ಕೆ.ಆರ್.ಪೇಟೆ-ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲಿನ ಗುಣಮಟ್ಟ ಕಾಪಾಡಿದಾಗ ಮಾತ್ರ ಆರ್ಥಿಕವಾಗಿ ಸಬಲರಾಗಬಹುದು-ಡಾಲು ರವಿ

ಕೆ.ಆರ್.ಪೇಟೆ:ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲಿನ ಗುಣಮಟ್ಟ ಕಾಪಾಡಿದಾಗ ಮಾತ್ರ ಆರ್ಥಿಕವಾಗಿ ಸಬಲರಾಗಬಹುದು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.

ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಹಾಲು ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ನೂತನವಾಗಿ ನಿರ್ಮಿತವಾಗಿರುವ ಹಾಲು ಶೀತಲೀಕರಣ ಘಟಕ ಸಮರ್ಪಕವಾಗಿ ಸದ್ಬಳಕೆಯಾಗಲಿ.ಮಹಿಳೆಯರು ಹೈನುಗಾರಿಕೆ ಜತೆಗೆ ಆದಾಯೋತ್ಪನ್ನ ಚಟುವಟಿಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸಬೇಕು.

ತಾಲೂಕಿನಲ್ಲಿ ಉತ್ತಮ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಗಂಜಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘ ಪಾತ್ರವಾಗಿದೆ.ಬಿ.ಎಂ.ಸಿ ಘಟಕ ಉದ್ಘಾಟನೆಯ ಪ್ರಯುಕ್ತ ಗ್ರಾಮದಲ್ಲೇ ಹಬ್ಬದ ವಾತಾವರಣ ಸೃಷ್ಟಿಸಿ ಪ್ರತಿ ಹಾಲು ಉತ್ಪಾದಕರಿಗೆ ಸಾಮೂಹಿಕವಾಗಿ ಹಾಲಿನ ಕ್ಯಾನ್ ವಿತರಿಸುವ ಮೂಲಕ ಸಾಕ್ಷಿಯಾಗಿ ಉಳಿದ ಸಂಘಗಳಿಗೆ ಮಾದರಿಯಾಗಿದೆ. ಸಹಕಾರಿ ಸಂಘಗಳ ಹುಟ್ಟು ಮತ್ತು ಬೆಳವಣಿಗೆ ಕಾರಣಕರ್ತರಾದ ವರ್ಗಿಸ್ ಕುರಿಯನ್ ರನ್ನು ,ರೈತರು ಸ್ಮರಿಸಬೇಕು.ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಸಹಕಾರ ಸಂಘಕ್ಕೆ ನೀಡಬೇಕು.ತಮ್ಮ ರಾಸುವಿಗೆ ಸಮತೋಲನ ಆಹಾರ ನೀಡಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಬೇಕು ಎಂದರು.

ಸಭೆಯಲ್ಲಿ ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್ ಸುರಗಿಹಳ್ಳಿ ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್‌ನ್ನು ಮಂಡಿಸಿದರು.ಸಭೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ಪಿ ಮಲ್ಲಿಕಾರ್ಜುನ್ ವಹಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್. ಪಿ ಮಲ್ಲಿಕಾರ್ಜುನ್,ಉಪಾಧ್ಯಕ್ಷ ಎನ್ ಉಮೇಶ್,ನಿರ್ದೇಶಕರುಗಳಾದ ಭೋಜಪ್ಪ,ಎಸ್. ಡಿ ರಮೇಶ್, ಈರಪ್ಪ, ಎಸ್. ಪಿ ಲಿಂಗಪ್ಪ, ಮಾದಪ್ಪ, ರಾಜೇಂದ್ರ, ಮಹದೇವಮ್ಮ, ಸುಗುಣ, ಮಾಯಮ್ಮ, ರಾಮಮ್ಮ,ಸಂಘದ ಕಾರ್ಯದರ್ಶಿ ಎಸ್. ಎಂ ನಾಗೇಶ್,ಹಾಲು ಪರೀಕ್ಷಕ ನಂಜುಂಡ,ಸಹಾಯಕ ರಾಜೇಶ್, ಈರಪ್ಪ,ಗ್ರಾಮದ ಮುಖಂಡ ಜಿ. ಎನ್ ಶಿವಣ್ಣ, ಹಾಗು ಗ್ರಾಮಸ್ಥರು ಇದ್ದರು.

————————— ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?