ಚಿಕ್ಕಮಗಳೂರು: ಸಹಕಾರಿ ಕ್ಷೇತ್ರವು ಜನಸಾಮಾನ್ಯರ ನಂಬಿಕೆ, ವಿಶ್ವಾಸಕ್ಕೆ ಅರ್ಹ ವಾಗಿರಬೇಕು. ಸೊಸೈಟಿ ವಹಿವಾಟಿನಲ್ಲಿ ನಿರ್ದೇಶಕರು ಸೇವಾಗುಣ ಹಾಗೂ ನೇರ ನುಡಿಯನ್ನು ಹೊಂದಿರ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ಧ ಸಹಕಾರ ಸಂಘಗಳಲ್ಲಿ ವಿಜೇತರಾದವ ರಿಗೆ ಸನ್ಮಾಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ 116 ಸಹಕಾರ ಸಂಘಗಳ ಪೈಕಿ 96 ಸ್ಥಾನ ಗಳನ್ನು ಎನ್‌ಡಿಎ ನೇತೃತ್ವದಲ್ಲಿ ಅಧಿಕಾರ ಪಡೆದುಕೊಂಡು ಮುನ್ನೆಡೆ ಸಾಧಿಸಿದೆ. ಈ ವಿಜಯ ಮುಂದಿನ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ನಾಂದಿಯಾಗಲಿದೆ ಎಂದು ತಿಳಿಸಿದರು.
ಸಹಕಾರ ಸಂಘಗಳು ರೈತರ ಶ್ರೇಯೋಭಿವೃದ್ದಿಗೆ ದುಡಿಯುವ ನಿಟ್ಟಿನಲ್ಲಿ ಪರಸ್ಪರ ಗಟ್ಟಿಯಾಗಬೇಕು. ತಪ್ಪು ತಿಳುವಳಿಕೆ ದೂರವಾಗಿಸಿ ಜನರಸೇವೆಗೆ ಸದಸ್ಯರುಗಳು ಮುಂದಾದರೆ ಸಂಘವು ಉನ್ನತ ಹಾದಿಯಲ್ಲಿ ಸಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಪ್ರತಿ ಸದಸ್ಯರುಗಳಿಗೆ ಪರಸ್ಪರ ಹೊಂದಾಣಿಕೆ ಅತ್ಯಗತ್ಯ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಎಸ್.ಎಲ್.ಧರ್ಮೇಗೌಡರು ದುರೀಣರು. ಸಹಕಾರಿ ರಂಗಕ್ಕೆ ಹಲವಾರು ಕೊಡು ಗೆ ನೀಡಿದ್ದಾರೆ ಎಂದ ಅವರು ಹಣಕಾಸಿನಿಂದ ಕೂಡಿರುವ ಸಂಸ್ಥೆ ಕೆಡಬಾರದು. ಎಚ್ಚರದಿಂದ ಕಾರ್ಯ ನಿರ್ವಹಿಸುವ ಮಹತ್ತರ ಜವಾಬ್ದಾರಿ ಆಡಳಿತ ಮಂಡಳಿ ಮತ್ತು ಸದಸ್ಯರುಗಳ ಮೇಲಿದೆ ಎಂದು ಹೇಳಿದರು.

ಸೊಸೈಟಿಗಳ ಮೇಲೆ ನಂಬಿಕೆಯಿಟ್ಟು ಜನತೆ ಹಣವನ್ನು ಹೂಡುತ್ತಾರೆ. ಸಣ್ಣಪುಟ್ಟ ಆಸೆಗಳಿಗೆ ಬಲಿಬಿದ್ದು ಪೂರ್ವಿಕರು ಕಟ್ಟಿಬೆಳೆಸಿದ ಸಂಸ್ಥೆಗಳನ್ನು ಹಾಳುಗೆಡಬಾರದು. ವಾರಕ್ಕೊಮ್ಮೆ ಲೆಕ್ಕಪರಿಷ್ಕರಣೆ ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತಿರಬೇಕು ಎಂದು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಸೊಸೈಟಿಗಳಲ್ಲಿ ಅಧಿಕಾರ ಸಿಕ್ಕರು ಅಥವಾ ಸಿಕ್ಕದಿದ್ದರೂ ಹೊಂದಾಣಿಕೆಗೆ ಕೊರತೆಯಿರಬಾರದು. ಭವಿಷ್ಯದಲ್ಲಿ ಈ ಹೊಂದಾಣಿಕೆ ಅನೇಕ ಚು ನಾವಣೆಗಳನ್ನು ಎದುರಿಸುವ ಹಿನ್ನೆಲೆ ಒಗ್ಗಟ್ಟಿನಿಂದ ಕೂಡಿರಬೇಕು. ಯಾವುದೇ ಚುನಾವಣೆಗಳಲ್ಲಿ ಪಕ್ಷ ಸೂ ಚಿಸುವ ಅಭ್ಯರ್ಥಿಗಳ ಪರವಾಗಿ ಒಪ್ಪಿ ಸಂಘಟನೆಯಲ್ಲಿ ತೊಡಗಬೇಕು ಎಂದರು.
