ಚಿಕ್ಕಮಗಳೂರು- ಯುಗಾದಿ ಸಂಭ್ರಮ ಅಂಗವಾಗಿ ಸಾಹಿತಿ ದೇಶಹಳ್ಳಿ ಮಾದಯ್ಯ ಸ್ಮರಣಾರ್ಥ ಹಮ್ಮಿಕೊಂಡಿರುವ ಹನ್ನೊಂದನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಸಮಾರಂಭದಲ್ಲಿ ಜಿಲ್ಲೆಯ ಹಿರೇನಲ್ಲೂರು ಶಿವು ಅವರ ಸಾಹಿತ್ಯ ಸೇವೆ ಗುರುತಿಸಿ ರಾಜ್ಯಮಟ್ಟದ ಕನ್ನಡ ರತ್ನ ಪ್ರಶಸ್ತಿಗೆ ಭಾಜನರಾಗಿದ್ದು ಮಾ.23 ರಂದು ಮಂಡ್ಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.