ಬೇಲೂರು-ಆತ್ಮಹತ್ಯೆಯ ಆಲೋಚನೆ ನಿಮಗೆ ಬಂದಿದ್ದರೆ ತಕ್ಷಣ ಸರಕಾರಿ ಆಸ್ಪತ್ರೆಗೆ ಬನ್ನಿ-ಸೂಕ್ತ ಚಿಕಿತ್ಸೆಯಿದೆ-ಡಾ.ಸುಧಾ

ಬೇಲೂರು;ಆತ್ಮಹ,ತ್ಯೆ ಮಾಡಿಕೊಳ್ಳುವ ವ್ಯಕ್ತಿಗಳು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುತ್ತಾರೆ.ಅಂತಹವರನ್ನು ಆತ್ಮಸಮಾಲೋಚನೆಗೆ ಒಳಪಡಿಸಿ ಸೂಕ್ತ ಚಿಕೆತ್ಸೆ ನೀಡುವುದರಿಂದ ಆತ್ಮಹ,ತ್ಯೆಯಂತಹ ಆಲೋಚನೆಗಳಿಂದ ಹೊರ ತರಲು ಸಾಧ್ಯವಿದೆ ಎಂದು ಅರೇಹಳ್ಳಿ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುಧಾ ಹೇಳಿದರು.

ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಮ್ಹಾನ್ಸ್ ಎ ಎಚ್‌ ಟಿ ಗ್ರಾಮೀಣ ಸಮುದಾಯಗಳ ‘ಸಮಗ್ರ ಮಾನಸಿಕ ಆರೋಗ್ಯ’ ಕಾರ್ಯಕ್ರಮದ ಅಡಿಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಆತ್ಮಹ,ತ್ಯೆ ತಡೆಗಟ್ಟುವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಹಹುತೇಕರು ಮಾನಸಿಕ ಖಿನ್ನತೆಗೆ ಒಳಗಾಗಿ ದೂಮಪಾನ,ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗಿ ಇನ್ನೂ ಆಳವಾದ ಖಿನ್ನತೆಗೆ ಜಾರುತ್ತಿರುತ್ತಾರೆ.ತಮ್ಮವರ ಬಳಿ ಆತ್ಮಹ,ತ್ಯೆ ಮಾಡಿಕೊಳ್ಳುವ ಮನಸ್ಸಾಗುತ್ತಿದೆ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ.ಅಂತಹ ಸಮಯದಲ್ಲಿ ಆ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕೆತ್ಸೆಗೆ ಒಳಪಡಿಸಿದಾಗ ಅವರು ಖಿನ್ನತೆಯಿಂದ ಹೊರಬಂದು ಸಾಮಾನ್ಯ ಜೀವನ ನಡೆಸುತ್ತಾರೆ ಎಂದರು.

ಸೈಕೋಲಾಜಿಕಲ್ ಮೆಡಿಕಲ್ ಆಫೀಸರ್ ಡಾ.ಕೃತಿಕಾ ಮಾತನಾಡಿ, ಪ್ರತಿವರ್ಷ ವಿಶ್ವದಾದ್ಯಂತ ಲಕ್ಷಾಂತರ ಜನ ಆತ್ಮಹ,ತ್ಯೆಗೆ ಶರಣಾಗುತ್ತಿದ್ದಾರೆ.ಖಿನ್ನತೆಗೆ ಒಳಗಾದ ವ್ಯಕ್ತಿಗಳು ಬದುಕುವುದೇಕೆ ಎಂಬ ಮನಸ್ಥಿತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ.ಅಂತಹವರನ್ನು ಸಂಬಂಧಿಗಳು ಸ್ನೇಹಿತರು ನಿರ್ಲಕ್ಸ್ಯ ಮಾಡದೇ ಆಸ್ಪತ್ರೆಗಳಿಗೆ ಕರೆ ತರಬೇಕು ಎಂದು ಮನವಿ ಮಾಡಿಕೊಂಡರು.

ರಾಜ್ಯದಲ್ಲಿ ಬೇಲೂರು ಸೇರಿದಂತೆ 2 ತಾಲ್ಲೂಕುಗಳನ್ನು ಆತ್ಮಹ,ತ್ಯೆ ತಡೆ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು ಈ ಯೋಜನೆ 3 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ.ಆಪ್ತ ಸಮಾಲೋಚಕರು ಸೋಮವಾರ ಅರೇಹಳ್ಳಿ,ಹಾಗೂ ಬುಧವಾರದಂದು ಹಳೇಬೀಡಿನಲ್ಲಿ ಕರ್ತವ್ಯ ನಿರ್ವಹಿಸಲಿದ್ದು ಉಳಿದ ದಿನಗಳಲ್ಲಿ ತಾಲ್ಲೂಕು ಆಸ್ಪತ್ರೆಯ ಕೊಠಡಿ ಸಂಖ್ಯೆ 54 ರಲ್ಲಿ ಲಭ್ಯರಿರುತ್ತಾರೆ.ಪ್ರತಿವರ್ಷ 10 ನೇ ತಾರೀಕು ಆತ್ಮಹ,ತ್ಯೆ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುತ್ತಿದೆ.ಆತ್ಮಹ,ತ್ಯೆ ತಡೆಗಟ್ಟಲು ಜಾಗೃತಿ ಮೂಡಿಸುವ ಉದ್ದೇಶ ಇದರ ಹಿಂದಿದೆ.

ಆತ್ಮಹ,ತ್ಯೆ ಆಲೋಚನೆ ಬರುವವರು ಟೆಲಿ ಮೆಡಿಸನ್ ಸಂಖ್ಯೆ 14416ಕ್ಕೆ ದಿನದ ಯಾವುದೇ ಸಮಯದಲ್ಲಾದರೂ ಕರೆ ಮಾಡಿದರೆ ಸೂಕ್ತ ನೆರವು ಸಿಗಲಿದೆ.ಜೀವನದಲ್ಲಿ ಎದುರಿಸಲಾಗದಂತಹ ಯಾವ ಸಮಸ್ಯೆಗಳು ಇಲ್ಲ.ಮಾನಸಿಕವಾಗಿ ಖಿನ್ನತೆಗೆ ಒಳಗಾದವರ ಜೊತೆಗೆ ನಾವಿದ್ದೇವೆ.ಅಂತಹ ವ್ಯಕ್ತಿಗಳು ಯಾರಾದರೂ ಇದ್ದರೆ ನಮ್ಮನ್ನು ಭೇಟಿಯಾಗುವಂತೆ ಅವರು ವಿನಂತಿ ಮಾಡಿಕೊಂಡರು.

ನಿಮ್ಹಾನ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ.ದರ್ಶನ್ ಮಾತನಾಡಿ,ಆತ್ಮಹತ್ಯೆಗೆ ಹಲವು ಕಾರಣಗಳಿದ್ದು ಕೃಷಿಕರಲ್ಲಿ ಬೆಳೆಹಾನಿ,ನಷ್ಟ ಇವುಗಳು ಕಾರಣವಾಗಿರಬಹುದು.ಇಲ್ಲವೆ ಕೌಟುಂಬಿಕ ಸಮಸ್ಯೆಗಳು,ಪ್ರೀತಿಪ್ರೇಮ ಇಂತಹ ಕಾರಣಗಳು ಇರಬಹುದು.ಆತ್ಮಹತ್ಯೆ ಮಾಡಿಕೊಳ್ಳುವವರು ಸಾಕಷ್ಟು ದಿನದಿಂದ ಮಾನಸಿಕವಾಗಿ ಕುಗ್ಗಿರುತ್ತಾರೆ.ಸ್ನೇಹಿತರು ಇತರರ ಕಡೆ ನೋವು ಹಂಚಿಕೊಂಡಿರುತ್ತಾರೆ.ಇಂತಹವರ ಬಗ್ಗೆ ಗಮನ ಹರಿಸಿ ಮುಂಜಾಗ್ರತೆ ಕ್ರಮ ಕೈಗೊಂಡರೆ ಆತ್ಮಹ,ತ್ಯೆ ತಡೆಗಟ್ಟಬಹುದೆಂದರು.

ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಡಾ.ಸ್ವಾತಿ, ವೈದ್ಯಕೀಯ ಸಮಾಜ ಕಾರ್ಯಕರ್ತ ಮನೋಜ್, ಮನೋ ಶಾಸ್ತ್ರಜ್ಞೆ ಪಲ್ಲವಿ, ಗೃಹ ಇಲಾಖೆಯ ದೇವರಾಜು ಇತರರು ಹಾಜರಿದ್ದರು.

——————-ರವಿಕುಮಾರ್

Leave a Reply

Your email address will not be published. Required fields are marked *

× How can I help you?