ಕೊರಟಗೆರೆ-ನಾಮಕಾವಸ್ಥೆಗೆ-ನಿರ್ಮಾಣವಾದ-ಮಧುವನ(ಜೇನು)- ಕೃಷಿ-ಕೇಂದ್ರ-ನಿರ್ವಹಣೆಯಿಲ್ಲದೇ-ಅನೈತಿಕ ಚಟುವಟಿಕೆ- ತಾಣವಾಗಿ-ಮಾರ್ಪಾಡಾದ-ಜೇನು-ಕೃಷಿ-ಕೇಂದ್ರ

ಕೊರಟಗೆರೆ :- ಭಾರತದಲ್ಲಿ ಅನೇಕ ಕೃಷಿ ಚಟುವಟಿಕೆಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿದ್ದರೂ ಸಹ ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ಹುಲೀಕುಂಟೆ ಗ್ರಾಮದಲ್ಲಿ ನಿರ್ಮಿಸಿಲಾದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿರ್ಲಕ್ಷ್ಯದಿಂದ ತೋಟಗಾರಿಕೆ ಇಲಾಖೆಯ ಜೇನು ಕೃಷಿ ಕೇಂದ್ರ ಅಭಿವೃದ್ಧಿ ಕಾಣದೇ ಪಾಳುಬಿದ್ದಿದೆ.

ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ಹುಲೀಕುಂಟೆ ಗ್ರಾಮ ಸರ್ವೇ ನಂ.207ರ 1.20 ಗುಂಟೆ ಜಮೀನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ತುಮಕೂರು ಇವರಿಂದ ಮಧುವನ(ಜೇನು) ಕೃಷಿಯ ಕಛೇರಿ ಕಟ್ಟಡ ನಿರ್ಮಾಣ ಮಾಡಲಾಗಿದೆ. 2011-12ನೇ ಸಾಲಿನಲ್ಲಿ ವಾಣಿಜ್ಯ ಇಲಾಖೆ ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿದೆ. 25 ವರ್ಷಗಳು ಕಳೆದರೂ ಸಹ ವಾಣಿಜ್ಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ಖಾತೆ ಬದಲಾವಣೆಯಾಗದೆ ಹಾಗೇ ಉಳಿದಿರುವುದು ಗಮನಿಸಿದರೆ ನಾಮಾಕವಸ್ಥೆಗೆ ನಿರ್ಮಾಣವಾಗಿರಬಹುದೇ ಎಂಬ ಗೊಂದಲವನ್ನು ಸಾರ್ವಜನಿಕರಲ್ಲಿ ಮೂಡಿಸಿದೆ.

ತೋಟಗಾರಿಕೆ ಇಲಾಖೆಗೆ ಖಾತೆ ಬದಲಾವಣೆಯಾಗದ ಕಾರಣ ಕಟ್ಟಡ ಶಿಥಿಲ ರೂಪಕ್ಕೆ ತಲುಪಿದ್ದು, ಕಚೇರಿ ಆವರಣದಲ್ಲಿರುವ ಜೇನು ಕೃಷಿ ಪೆಟ್ಟಿಗೆ ಹಾಗೂ ಜೇನು ಕೃಷಿ ಕೇಂದ್ರ ನಾಮಫಲಕ ತುಕ್ಕು ಹಿಡಿಯುತ್ತಿದೆ. ಕಛೇರಿ ಭಧ್ರತೆಗೆ ನಿರ್ಮಿಸಲಾದ ಮುಳ್ಳುತಂತಿಯನ್ನು ಸಹ ಕಿಡಿಗೇಡಿಗಳು ಕಿತ್ತು ಹಾಕಿದ್ದು. ನಿರ್ವಹಣೆಯಿಲ್ಲದೇ ಪಾಳು ಬಿದ್ದ ಕಾರಣ ಸ್ಥಳೀಯ ಜಾನುವಾರಗಳನ್ನು ಹೊಂದಿರುವ ರೈತರು ಸಗಣೀ ಕಸ ಮತ್ತು ಮೇಕೆ-ಕುರಿ ಕಸ ಹಾಕಲು ಬಳಸುತ್ತಿರುವುದು ಒಂದೆಡೆಯಾದರೆ ರಾತ್ರಿಯಾದರೆ ಅನೈತಿಕ ಚಟುವಟಿಕೆಗೆ ಕಾರಣವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬರುತ್ತಿದೆ.

