ಮಂಡ್ಯ – ತಾಲೂಕು ಹೊಳಲು ಗ್ರಾಮದ ಶ್ರೀ ಕಾಳಮ್ಮ ದೇವಿ ಹಬ್ಬ ಈ ದಿನ ಸಡಗರ ವೈಭವ ವಿಜೃಂಭಣೆಯಿಂದ ನಡೆಯಿತು.
ಮಹಿಳೆಯರು ಮತ್ತು ಮಕ್ಕಳು ತಂಬಿಟ್ಟಿನ ಆರತಿಯನ್ನು ಬಾಯಿ ಬೀಗದೊಂದಿಗೆ ಹೊಳಲು ಗ್ರಾಮದ ಶ್ರೀ ದೊಡ್ಡಮ್ಮತಾಯಿ ದೇವಸ್ಥಾನದ ಆವರಣದಿಂದ ಕಾಳಮ್ಮದೇವರಿಗೆ ಹೊಂಬಾಳೆ ಮಾಡಿಕೊಂಡು ನಂತರ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಕಾಳಮ್ಮ ದೇವಿಯ ಗುಡಿಯವರೆಗೆ ಕಾಲ್ನಡಿಗೆಯಲ್ಲಿ ತಂಬಿಟ್ಟಿನ ಆರತಿಯನ್ನು ತೆಗೆದುಕೊಂಡು ಮಹಿಳೆಯರು ದೇವರಿಗೆ ಆರತಿ ಸಲ್ಲಿಸಿ ವಿಶೇಷ ಪೂಜೆ ಮಾಡಿದರು.
ದೇವರಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ ನಂತರ ಮಹಾಮಂಗಳಾರತಿ ಮಾಡಿ ,ಪ್ರಸಾದ ವಿನಿಯೋಗ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಾರಾಯಣ, ಎಚ್. ಡಿ. ರಮೇಶ್, ಸಿದ್ದಯ್ಯ, ಡಿ. ಶಿವಲಿಂಗ, ಕೃಷ್ಣ, ಎಚ್. ಬಿ.ಲಿಂಗಪ್ಪ, ರಾಮಸಿದ್ದಯ್ಯ, ಶಿವ, ಪ್ರದೀಪ್ ಕುಮಾರ್, ಶಿವರಾಮು, ಕರಿಯಪ್ಪ, ದೇವಸ್ಥಾನದ ಅರ್ಚಕರಾದ ಎಚ್.ಸಿ. ಶಂಕರಪ್ಪ, ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
-ಕೆ.ಪಿ. ಕುಮಾರ್, ಹೊಳಲು