ಚಿಕ್ಕಮಗಳೂರು-ತಾಲ್ಲೂಕಿನ ಆಲ್ದೂರು ಹೋಬಳಿ ಸಮೀಪದ ಕಂಚಿನಕಲ್ ದುರ್ಗ ದ ಮಠದ ಶ್ರೀ ಗುರು ಮುಳ್ಳಯ್ಯಸ್ವಾಮಿ ಮಠದ ಜಾತ್ರೆ ಮಹೋತ್ಸವ ಇದೇ ಮಾ.24 ಮತ್ತು 25 ರಂದು ಅತ್ಯಂತ ವಿಜೃಂಭ್ರಣೆಯಿಂದ ಹಮ್ಮಿಕೊಳ್ಳಲಾಗಿದೆ.
ಮಾ.24ರಂದು ಬೆಳಿಗ್ಗೆ ರುದ್ರಾಭಿಷೇಕ, 12ಕ್ಕೆ ಮಹಾಮಂಗಳಾರತಿ, ರಾತ್ರಿ ಗಿರಿಹತ್ತುವುದು, 25 ರಂದು ಬೆಳಿಗ್ಗೆ 10ಕ್ಕೆ ಕೆಂಡಾರ್ಚನೆ, ಜಾತ್ರಾ ಉತ್ಸವ, ಗ್ರಾಮದೇವತೆಗಳ ಆಗಮನ, ದಾಸೋಹ ಏರ್ಪಡಿಸಲಾಗಿದೆ ಎಂದು ಆಡಳಿತಾಧಿಕಾರಿ ನಿಶಾಂತಯ್ಯ ತಿಳಿಸಿದ್ದಾರೆ.
- ಸುರೇಶ್ ಎನ್.