ಸರ್ಕಾರಕ್ಕೆ ಪ್ರಸ್ತಾವನೆ :

2011ರಿಂದಲೂ ಜೇನು ಕೃಷಿ ಕೇಂದ್ರ ಯಾವುದೇ ಅಭಿವೃದ್ಧಿ ಕಾಣದೇ ನಾಮಾಕವಸ್ಥೆಗೆ ಮಾತ್ರ ನಿರ್ಮಾಣಗೊಂಡಿದೆ. ವಾಣಿಜ್ಯ ಇಲಾಖೆಯಿಂದ ತೋಟಗಾರಿಕೆ ಇಲಾಖೆ ಹೆಸರಿಗೆ ಖಾತೆ ಬದಲಾವಣೆಯಾಗಬೇಕಿದ್ದು, ಜೇನು ಕೃಷಿ ಕೇಂದ್ರದ ಅಭಿವೃದ್ಧಿಗಾಗಿ 21ಲಕ್ಷ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಮಾಹಿತಿಯನ್ನು ಸ್ಥಳೀಯ ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ವಿ ರಾಮಾಂಜಲಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.

ಕಸ-ವಿಲೇವಾರಿ ಘಟಕದಂತೆ ಕಾಣುವ ಮಧುವನ ಕೇಂದ್ರ.

ಜುಂಜರಾಮನಹಳ್ಳಿ ರೈತ ಅಂಜನ್‍ ಕುಮಾರ್ ಮಾತನಾಡಿ, ಜಿಲ್ಲಾ ಪಂಚಾಯತ್ ಯೋಜನೆಯ ಜೇನು ಸಾಕಾಣಿಕೆಯ ಕೃಷಿಯ ಮಧುವನ ಕಚೇರಿಯು ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದೆ. ಸುಮಾರು 20 ವರ್ಷಗಳಿಂದಲೂ ಮಧುವನ ಕೇಂದ್ರ ನಿರ್ವಹಣೆಯಿಲ್ಲದೇ ಹಾಗೆ ಇರುವುದರಿಂದ ಕಟ್ಟಡವು ಶಿಥಿಲಗೊಂಡಿದೆ. ಆವರಣದಲ್ಲಿ ಸ್ಥಳೀಯ ನಿವಾಸಿಗಳು ಕಸ ಹಾಕಲು ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಮಧುವನ ಕೇಂದ್ರದ ಅಭಿವೃದ್ಧಿ ಸಮಸ್ಯೆಗಳು ಅನೇಕವಿದೆ. ಸಮಸ್ಯೆಗಳಿಂದ ರೈತರಿಗೆ ಮಾಹಿತಿ ದೊರೆಯುತ್ತಿಲ್ಲ. ತಾಲ್ಲೂಕು ಆಡಳಿತ ಈ ಬಗ್ಗೆ ಕೂಡಲೇ ಗಮನಹರಿಸಿ ಮಧುವನ ಕೇಂದ್ರವನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದರು.

ತೋಟಗಾರಿಕೆ ಇಲಾಖೆಗೆ ವಾಣಿಜ್ಯ ಇಲಾಖೆಯಿಂದ ಹಸ್ತಾಂತರಗೊಂಡ ದಿನಗಳಿಂದಲೂ ನಿರ್ವಹಣೆಯಿಲ್ಲದೇ ಜೇನು (ಮಧುವನ) ಕೃಷಿ ಕೇಂದ್ರ ಪಾಳು ಬಿದ್ದ ಹಿನ್ನೆಲೆ ಇಲಾಖೆ ಅಧಿಕಾರಿಗಳ ಬೇಜಾವಬ್ದಾರಿ ತನದಿಂದ ಸ್ಥಳೀಯ ರೈತರು ಮತ್ತು ಸಾರ್ವಜನಿಕರು ಕೃಷಿ ಕೇಂದ್ರ ಆವರಣ ಸಧ್ಯಕ್ಕೆ ಕಸ-ವಿಲೇವಾರಿ ಘಟಕದಂತೆ ಕಾಣುತ್ತಿದೆ. ಕಸ ತೆರವುಗೊಳಿಸಿ ತೋಟಗಾರಿಕೆ ಇಲಾಖೆಯ ಜೇನು ಕೃಷಿ ಕೇಂದ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದ್ದು ತಾಲ್ಲೂಕು ಮಟ್ಟದ ಅಧಿಕಾರಿಗಳು ಅಭಿವೃದ್ಧಿಪಡಿಸುವರ ಕಾದು ನೋಡಬೇಕಿದೆ.

ವರದಿ -ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?