇಶನ್‌ನ ನಾಗರಾಜು, ನಾಗವಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಾಹ್ನವಿ ಮತ್ತು ಮಲ್ಲೇಶ್ ದಕ್ಷಿಣ ಕರ್ನಾಟಕ ಡಿಜಿಟಲ್ ಸಖಿ ಪ್ರೊಜೆಕ್ಟ್ ವ್ಯವಸ್ಥಾಪಕರು, ಮಂಜುನಾಥ್, ಮಂಜುಳ ಕ್ಲಸ್ಟರ್ ವ್ಯವಸ್ಥಾಪಕರು, ಡಿಜಿಟಲ್ ಸಖಿಯರು, ಮಹಿಳಾ ವ್ಯಾಪಾರಿಗಳು ಮತ್ತು ಸಮುದಾಯ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಭಾಗವಾಗಿ ಮಹಿಳಾ ವ್ಯಾಪಾರಿಗಳ ಸ್ಟಾಲ್ ಹಾಕಲಾಗಿತ್ತು. ಇದೇ ಸಂದರ್ಭದಲ್ಲಿ ಸಮುದಾಯದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಮತ್ತು ಎಸ್. ಎಸ್. ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ 20 ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಗೌರವಿಸಲಾಯಿತು.