ತುಮಕೂರು: ಭಾರತದ ಪ್ರಮುಖ ಜನರ ಆಕರ್ಷಣೆಯಾಗಿರುವ, ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾದ ಸಾಯಿ ಸಿಲ್ಸ್ಕ್ ಕಲಾಮಂದಿರ್ ಲಿಮಿಟೆಡ್ (ಎಸ್.ಎಸ್.ಕೆ.ಎಲ್) ಅಂಗ ಸಂಸ್ಥೆಯಾದ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಸ್ಕ್ ಹೊಸ ಮಳಿಗೆಯನ್ನು ತುಮಕೂರಿನಲ್ಲಿ ಅನಾವರಣಗೊಳಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರಾಂಡ್ ವಿಸ್ತರಣೆ ಮಾಡಿದೆ.
ತುಮಕೂರು ನಗರದ ಕೆ.ಆರ್.ಬಡಾವಣೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಜ್ಯೋತಿಆರ್ಕೇಡ್ ನಲ್ಲಿ ನೂತನ ಕಾಂಚಿಪುರA ಸಿಲ್ಸ್ಕ್ ವರಮಹಾಲಕ್ಷ್ಮಿ ಹೊಸ ಮಳಿಗೆಯನ್ನು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು. ಕಲ್ಪತರು ನಾಡು ತುಮಕೂರು ನಗರದಲ್ಲಿ ಗುಣಮಟ್ಟದ ಕಾಂಚೀಪುರಂ ಸಿಲ್ಸ್ಕ್ ನ ನೂತನ ಮಳಿಗೆ ತೆರೆಯಲಾಗಿದೆ, ನಾಡಿನ ಜನರು ಕಾಂಚಿಪುರಂ ಉಡುಪುಗಳನ್ನು ತೊಟ್ಟು ಅದರ ಅಂದವನ್ನು ಸವಿಯಬಹುದು.

ಅಲ್ಲದೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ತನ್ನ ಪ್ರೀಮಿಯಂ-ಗುಣಮಟ್ಟದ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ. ತನ್ನದೇ ಆದ ವಿಶೇಷ ಮಗ್ಗಗಳು ಮತ್ತು ಆಂತರಿಕ ವಿನ್ಯಾಸಗಳೊಂದಿಗೆ ಉಡುಪುಗಳನ್ನು ತಯಾರಿಸಲಾಗುತ್ತದೆ, ನಮ್ಮ ಸಂಪ್ರದಾಯವನ್ನು ಎತ್ತಿ ತೋರಿಸುವ, ಬೆಳೆಸುವ ಕೆಲಸವನ್ನು ಮಾಡಬೇಕು, ಕಾಂಚಿಪುರಂ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ, ಅವರ ಉಡುಪುಗಳು ಜಗತ್ ಪ್ರಸಿದ್ಧ ಪಡೆದಿವೆ ಎಂದರು. ನಗರದ ಜನರಿಗೆ ಹೊಸ ಅನುಭವವನ್ನು ನೀಡಲು ಹೊಸ ಮಳಿಗೆ ತೆರೆಯಲಾಗಿದೆ, ಮದುವೆ, ಶುಭ ಸಮಾರಂಭಗಳಿಗೆ ಹೆಚ್ಚು ಜನಪ್ರಿಯತೆ ಪಡೆದಿದೆ ಎಂದರು.

ಸಾಯಿ ಸಿಲ್ಸ್ಕ್ ಕಲಾಮಂದಿರ್ ಲಿಮಿಟೆಡ್‌ನ ನಿರ್ದೇಶಕ ಮೋಹನ್ ಛಲವಾದಿ ಮಾತನಾಡಿ, ತುಮಕೂರಿನಲ್ಲಿ ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಸ್ಕ್ ಹೊಸ ಮಳಿಗೆ ಉದ್ಘಾಟನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರಾಂಡ್ ವಿಸ್ತರಣೆ ಮುಂದುವರೆಸಿದೆ, ಹೊಸಸ್ವರೂಪದ ಅಡಿಯಲ್ಲಿ ತನ್ನ 68 ನೇ ಶೋ ರೂಂ ಅನ್ನು ಕರ್ನಾಟಕದಲ್ಲಿ 4 ನೇ ಶೋ ರೂಂ ನಗರದಲ್ಲಿ ಪ್ರಾರಂಭಿಸಿದೆ. ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯವನ್ನು ನೀಡುತ್ತದೆ.
ಇದರ ವ್ಯಾಪಕ ಸಂಗ್ರಹವು ಕಾಂಚೀಪುರಂ ರೇಷ್ಮೆ ಸೀರೆಗಳು, ಬನಾರಸ್, ಪಟೋಲಾ, ಕೋಟಾ, ಪೈಥಾನಿ, ಆರ್ಗನ್ಜಾ, ಕುಪ್ಪಡಂ, ಇಕ್ಕತ್, ಬಂಧನಿ ಸೇರಿದಂತೆ ಹತ್ತು ಹಲವು ಒಳಗೊಂಡಿದೆ – ಮದುವೆಗಳು,ಶುಭ ಸಮಾರಂಭಗಳು,ಹಬ್ಬದ ಸಂದರ್ಭಗಳು ಮತ್ತು ದೈನಂದಿನ ಸೊಬಗುಗಳನ್ನು ಪೂರೈಸುತ್ತದೆ. ಮಳಿಗೆಯಲ್ಲಿ ಒಂದು ಸಾವಿರದಿಂದ 3 ಲಕ್ಷದ ಬೆಲೆವರೆಗೆ ಸೀರೆ ಲಭ್ಯವಿದೆ. ಇವೆಲ್ಲವೂ ಸಹ (ಎಸ್.ಎಸ್.ಕೆ.ಎಲ್) ನ ಒಂದೇ ಸೂರಿನಡಿ ಸಿಗುವುದು ಹೆಗ್ಗಳಿಕೆಯ ಸಂಗತಿಯಾಗಿದೆ.

ಕರ್ನಾಟಕದಲ್ಲಿ ಬಲವಾದ ಉಪಸ್ಥಿತಿಯೊಂದಿಗೆ, ಸಾಂಪ್ರದಾಯಿಕ ಮತ್ತು ಸಮಕಾಲೀನ ನೇಯ್ಗೆಗಳಲ್ಲಿ ಅತ್ಯುತ್ತಮವಾದದ್ದನ್ನು ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಸೀರೆ ಶಾಪಿಂಗ್ ಅನುಭವವನ್ನು ಗ್ರಾಹಕರು ಮರು ವ್ಯಾಖ್ಯಾನಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಕರ್ನಾಟಕದಲ್ಲಿ ತನ್ನ ನೆಲೆಯನ್ನು ಬಲಪಡಿಸಲು, ಎಸ್.ಎಸ್.ಕೆ.ಎಲ್ ವಿನೂತನವಾದ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತದೆ. ಗ್ರಾಹಕರಿಗೆ ಗುಣಮಟ್ಟದ ಸಾಂಪ್ರದಾಯಿಕ ಮಗ್ಗದ ಅನುಭವವನ್ನು ನೀಡಲಾಗುತ್ತದೆ. ಅದನ್ನು ಗ್ರಾಹಕರು ಪಡೆಯುವ ಮೂಲಕ ತಮ್ಮ ಅನುಭವವನ್ನು ಮರು ವ್ಯಾಖ್ಯಾನಿಸಬೇಕಾಗಿದೆ ಎಂದರು.

ನೂತನ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರು,ಬಂಧುಗಳು,ಸ್ನೇಹಿತರು,ಗಣ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