ರಾಜ್ಯಸರ್ಕಾರ ಕಳೆದ ಬಜೆಟ್‌ನಲ್ಲಿ ರೈತರಿಗೆ ಶೂನ್ಯ ಬಡ್ಡಿದರಲ್ಲಿ ೫ ಲಕ್ಷ ಘೋಷಿಸಿತ್ತು. ಆದರೆ ಕೇವಲ 3 ಲಕ್ಷವನ್ನು ಮಾತ್ರ ನೀಡಿವೆ. ಮದ್ಯಮ ಹಾಗೂ ದೀರ್ಘಾವಧಿ ಸಾಲ ೧೫ ಲಕ್ಷ ಏರಿಸಿದ್ದನ್ನು ಕೊಡಲು ಸಾಧ್ಯ ವಾಗಿಲ್ಲ. ಇಷ್ಟೆಲ್ಲಾ ಗಮನಿಸಿದರೆ ರಾಜ್ಯಸರ್ಕಾರ ಕೇವಲ ಸುಳ್ಳಿನ ಬಜೆಟ್ ಘೋಷಿಸಿ ಜನತೆಗೆ ಮಂಕುಬೂದಿ ಎರಚುತ್ತಿದೆ ಎಂದು ದೂಷಿಸಿದರು.

ರೈತರಿಗೆ ಕೃಷಿ ಬದುಕು ಕಷ್ಟಸಾಧ್ಯವಾದರೂ ಉಳುವ ಭೂಮಿಯನ್ನು ಕೈಬಿಟ್ಟಿಲ್ಲ. ಹೀಗಾಗಿ ಡಿಸಿಸಿ ಬ್ಯಾಂಕ್ ಸಾಲಸೌಲಭ್ಯ ಕಲ್ಪಿಸಿ ಸಹಕರಿಸಬೇಕು. ಗ್ರಾಮಗಳಿಗೆ ಸಹಕಾರ ಸಂಘಗಳು ಜೀವಾಳ. ರೈತರ ಬೆವರಿನ ಹನಿ ಕೂಡಿರುವ ಸೊಸೈಟಿಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಆಡಳಿತ ಮಂಡಳಿಯದು. ತಾರ ತಮ್ಯವಿ ಲ್ಲದೇ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ ಸೊಸೈಟಿಗಳ ಅಭೂತಪೂರ್ವ ಗೆಲುವು ಮುಂದೆ ಎದುರಾಗುವ ಚುನಾವಣೆಗಳಿಗೆ ಮುನ್ಸೂಚನೆಯಾಗಿದೆ. ಆಡಳಿತ ಪಡೆದಿರುವ ಎನ್‌ಡಿಎ ಸದಸ್ಯರು ಗಳು ಮುಂದಿನ ಚುನಾವಣೆಗೆ ಪಕ್ಷಕ್ಕಾಗಿ ದುಡಿಯಬೇಕು ಎಂದ ಅವರು ಸೊಸೈಟಿಗಳ ಉತ್ತಮ ಕೆಲಸಗಳೇ ಪಕ್ಷಕ್ಕೆ ಒಳಿತಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮಾಂತರ ಮಂಡಳ ಅಧ್ಯಕ್ಷ ವಿಜಯ್‌ಕುಮಾರ್ ತಾಲ್ಲೂಕಿನಲ್ಲಿ 32 ಸಹಕಾರ ಸಂಘಗಳ ಪೈಕಿ28 ಸಂಘಗಳು ಎನ್‌ಡಿಎ ನೇತೃತ್ವದಲ್ಲಿ ಅಧಿಕಾರ ಪಡೆದಿದೆ. ಸದಸ್ಯರುಗಳು ನಿರಂತರ ರೈತರ ಜೊತೆ ಒಡನಾಟ, ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಜಮೀನುಗಳಲ್ಲಿ ಪಂಪ್ ಸೆಟ್ ಅಥವಾ ಟಿಸಿಗಳ ಸಮಸ್ಯೆ ಉದ್ಬವಿಸಿದರೆ ಶೀಘ್ರವೇ ಬಗೆಹರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮುಗುಳುವಳ್ಳಿ ನಿರಂಜನ್, ಪಿಸಿ ಎಲ್‌ಡಿ ಬ್ಯಾಂಕ್ ನಿರ್ದೇಶಕ ಈಶ್ವರಹಳ್ಳಿ ಮಹೇಶ್, ಬೀಕನಹಳ್ಳಿ ಸೊಸೈಟಿ ಅಧ್ಯಕ್ಷ ಸೋಮಶೇಖರ್, ತಾ. ಪಂ. ಮಾಜಿ ಸದಸ್ಯ ಆನಂದ್‌ನಾಯ್ಕ್, ಕಡೂರು ಎಪಿಎಂಸಿ ಮಾಜಿ ಅಧ್ಯಕ್ಷ ರವಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಜೀವ್, ಪ್ರಕಾಶ್, ಮುಖಂಡರಾದ ಬಸವರಾಜ್ ಮತ್ತಿತರರಿದ್ದರು.
- ಸುರೇಶ್ ಆರ್.