ಎಚ್.ಡಿ. ಕೋಟೆ-ನಾಲ್ಕು-ಜನ-ಜೀತಮುಕ್ತರಿಗೆ-ಬಿಡುಗಡೆ-ಪತ್ರಇಂದು ಹುಣಸೂರು ಉಪ ವಿಭಾಗಧಿಕಾರಿ ಕಛೇರಿಯಲ್ಲಿ ನಡೆದ ಉಪವಿಭಾಗ ಮಟ್ಟದ ಜೀತ ಪದ್ಧತಿ ಜಾಗೃತಿ ಸಮಿತಿ ಸಭೆಯಲ್ಲಿ ಎಚ್.ಡಿ. ಕೋಟೆ ನಾಲ್ಕು ಮಂದಿಗೆ ಜೀತ ವಿಮುಕ್ತಿ ಬಿಡುಗಡೆ ಪತ್ರ ನೀಡಲಾಯಿತು.
ಉಪ ವಿಭಾಗಾಧಿಕಾರಿ ಎಚ್, ವಿ, ವಿಜಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಉಮೇಶ್. ಬಿ.ನೂರಲಕುಪ್ಪೆ ಮಾತಾನಾಡಿ, 2014 ರಿಂದ ಜೀತದಿಂದ ಬಿಡುಗಡೆಯಾದ ಜೀತ ಮುಕ್ತರಿಗೆ ಸಮಗ್ರ ಮತ್ತು ಶಾಶ್ವತ ಪುನರ್ ವಸತಿ ಯೋಜನೆಯಡಿ ಭೂಮಿ ಕೊಡುವಂತೆ ಒತ್ತಾಯಿಸಿ ಹಂಪಾಪುರ ಹೋಬಳಿ ಕೂಹಳ ಸರ್ವೇ ನಂಬರ್ ನಲ್ಲಿ ಜೀತಮುಕ್ತರು ಮತ್ತು ಕೃಷಿಕಾರ್ಮಿಕರು ಸುಮಾರು 102 ಜನರು 60/70 ವರ್ಷಗಳಿಂದಲೂ ವ್ಯವಸಾಯ ಮಾಡುತ್ತಿದ್ದು ಈ ಭೂಮಿಯೂ ಅರಣ್ಯ ಇಲಾಖೆಯ ಟ್ರಂಚ್ ನಿಂದ ಹೊರಗಿದ್ದು ಯಾವುದೇ ಕುರುಹು ಇಲ್ಲದಿದ್ದರೂ ಇದು ಅರಣ್ಯ ಎಂದು ಆ ಜನರಿಗೆ ಸಾಗುವಳಿ ನೀಡದೆ ತೊಂದರೆ ನೀಡಲಾಗುತ್ತಿದೆ.
ಆದ್ದರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಈ ಕೂಡಲೇ ಜೀತದಾಳು ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಮತ್ತು 2016 ನೇ ಸಾಲಿನಿಂದಲೂ ನಮ್ಮ ಉಪವಿಭಾಗದ ಯಾವುದೇ ತಾಲೋಕುಗಳಲ್ಲಿ ಜೀತ ಸರ್ವೆ ಆಗಿರುವುದಿಲ್ಲ ಅದ್ದರಿಂದ ಈ ವರ್ಷದಿಂದ ತಾಲೋಕು ವಾರು ಎಲ್ಲಾ ಅಧಿಕಾರಿಗಳಿಗೆ ಜಾಗೃತಿ ಕಾರ್ಯಗಾರ ಮಾಡಿ ಕಾನೂನು ಅರಿವು ಮೂಡಿಸಿ ನಂತರ ಜೀತ ಸರ್ವೆಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬಸವರಾಜ್ ಮಾತನಾಡಿ, ಪಡುಕೋಟೆ ಕಾವಲು ಸರ್ವೇ ನಂಬರ್ 1ರಲ್ಲಿ ಮತ್ತು ಚಿಕ್ಕೆರೆಯೂರು ಗ್ರಾಮದಲ್ಲಿ ಭೂಮಾಲೀಕರು ಮತ್ತು ಪ್ರಭಾವಿ ವ್ಯಕ್ತಿಗಳು ಹತ್ತಿಪ್ಪತ್ತು ಎಕ್ರೆ ಜಮೀನನ್ನು ಖರೀದಿಸಿ ನೂರಾರು ಎಕ್ಕರೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು ಆ ಭೂಮಿಯ ಒತ್ತುವರಿಯನ್ನು ಬಿಡಿಸಿ ಜೀತ ಮುಕ್ತರಿಗೆ ಹಂಚಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಸಿದ ಎಸಿ ವಿಜಯ್ ಕುಮಾರ್ ರವರು, ತಹಶಿಲ್ದಾರ್ ರವರಿಗೆ ಸೂಚಿಸಿ ತಕ್ಷಣವೇ ಕೋಹಳ ಸರ್ವೆ ಜಮೀನನ್ನು ಪರಿಶೀಲಿಸಿ ಫಾಂ 53 ರಲ್ಲಿ ಹಾಕಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ವರದಿ ಮಾಡಿ ಅಕ್ರಮ ಸಕ್ರಮ ಸಮಿತಿ ಸಭೆ ಮುಂದೆ ತರುವಂತೆ ತಿಳಿಸಿದರು. ಹಾಗೂ ಪಡುಕೋಟೆ ಭೂಮಿಯನ್ನ ಸರ್ವೆ ಮಾಡಿಸಿ ಕಾನೂನು ರೀತ್ಯಾ ಪರಿಶೀಲನೆ ಮಾಡಿಸಿ ಖಂಡಿತವಾಗಿ ಜೀತಮುಕ್ತರಿಗೆ ಹಂಚುವ ಕೆಲಸ ಮಾಡೋಣ ಎಂದು ಸೂಚಿಸಿದರು.
ನಂತರ ನೇಪಾಳ ಮೂಲದ ನಿರ್ಮಲ ಕುಟುಂಬವು ಎಚ್ ಡಿ ಕೋಟೆ ತಾಲೂಕಿನ ಕೈಲಾಸಪುರ ಗ್ರಾಮದಲ್ಲಿ ಅಮಾನುಷವಾಗಿ ಜೀತ ಮಾಡಿಸಿಕೊಳ್ಳುತ್ತಿದ್ದಾಗ ತಾಲೋಕು ಆಡಳಿತ ವತಿಯಿಂದ ಜೀತ ಬಿಡಿಸಿ ಕೊಡಗಿನಲ್ಲಿ ಕೆಲಸ ಮಾಡುತ್ತಿದ್ದ ಗಂಡನನ್ನ ಕರೆಸಿ ಅವನ ಜೊತೆ ಕಳಿಸಲಾಗಿತ್ತು. ಆದರೆ ಕೆಲವು ತಿಂಗಳ ನಂತರ ನಿರ್ಮಲ ಮರಣ ಹೊಂದಿದ್ದು ಜೀತ ಪ್ರಕರಣ ಮುಚ್ಚಿಹಾಕಲು ನಿರ್ಮಲಾಳನ್ನು ಸಾಯಿಸಿರಬಹುದು ಎಂಬ ಗುಮಾನಿ ಇರುವುದರಿಂದ ಇದರ ಬಗ್ಗೆ ತನಿಖೆ ನಡೆಯಬೇಕೆಂದು ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಎಸಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ಮಾಹಿತಿ ಸಂಗ್ರಹಿಸಲು ತಹಶಿಲ್ದಾರವರಿಗೆ ಸೂಚಿಸಿದರು.

ಸಭೆಯಲ್ಲಿ ತಹಶಿಲ್ದಾರ್ ಗಳಾದ ಶ್ರೀನಿವಾಸ್. ಮೋಹನ್ ಕುಮಾರಿ. ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಪೋಲೀಸ್ ಇಲಾಖೆ ಅಧಿಕಾರಿಗಳು, ಭಾಗವಹಿಸಿದರು.
-ಶಿವಕುಮಾರ, ಕೋಟೆ