ಕೊರಟಗೆರೆ :- ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರ ಸ್ಪೂರ್ತಿ ಪಡೆದು ರಾಜಕೀಯ ಕ್ಷೇತ್ರದಲ್ಲಿ ಜನರ ಸೇವೆ ಮಾಡುವ ಉದ್ದೇಶವಿಟ್ಟುಕೊಂಡು ಬರಬೇಕು. ಯುವಕರಿಂದ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದು ಗ್ರಾಪಂ ಅಧ್ಯಕ್ಷೆ ಪುಷ್ಪರವಿಕುಮಾರ್ ತಿಳಿಸಿದರು.
ಅವರು ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಜಟ್ಟಿಅಗ್ರಹಾರ ಗ್ರಾಪಂ ಅವರಣದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಗ್ರಾಮಸಭೆ ಹಾಗೂ ವಿಶ್ವ ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ವಿಶೇಷ ವಿಕಲಚೇತನರ ಸಮನ್ವಯ ಗ್ರಾಮಸಭೆ ಮತ್ತು ಸವಲತ್ತು ವಿತರಣೆ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದರು.
ಸರ್ಕಾರದ ಮಹತ್ತರ ಯೋಜನೆಗಳು ಗ್ರಾಮೀಣ ಭಾಗಕ್ಕೂ ಸಂಪೂರ್ಣವಾಗಿ ಅನುಷ್ಠಾನವಾಗಲೆಂದು ಗ್ರಾಪಂಗಳು ಕೆಲಸ ಮಾಡುತ್ತಿವೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಗ್ರಾಪಂಗಳಲ್ಲಿ ಸರ್ಕಾರದ ಯೋಜನೆಗಳು ಮತ್ತು ಸವಲತ್ತುಗಳ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಮಾಡಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳು ತಮ್ಮ ಜ್ಞಾನವನ್ನ ವೃದ್ಧಿ ಮಾಡಿಕೊಳ್ಳಲು ಪ್ರತಿಯೊಬ್ಬರು ಮಕ್ಕಳ ಗ್ರಾಮಸಭೆಗೆ ಹಾಜರಾಗಿ ಎಂದು ಹೇಳಿದರು.

ವಿಶೇಷ ಚೇತನರನ್ನ ನಮ್ಮಂತೆ ಜೀವನ ನಡೆಸಲು ಸಂವಿಧಾನದಲ್ಲಿ ತನ್ನದೆ ಆದ ಹಕ್ಕು ಪಡೆದಿದ್ದಾರೆ. ಅವರನ್ನ ಮನುಷ್ಯರಂತೆ ಪ್ರತಿಯೊಬ್ಬರು ಕಾಣಬೇಕು. ನಮ್ಮ ಗ್ರಾಪಂಯಲ್ಲಿರುವ ವಿಶೇಷ ಚೇತನರಿಗೆ ಗ್ರಾಪಂ ಯಿಂದ ಅನೇಕ ಸವಲತ್ತುಗಳನ್ನ ನೀಡಲಾಗುತ್ತಿದೆ ಎಂದರು.
ಪಿಡಿಒ ರಂಗನರಸಪ್ಪ ಮಾತನಾಡಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನ ಜಾರಿಗೆ ತರಲಾಗಿದೆ. ಗ್ರಾಮಗಳ ಸಮಸ್ಯೆಗಳ ಬಗ್ಗೆ ಮಕ್ಕಳು ಕೂಡ ಪ್ರಶ್ನೆ ಮಾಡಲು ಸಂವಿಧಾನದಲ್ಲಿ ಹಕ್ಕು ಹೊಂದಿದ್ದಾರೆ. ವಿದ್ಯಾರ್ಥಿಗಳು ಗ್ರಾಮ ಸೇರಿದಂತೆ ಶಾಲೆಗೆ ಬೇಕಾದ ಮೂಲಭೂತ ಹಕ್ಕುಗಳನ್ನ ಕೇಳುವ ಅಧಿಕಾರವನ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕಲ್ಪಸಿದ್ದಾರೆ. ಅಗ್ರಹಾರ ಗ್ರಾಪಂ ವ್ಯಾಪ್ತಿಯಲ್ಲಿ 15 ಗ್ರಾಮಗಳು ಹೊಂದಿದ್ದು, 35 ವಿಶೇಷ ಚೇತನರಿಗೆ ಫ್ಯಾನ್, ಹಾಗೂ ಕುಕ್ಕರ್ ಸೇರಿದಂತೆ ಇತರೆ ಸವಲತ್ತುಗಳನ್ನ ನೀಡಲಾಗಿದೆ ಎಂದರು.

ಸಭೆಯಲ್ಲಿ ಗ್ರಾಪಂ ಸದಸ್ಯರಾದ ಸರಸ್ಪತಿ, ಗೀತಾ, ದ್ರಾಕ್ಷಯಣಮ್ಮ, ರುದ್ರಮ್ಮ, ಕರಿಯಣ್ಣ, ಕಾರ್ಯದರ್ಶಿ ಮುನಿಯಪ್ಪ, ದಯಾನಂದ್, ಚಿಕ್ಕರಂಗಯ್ಯ, ಪದ್ಮವತಿ ಶಿಕ್ಷಕರಾದ ಇಂದುಮತಿ, ಬಸವರಾಜು, ರವಿಕುಮಾರ್, ಮುಖಂಡರಾದ ಮಹೇಶ್, ಮಂಜುನಾಥ್, ಅಂಜೀನಪ್ಪ, ಕಮಲಮ್ಮ, ನಾಗರಾಜು ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್ ಕೊರಟಗೆರೆ